
ಕಾಸರಗೋಡು ಕನ್ನಡ ಮಾಧ್ಯಮ ಶಾಲೆಗಳಲ್ಲಿ
ಮಲಯಾಳಂ ಕಡ್ಡಾಯಗೊಳಿಸಿರುವ
ಕೇರಳ ಸರ್ಕಾರ ವಿರುದ್ಧ ಖಂಡನೆ: ಮಂಜುನಾಥ
ಪತ್ತಾರ


ಗಂಗಾವತಿ: ಶೇ ೯೦ ರಷ್ಟು ಕನ್ನಡಿಗರು ಇರುವ ಕಾಸರಗೋಡು ಭಾಗದಲ್ಲಿ
ಕೇರಳ ಸರ್ಕಾರ ಅಲ್ಲಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ
ಭಾಷೆಯಾಗಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸುವ
ಮಸೂದೆಯನ್ನು ಜಾರಿ ಮಾಡಲು ಮುಂದಾಗಿರುವುದು ತೀವ್ರ ಖಂಡನೀಯ
ಎAದು ಕನ್ನಡಸೇನೆ ಸಂಘಟನೆಯ ಗಂಗಾವತಿ ತಾಲೂಕ ಅಧ್ಯಕ್ಷರಾದ
ಮಂಜುನಾಥ ಪತ್ತಾರ ಕೇರಳ ಸರ್ಕಾರದ ವಿರುದ್ಧ ಆಕ್ರೋಶ
ವ್ಯಕ್ತಪಡಿಸಿದರು.
ಅವರು ಜನೇವರಿ-೧೩ ರಂದು ಕೇರಳ ಸರ್ಕಾರದ ನಡೆಯನ್ನು ಖಂಡಿಸಿ,
ಕನ್ನಡಿಗರು ಬಹುಸಂಖ್ಯಾತರಿರುವ ಕಾಸರಗೋಡುನಲ್ಲಿ ಕನ್ನಡ ಭಾಷೆಗೆ
ಆಧ್ಯತೆ ನೀಡಲು ಒತ್ತಾಯಿಸಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ
ಮಾತನಾಡಿದರು. ಭಾರತದ ಸಂವಿಧಾನದದಲ್ಲಿ ಭಾಷೆ ಉಳಿಸಲು ಕಾಯ್ದೆ
ಮಾಡಿಕೊಳ್ಳಬಹುದು. ಅದರಂತೆ ಕರ್ನಾಟಕದಲ್ಲೂ ಕಾಯ್ದೆ ಇದೆ. ಆದರೆ ಸದರಿ
ಕಾಯ್ದೆ ಅಲ್ಲಿನ ಭಾಷಿಕ ಅಲ್ಪಸಂಖ್ಯಾತರನ್ನ ಹೇಗೆ ಸಂರಕ್ಷಿಸುತ್ತದೆ
ಎನ್ನುವುದು ಮುಖ್ಯವಾಗುತ್ತದೆ. ಕಾಸರಗೋಡಿನಲ್ಲಿ ೯೦% ರಷ್ಟು ಜನ
ಕನ್ನಡ ಮಾತನಾಡುತ್ತಿದ್ದರೂ ಅದು ಕೇರಳಕ್ಕೆ ಸೇರಿದೆ. ಕಾಸರಗೋಡಿನಲ್ಲಿ
ಸುಮಾರು ೮ ಲಕ್ಷ ಕನ್ನಡಿಗರು ಇರುತ್ತಾರೆ. ಆದರೆ ಅಲ್ಲಿ ಮಲೆಯಾಳಂ
ಕಡ್ಡಾಯ ಮಾಡಲಾಗಿದೆ. ಆದರೆ ಭಾಷಾ ಕಾಯ್ದೆಯ ೬ನೇ ಅಧಿಸೂಚಿಯಲ್ಲಿ
ಭಾಷಿಕ ಅಲ್ಪಸಂಖ್ಯಾತರನ್ನು ಹೊರತುಪಡಿಸಬೇಕು. ಅವರನ್ನು ಹೊರತುಪಡಿಸಿ
ಕೇರಳ ಕಡ್ಡಾಯ ನಿಯಮ ಮಾಡಬೇಕು. ರಾಜ್ಯದ ನಡುವೆ ಬಿಕ್ಕಟ್ಟು
ಹೆಚ್ಚಾಗದಂತೆ ನಮ್ಮ ರಾಜ್ಯ ಸರ್ಕಾರ ಕಾರ್ಯನಿರ್ವಹಿಸಬೇಕು.
