
ವಿವೇಕಾನಂದರ ಆದರ್ಶ, ಬೋಧನೆಗಳು ಯುವ ಸಮೂಹಕ್ಕೆ ಮಾದರಿ: ಎಂಎಲ್ಸಿ ಕೇಶವ ಪ್ರಸಾದ್ ಅಭಿಮತ

ವಿವೇಕಾನಂದರ ಜಯಂತೋತ್ಸವ ಆಚರಣೆ
ಕರ್ನಾಟಕ ಆರ್ಟ್ಸ್ ಫೌಂಡೇಶನ್ ವತಿಯಿಂದ 163ನೇ ವಿವೇಕಾನಂದ ಜಯಂತೋತ್ಸವ ಕಾರ್ಯಕ್ರಮ ಅಂಗವಾಗಿ ಮೂವರು ಸಾಧಕರಿಗೆ ವಿವೇಕಾನಂದ ಯುವ ಪ್ರಶಸ್ತಿ ಪುರಸ್ಕಾರ ಗೌರವ.
Karnataka Arts Foundation honours three achievers with Vivekananda Youth Award as part of 163rd Vivekananda Jayanthotsava programme.
ಬೆಂಗಳೂರು: ಜ.12: ಕರ್ನಾಟಕ ಆರ್ಟ್ಸ್ ಫೌಂಡೇಶನ್ ಆಯೋಜಿಸಿದ್ದ 163ನೇ ವಿವೇಕಾನಂದ ಜಯಂತೋತ್ಸವ ಕಾರ್ಯಕ್ರಮವನ್ನು ಬೆಂಗಳೂರು ನಗರ ಕೆಂಗೇರಿ ಉಪನಗರದ ರಾಮಕೃಷ್ಣ ಶಾಲೆಯಲ್ಲಿ ಸೋಮವಾರ ಸಂಜೆ ವಿಶೇಷ ಉಪನ್ಯಾಸ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೇಶವ ಪ್ರಸಾದ್ ರವರು ಸ್ವಾಮಿ ವಿವೇಕಾನಂದವರು ಬಾಲ್ಯ ಜೀವನದ ಘಟನೆಗಳು ತಿಳಿಸುತ್ತಾ ಇವರ ಆದರ್ಶ, ಬೋಧನೆಗಳು ಯುವ ಸಮೂಹಕ್ಕೆ ಮಾದರಿ ಇದ್ದಂತೆ ಎಂದರು. ಎಂದಿಗೂ ಕೂಡ ಅವರ ನಡೆ-ನುಡಿ, ಜೀವನದ ಪ್ರಸಂಗಗಳು ದಂತಕಥೆಗಳಾಗಿ ಬೆಳಗುತ್ತಿವೆ ಎಂದು ತಿಳಿಸಿದರು.
ವಿವೇಕಾನಂದರು ಆಯ್ಕೆ ಮಾಡಿಕೊಂಡಿದ್ದು, ಆರ್ಯ ಸಮಾಜದ ಅನುಯಾಯಿಗಳಾಗಿ, ಶ್ರೀ ರಾಮಕೃಷ್ಣ ಪರಮಹಂಸರವರ ಗುರುಗಳಾಗಿದ್ದರು. ಇವರು ಸರಳವಾಗಿ ಇದ್ದುಕೊಂಡು ಸನಾತನ ಧರ್ಮವನ್ನು ಪ್ರಪಂಚದ ಭೂಪಟದಲ್ಲಿ ಎಲ್ಲರೂ ನೋಡುವಂತೆ ಮಾಡಿದ್ದು ಇತಿಹಾಸವಾಗಿದೆ.
1893ರಲ್ಲಿ ನಡೆದ ಅಮೆರಿಕಾದ ಚಿಕಾಗೋ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ ಭಾರತದ ಗೌರವವನ್ನು ಮತ್ತಷ್ಟು ಪ್ರಪಂಚಕ್ಕೆ ಸ್ಥಾನಮಾನದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ.
ಅಂದಿನ ವಿವೇಕಾನಂದರು ಕರ್ನಾಟಕಕ್ಕೆ ಬಂದಾಗ ಮೈಸೂರು ಸಂಸ್ಥಾನದ ಮಹಾರಾಜರ ಬಳಿ ಬಂದಾಗ, ನಂತರದಲ್ಲಿ ಬೆಂಗಳೂರಿನ ಕಾಡು ಮಲ್ಲೇಶ್ವರ ದೇವಸ್ಥಾನ, ಬೆಳಗಾವಿ ಸಹ ಬಂದಿದ್ದು ಇದೊಂದು ಕರ್ನಾಟಕದ ಅಜರಾಮರ ಎಂದು ಹೇಳಿದರು. ಘನ ಉಪಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶ್ರೀ ಸುಧೀಂದ್ರ ಕುಮಾರ್ ರವರು ಮಾತನಾಡಿದರು.
ನಂತರದಲ್ಲಿ ಮಾತನಾಡಿದ ಅಂತಾರಾಷ್ಟ್ರೀಯ ಜನಪದ ಕಲಾವಿದ ಅಪ್ಪಗೆರೆ ತಿಮ್ಮರಾಜುರವರು ಈ ಮೂವರು ಸಾಧಕರು ಇಷ್ಟೇ ಸಾಧನೆಗೆ ಸೀಮಿತವಾಗದೇ ಇನ್ನೂ ಈ ನಮ್ಮ ದೇಶಕ್ಕೆ ಅಪಾರವಾದ ಕೊಡುಗೆ ತರಬೇಕೆಂದು ಆಶಿಸಿದರು.
ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ‘ವಿವೇಕಾನಂದ ಯುವ ಪ್ರಶಸ್ತಿಯನ್ನು ಕೆಂಗೇರಿ ಠಾಣೆಯ ಸಬ್ ಇನ್ಸ್ಪೆಕ್ಟರ್, ಶ್ರೀಮತಿ ಸುರೇಖ, ಟೊಯೋಟಾ ಕಿರ್ಲೋಸ್ಕರ್ ನೌಕರರ ಅಧ್ಯಕ್ಷ ಶ್ರೀ ದೀಪಕ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಸಂವಹನ ವಿಭಾಗದ ಸಂಶೋಧನಾ ವಿದ್ಯಾರ್ಥಿ (ಪಿಎಚ್.ಡಿ) ಶ್ರೀ ಈಶ್ವರ್ ಇವರುಗಳಿಗೆ ‘ವಿವೇಕಾನಂದ ಯುವ ಪ್ರಶಸ್ತಿ’ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಶ್ರೀ ಕೇಶವ ಪ್ರಸಾದ್, ಕಸಾಪ ಯಶವಂತಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶ್ರೀ ಸುಧೀಂದ್ರ ಕುಮಾರ್, ಅಂತಾರಾಷ್ಟ್ರೀಯ ಜನಪದ ಕಲಾವಿದ ಶ್ರೀ ಅಪ್ಪಗೆರೆ ತಿಮ್ಮರಾಜು, ರಾಜ್ಯ ಬಿಜೆಪಿ ವಕ್ತಾರರು ಮತ್ತು ರಾಷ್ಟ್ರೀಯ ಭೀಮ ಪಡೆ ರಾಜ್ಯಾಧ್ಯಕ್ಷರು, ಶ್ರೀ ಆತ್ಮಾನಂದ ಎಚ್. ಅಂದಾನಿ, ರಾಧಾಕೃಷ್ಣ ಶಾಲೆಯ ಚೇರ್ಮನ್ ಕೇಶವ ಮೂರ್ತಿ, ಕರ್ನಾಟಕ ಆರ್ಟ್ಸ್ ಫೌಂಡೇಶನ್ ಅಧ್ಯಕ್ಷರಾದ ಶ್ರೀಮತಿ ಸರೋಜಾ ಆತ್ಮಾನಂದರವರು, ಸದಸ್ಯರಾದ ಅರುಣ್ ಕುಮಾರ್, ಖಜಾಂಚಿ ದೀಪಕ್, ವಕೀಲ ಅರುಣ್ ಹಾನಗಲ್, ಬೆಂಗಳೂರು ವಿವಿಯ ನೌಕರ ಶ್ರೀ ಗೌರಿಶಂಕರ್, ಎಂಎಡ್ ಪ್ರಶಿಕ್ಷಾಣಾರ್ಥಿ ಬಸವರಾಜ ಪ್ರಭು, ತಾಯರೆಡ್ಡಿ, ಸತೀಶ್ ಕೆ, ಗಂಗಾರಾಜು ಎಂ, ರಾಧಾಕೃಷ್ಣ ಶಾಲೆಯ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು, ಎಲ್ಲಾ ಶಾಲೆಯ ವಿದ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಷನ್:
ಕರ್ನಾಟಕ ಆರ್ಟ್ಸ್ ಫೌಂಡೇಶನ್ ಆಯೋಜಿಸಿದ್ದ 163ನೇ ವಿವೇಕಾನಂದ ಜಯಂತೋತ್ಸವ ಅಂಗವಾಗಿ ಕೆಂಗೇರಿ ಠಾಣೆಯ ಪಿಎಸೈ ಶ್ರೀಮತಿ ಸುರೇಖ, ಟೊಯೋಟಾ ಕಿರ್ಲೋಸ್ಕರ್ ನೌಕರರ ಅಧ್ಯಕ್ಷ ಶ್ರೀ ದೀಪಕ್ ಮತ್ತು ಬೆಂಗಳೂರು ವಿವಿಯ ಸಂವಹನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಈಶ್ವರ್ ಇವರುಗಳಿಗೆ ವಿವೇಕಾನಂದ ಯುವ ಪ್ರಶಸ್ತಿ ಪುರಸ್ಕಾರ ನೀಡಿಲಾಯಿತು. ಇದೇ ವೇಳೆ ಎಂಎಲ್ಸಿ ಕೇಶವ ಪ್ರಸಾದ್, ಬಿಜೆಪಿ ವಕ್ತಾರ ಆತ್ಮಾನಂದ ಎಚ್. ಅಂದಾನಿ, ಅಪ್ಪಗೆರೆ ತಿಮ್ಮರಾಜು, ಸುಧೀಂದ್ರ ಕುಮಾರ್, ಅಧ್ಯಕ್ಷ ಶ್ರೀಮತಿ ಸರೋಜಾ ಆತ್ಮಾನಂದ ಇದ್ದರು.




