
ಶಿಕ್ಷಣ ವಿಭಾಗದಿಂದ ಆಯೋಜಿಸಿದ್ದ ಸುಗ್ಗಿ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರೊ. ಬಿ.ಕೆ. ರವಿ ಅಭಿಮತ

ಜನಪದ ಸಂಸ್ಕಾರದಿಂದ ಮಾತ್ರ ಸಂಸ್ಕೃತಿ ಉಳಿಯಲಿದೆ: ಕುಲಪತಿ ಪ್ರೊ. ಬಿ.ಕೆ. ರವಿ
Culture will survive only through folk traditions: Vice Chancellor Prof. B.K. Ravi

ಬೆಂಗಳೂರು: ಜ.19: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಶಿಕ್ಷಣ ವಿಭಾಗದಿಂದ ಆಯೋಜಿಸಿದ್ದ ಸುಗ್ಗಿ ಸಂಭ್ರಮ ಕಾರ್ಯಕ್ರಮವನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ (ಕೋಲಾರ) ಕುಲಪತಿಗಳಾದ ಪ್ರೊ. ಡಾ. ಬಿ.ಕೆ. ರವಿ ಅವರು ಚಾಲನೆ ನೀಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಬಹುಸಂಖ್ಯಾತ ಹಳ್ಳಿಗಾಡಿನಿಂದ ಬಂದವರು, ವಿಶೇಷವಾಗಿ ಜನಪದ ಸಂಸ್ಕಾರದಿಂದ ಮಾತ್ರ ಸಂಸ್ಕೃತಿ ಉಳಿಸಬೇಕಿದೆ. ಶ್ರೇಣೀಕೃತ ನಮ್ಮ ಸಮಾಜವನ್ನೇ ಸಾಕಷ್ಟು ಪ್ರಮಾಣದಲ್ಲಿ ತಿದ್ದಿದವರು ಅದು ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಮಾತ್ರ ಎಂದರು.
ಇಂದಿಗೂ ಕೂಡ ಪರಂಪರೆತೆಯನ್ನು ಉಳಿಸಿ ಬೆಳೆಸಿಕೊಂಡು ಸುಗ್ಗಿ ಸಂಭ್ರಮದ ಹೆಸರಿನಲ್ಲಿ ಇಂದು ಕಾಣಬಹುದು. ಪ್ರಸ್ತುತ ರಾಷ್ಟ್ರ ಉಳಿಯಬೇಕು ಅಂದರೆ ಅದು ಶಿಕ್ಷಕರಿಂದ ಮಾತ್ರ ಸಾಧ್ಯ, ಪ್ರತಿಯೊಬ್ಬರೂ ಕೂಡ ತಮ್ಮ ತಮ್ಮ ಜೀವನದಲ್ಲಿ ಶ್ರದ್ಧೆ, ಭಕ್ತಿ, ಗುರು ತೋರಿದ ಮಾರ್ಗದ ಮೂಲಕ ಪ್ರತಿಭೆಯಿಂದ ಮಾತ್ರ ಮುಂದೆ ಬರಲು ಸಾಧ್ಯ, ಮೇಷ್ಟ್ರು ಅಂದರೆ ಅದು ವಿಶೇಷವಾಗಿ ಗುರುಗಳನ್ನು ಕಾಣಬೇಕಾದರೆ ಅದು ಶಿಕ್ಷಣ ವಿಭಾಗದಿಂದ ಮಾತ್ರ ಸಾಧ್ಯವಿದೆ, ನಾವು ಯಾವ ಸಮಯದಲ್ಲಿ ತಂತ್ರಜ್ಞಾನವನ್ನು ಎಷ್ಟು ಪ್ರಮಾಣದಲ್ಲಿ ಬಳಕೆ ಮಾಡಬೇಕು, ಅದನ್ನು ಎಷ್ಟು ಸಿಮೀತ ಮಾಡಬೇಕು ಎಂಬುದನ್ನು ಮತ್ತಿತರ ವಿಷಯಗಳ ತಿಳಿಸಿದರು.
ನಂತರದಲ್ಲಿ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಯೋಜಕರಾದ ಡಾ. ವಾಣಿಶ್ರೀ ಕೊಪ್ಪದರವರು, ಡಾ. ಎಂ.ಸಿ. ಎರ್ರಿಸ್ವಾಮಿರವರು ಇದೇ ವೇಳೆಯಲ್ಲಿ ಮಾತನಾಡಿದರು. ಕೊನೆಯಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಾಣಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಇದೇ ಸಂದರ್ಭದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ.ಕೆ.ರವಿ, ಕಲಾ ನಿಕಾಯದ ಡೀನ್, ಹಿರಿಯ ಪ್ರಾಧ್ಯಾಪಕ ಪ್ರೊ. ಸಿ. ಸೋಮಶೇಖರ್, ಶಿಕ್ಷಣ ನಿಕಾಯದ ಡೀನ್ ಪ್ರೊ. ಕೃಷ್ಣಸ್ವಾಮಿ ಪಿ.ಸಿ, ಶಿಕ್ಷಣ ವಿಭಾಗದ ಸಂಯೋಜಕರಾದ ಡಾ. ವಾಣಿಶ್ರೀ ಕೊಪ್ಪದ, ಡಾ. ಎಂ.ಸಿ. ಎರ್ರಿಸ್ವಾಮಿ, ಪ್ರೊ. ನಾಗರತ್ನಮ್ಮ, ಪ್ರೊ. ಪಾರ್ವತಮ್ಮ, ಪ್ರೊ. ಸುಧಾ, ಡಾ. ಡಿ.ಕೆ.ಪ್ರಭಾಕರ್, ಸಿಬ್ಬಂದಿ ವರ್ಗದವರು, ಸಂಶೋಧನಾ ವಿದ್ಯಾರ್ಥಿಗಳು, ಪ್ರಥಮ – ದ್ವಿತೀಯ ವರ್ಷದ ಪ್ರಶಿಕ್ಷಾಣಾರ್ಥಿಗಳು ಮತ್ತಿತರರು ಪಾಲ್ಗೊಂಡಿದ್ದರು.
ಪೋಟೋ ಕ್ಯಾಪ್ಷನ್ 1:
ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಣ ವಿಭಾಗದಲ್ಲಿ ಆಯೋಜಿಸಿದ್ದ ಸುಗ್ಗಿ ಸಂಭ್ರಮ ಕಾರ್ಯಕ್ರಮವನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ (ಕೋಲಾರ) ಕುಲಪತಿಗಳಾದ ಪ್ರೊ. ಬಿ.ಕೆ. ರವಿ, ವಿವಿಧ ಪ್ರಾಧ್ಯಾಪಕರು ಚಾಲನೆ ನೀಡಿದರು.
ಫೋಟೋ ಕ್ಯಾಪ್ಷನ್ 2:
ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಣ ವಿಭಾಗದಿಂದ ಆಯೋಜಿಸಿದ್ದ ಸುಗ್ಗಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ (ಕೋಲಾರ) ಕುಲಪತಿಗಳಾದ ಪ್ರೊ. ಬಿ.ಕೆ. ರವಿ ರವರನ್ನು ವಿವಿಧ ಪ್ರಾಧ್ಯಾಪಕರು ಸನ್ಮಾನಿಸಿದರು.