ಗಡಿಭಾಗದಲ್ಲಿರುವ ಕನ್ನಡಿಗ ಅಲ್ಪಸಂಖ್ಯಾತರ ಹಕ್ಕಿಗೆ ಧಕ್ಕೆಯಾಗದಂತೆ
ಜಾಗೃತಿವಹಿಸಬೇಕಿದೆ. ಈ ಬಗ್ಗೆ ರಾಜ್ಯ ಸರ್ಕಾರ ಭಾಷಾ ನೀತಿಯ ಬಗ್ಗೆ ವರದಿಯನ್ನು
ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ, ನಮ್ಮ ಮಾತೃ ಭಾಷೆಯಾದ ಕನ್ನಡವನ್ನು
ಎರಡನೇ ಭಾಷೆಯಾಗಿ ಸ್ವೀಕರಿಸುವ ಹಕ್ಕನ್ನು ಕಸಿದುಕೊಂಡು ಕನ್ನಡಿಗರಿಗೆ
ಅನ್ಯಾಯವೆಸಗುತ್ತಿದೆ. ಅಲ್ಪಸಂಖ್ಯಾತ ಭಾಷಿಕರಿಗೆ ಗೌರವ ಕೊಡುವ ಕೆಲಸ
ಆಗಬೇಕು. ಅಲ್ಪಸಂಖ್ಯಾತ ಭಾಷಿಕರನ್ನು ಹೊಂದಿರುವ ಪ್ರದೇಶಗಳನ್ನು
ಹೊರತುಪಡಿಸಿ ಈ ಬಿಲ್ ತಿದ್ದುಪಡಿ ಮಾಡಬೇಕು. ಇಲ್ಲದಿದ್ದರೆ, ಈ ಭಾಗದಲ್ಲಿ
ಕನ್ನಡವೇ ನಶಿಸಿ ಹೋಗಲಿದೆ. ಇದಕ್ಕೆ ನಮ್ಮ ರಾಜ್ಯ ಸರ್ಕಾರ ಅವಕಾಶ
ಮಾಡಿಕೊಡಬಾರದು. ಕೂಡಲೇ ಕೇರಳ ಸರ್ಕಾರ ಈ ಮಸೂದೆಯನ್ನು
ಹಿಂಪಡೆಯಬೇಕು. ಕರ್ನಾಟಕ ಸರ್ಕಾರದ ಗೌರವಾನ್ವಿತ ರಾಜ್ಯಪಾಲರು ಕರ್ನಾಟಕದ
ಗಡಿಭಾಗವಾದ ಕಾಸರಗೋಡುನಲ್ಲಿ ಮಲಯಾಳಂ ಭಾಷಾ ಹೇರಿಕೆ ಆಗದಂತೆ
ಕೇರಳ ಸರ್ಕಾರಕ್ಕೆ ಮನವರಿಕೆ ಮಾಡುವ ಮೂಲಕ ಕನ್ನಡ ಭಾಷೆಗೆ
ಯಾವುದೆ ಧಕ್ಕೆಯಾಗದಂತೆ ಕನ್ನಡಿಗರ ಹಕ್ಕನ್ನು ಉಳಿಸಿಕೊಡಬೇಕೆಂದು
ಮನವಿ ಮಾಡಲಾಗಿದೆ ಎಂದು ತಿಳಿಸಿ, ಒಂದು ವೇಳೆ ಕೇರಳ ಸರ್ಕಾರ ಈ
ಮಸೂದೆಯನ್ನು ಹಿಂಪಡೆಯದೇ ಇದ್ದಲ್ಲಿ ಕನ್ನಡಸೇನೆ ಸಂಘಟನೆಯು
ಕೇರಳ ಸರ್ಕಾರದ ವಿರುದ್ಧ ಉಗ್ರವಾದ ಹೋರಾಟವನ್ನು
ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕನ್ನಡಸೇನೆ ಸಂಘಟನೆಯ ಉತ್ತರ ಕರ್ನಾಟಕ
ಅಧ್ಯಕ್ಷರು ಹಾಗೂ ಕೊಪ್ಪಳ ಜಿಲ್ಲಾಧ್ಯಕ್ಷರಾದ ಚನ್ನಬಸವ ಜೇಕಿನ್, ಜಿಲ್ಲಾ
Á À À Á À Á Á Á À Á À Á À À À Á À À
ಉಪಾಧ್ಯಕ್ಷರಾದ ಆದಿಲ್ ಪಾಷಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಆನಂದ
ಸAಗಾಪುರ, ಜಿಲ್ಲಾ ಎಸ್.ಸಿ/ಎಸ್.ಟಿ ಘಟಕದ ಅಧ್ಯಕ್ಷರಾದ ಶಿವಪ್ಪ ವಿನೋಬನಗರ, ಜಿಲ್ಲಾ
ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಶಿವರಾಜ, ಪದಾಧಿಕಾರಿಗಳಾದ ಶರಣಪ್ಪ
ಕೇಸರಹಟ್ಟಿ, ರಮೇಶ್, ಶ್ರೀಧರ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.




