
ಗಂಗಾವತಿಯ ಹೇಮರೆಡ್ಡಿ ಮಲ್ಲಮ್ಮ ವೃತ್ತದಲ್ಲಿ
ಶ್ರೀ ವೇಮನರ ೬೧೪ನೇ ಜಯಂತ್ಯೋತ್ಸವ
ಆಚರಣೆ

Sri Vemana's 614th Jayanthyotsava Celebrations at Hemareddy Mallamma Circle, Gangavathi

ಗಂಗಾವತಿ: ನಗರದ ಕನಕಗಿರಿ ರಸ್ತೆಯಲ್ಲಿರುವ ಹೇಮರೆಡ್ಡಿ
ಮಲ್ಲಮ್ಮ ವೃತ್ತದಲ್ಲಿ ದೈವಜ್ಞಾನಿ ಶ್ರೀ ವೇಮನರ ೬೧೪ನೇ
ಜಯಂತ್ಯೋತ್ಸವ ನೇರವೇರಿಸಲಾಯಿತು.
ಈ ಸಂದರ್ಭದಲ್ಲಿ ರೆಡ್ಡಿ ಸಮಾಜದ ಜಿಲ್ಲಾಧ್ಯಕ್ಷರಾದ ಎಸ್ ಜಗದೀಶಪ್ಪ,
ಮಾಜಿ ಶಾಸಕರಾದ ಜಿ.ವೀರಪ್ಪ, ಮಾಜಿ ಕಾಡಾ ಅಧ್ಯಕ್ಷರಾದ ಹೆಚ್. ಗಿರೇಗೌಡ
ವಕೀಲರು, ಬಿಜೆಪಿ ಮಾಜಿ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ವಿರುಪಾಕ್ಷಪ್ಪ
ಸಿಂಗನಾಳ್, ಮಾಜಿ ನಗರಸಭಾ ಸದಸ್ಯರಾದ ಮನೋಹರಗೌಡ
ಹೇರೂರು, ತಹಶೀಲ್ದಾರ ಗ್ರೇಡ್-೨ ಆದ ಮಹಾಂತಗೌಡ, ಮಾಜಿ ಜಿಲ್ಲಾ
ಪಂಚಾಯಿತಿ ಸದಸ್ಯರಾದ ಅಮರೇಶ್ ಗೋನಾಳ್, ಜಡಿ ವೀರನಗೌಡ, ಬಸವರಾಜ
ಕೊಟ್ನೇಕಲ್, ಚನ್ನಪ್ಪ ಮಳಗಿ ವಕೀಲರು, ವಿಶ್ವನಾಥ ಮಾಲಿಪಾಟೀಲ್,
ರಾಜೇಶ್ ರೆಡ್ಡಿ, ಮಹಾಂತೇಶ್ ಹೇರೂರು, ಮಲ್ಲಪ್ಪ ಬಸಪಟ್ಟಣ, ಚನ್ನಬಸವ
ಹೇರೂರು, ಲಿಂಗನಗೌಡ ಹೇರೂರು, ಬಸವಂತ ಪಾಟೀಲ್, ಯರಿಸ್ವಾಮಿ ಗೌಡ,
ರಮೇಶ್ ಕಾಡದ್, ಪರಿಸರ ಇಲಾಖೆ ಅಧಿಕಾರಿ ಶೋಭಾ ತಳವಾರ್, ಸಮಾಜದ
ಮುಖಂಡರುಗಳು, ಸಮಾಜದ ಯುವಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರೆಡ್ಡಿ ಜಿಲ್ಲಾ ಯುವ ಘಟಕ ಅಧ್ಯಕ್ಷರಾದ
ಉಮೇಶ ಸಿಂಗನಾಳರವರು ಗಂಗಾವತಿ ತಾಲೂಕು ಸಂಚಾಲಕರನ್ನಾಗಿ
ವಿಜಯಕುಮಾರ ಗದ್ದಿ ಅವರನ್ನು ಆಯ್ಕೆ ಮಾಡಿ ಆದೇಶ ಪತ್ರ ನೀಡಿ, ರೆಡ್ಡಿ
ಸಂಘದ ಸಮಾಜದ ಹೇಳಿಗೆಗಾಗಿ ಶ್ರಮಿಸುವಂತೆ ತಿಳಿಸಿದರು.
ಮಾಹಿತಿಗಾಗಿ
ವಿಜಯಕುಮಾರ ಗದ್ದಿ




