
ಶ್ರೀ ಸ್ವಾಮಿ ವಿವೇಕಾನಂದರ ಜಯಂತೋತ್ಸವದ ಅಂಗವಾಗಿ ಹಾಗೂ ಶಾಲಾ ವಾರ್ಷಿಕೋತ್ಸವದ ಅಂಗವಾಗಿ-ಆನಂದೋತ್ಸವ ವಿಶೇಷ ಕಾರ್ಯಕ್ರಮಗಳು.

Special programs for Anandotsava as part of the birth anniversary of Sri Swami Vivekananda and as part of the school anniversary.
ಗಂಗಾವತಿ.. 11ಸಮೀಪದ ಶ್ರೀ ರಾಮನಗರದ ಶ್ರೀ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರವಿವಾರ ದಿನದಂದು ವಿಶ್ವ ಮಾನವ ವೀರ ಸನ್ಯಾಸಿ ಶ್ರೀ ಸ್ವಾಮಿ ವಿವೇಕಾನಂದರ ಜಯಂತೋತ್ಸವದ ಪ್ರಯುಕ್ತ ಹಾಗೂ ಶಾಲೆಯ ವಾರ್ಷಿಕೋತ್ಸವ ಪ್ರಯುಕ್ತ ಪಾಲಕರ ಗಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಸಂಸ್ಥೆಯ ಕಾರ್ಯದರ್ಶಿ ಜಗನ್ನಾಥ್ ಆಲಂಪಲ್ಲಿ ಮಾತನಾಡಿ. ಯುವಶಕ್ತಿ ವಿದ್ಯುತ್ ಶಕ್ತಿಯಂತೆ ಸಾಮರ್ಥ್ಯವನ್ನು ಹೊಂದಿದ್ದು ದೇಶದ ಸರ್ವತೋಮುಖ ಅಭಿವೃದ್ಧಿಗೆ ಯುವಕರು ಕಂಕಣ ಬದ್ಧರಾಗಬೇಕಿದೆ ಈ ಹಿನ್ನೆಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಪ್ರಯುಕ್ತ ಪಾಲಕರಿಗಾಗಿ ಪುರುಷರು ಹಾಗೂ ಮಹಿಳಾ ಪಾಲಕರಿಗೆ ವಿಶೇಷ ಕ್ರೀಡೆ ಚಟುವಟಿಕೆಗಳನ್ನು ನಡೆಸುವುದರ ಮೂಲಕ ತಮ್ಮ ಮಕ್ಕಳ ಗುಣಮಟ್ಟದ ಶಿಕ್ಷಣದ ಬಗ್ಗೆ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ಸೋಮವಾರದಂದು ಶಾಲಾ ವಾರ್ಷಿಕೋತ್ಸವ ಉದ್ಘಾಟನೆ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗಂಗಾವತಿ ಲಿಟಲ್ ಹಾರ್ಟ್ ಶಾಲೆಯ ಮುಖ್ಯೋಪಾಧ್ಯಾಯಣಿ ಪ್ರಿಯಕುಮಾರಿ. ಪ್ರಭಾಕರ್ ಚಿನ್ನು ಪಾಟಿ.. ಮುಖ್ಯ ಗುರು ಶಾರುಣ್ ಕುಮಾರಿ. ಸೇರಿದಂತೆ ಶಿಕ್ಷಕರು ಪಾಲಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು




