
ಹನೂರಿಗೆ ಆಗಮಿಸಿದ ಸುತ್ತುರು ಜಾತ್ರೆ ರಥೋತ್ಸವವನ್ನು ಅದ್ದೂರಿಯಾಗಿ ಬರಮಾಡಿಕೊಂಡ : ಡಾಕ್ಟರ್ ದತ್ತೇಶ್ ಕುಮಾರ್

Dr. Dattatreya Kumar received the chariot festival that arrived in Hanur with great pomp.
ಹನೂರ :ನಾಡಿನ ಪ್ರಸಿದ್ದ ಮಠಗಳಲ್ಲೊಂದಾದ ಶ್ರೀ ಸುತ್ತುರು ಮಠವು ಪ್ರತಿ ವರ್ಷವೂ ಜಾತ್ರೆಯನ್ನು ನಮ್ಮ ಭಾಗದ ಎಲ್ಲಾ ಸಮುದಾಯವನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿರುತ್ತದೆ ಅದರ ಮುಂದಿನ ಭಾಗವಾಗಿ ಮೈಸೂರು ,ಚಾಮರಾಜನಗರ. ಮಂಡ್ಯ ಸೇರಿದಂತೆ ನಾಡಿನಾದ್ಯಾಂತ ಭಕ್ತರು ಸೇರುವ ಮೂಲಕ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ ಎಂದು ಮಾನಸ ಕಾಲೇಜು
ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾಕ್ಟರ್ ದತ್ತೇಶ್ ಕುಮಾರ್ ತಿಳಿಸಿದರು.
ಹನೂರು ತಾಲ್ಲೂಕು ಕೇಂದ್ರಕ್ಕೆ ಸುತ್ತುರು ಜಾತ್ರಾ ಮಹೋತ್ಸವದ ಅಂಗವಾಗಿ ಈ ದಿನ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ರಥವನ್ನು ಪುಷ್ವರ್ಚನೆ ಮಾಡುವ ಮೂಲಕ ಹನೂರು ಪಟ್ಟಣಕ್ಕೆ ಬರಮಾಡಿಕೊಳ್ಳಲಾಯಿತುಎಂದು ತಿಲಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ಡಾ.ಎಸ್.ದತ್ತೇಶ್ ಕುಮಾರ್ ಭಾಗವಹಿಸಿದ್ದರು.




