Breaking News

ಕೊಪ್ಪಳ, ಯಲಬುರ್ಗಾ, ಕುಕನೂರು: ಗ್ರಾಮ ಉತ್ಕರ್ಷ ಅಭಿಯಾನ ಜಾರಿಗಾಗಿ ಆಯ್ದ ಗ್ರಾಮಗಳ ಮೀನುಗಾರರಿಂದ ಅರ್ಜಿ ಆಹ್ವಾನ

ಕೊಪ್ಪಳ, ಯಲಬುರ್ಗಾ, ಕುಕನೂರು: ಗ್ರಾಮ ಉತ್ಕರ್ಷ ಅಭಿಯಾನ
ಜಾರಿಗಾಗಿ ಆಯ್ದ ಗ್ರಾಮಗಳ ಮೀನುಗಾರರಿಂದ ಅರ್ಜಿ ಆಹ್ವಾನ

Koppal, Yelaburga, Kukanur: Applications invited from fishermen of selected villages for the implementation of the Village Upliftment Campaign
ಕೊಪ್ಪಳ ನವೆಂಬರ್ 25 (ಕರ್ನಾಟಕ ವಾರ್ತೆ): ಕೊಪ್ಪಳ ಮೀನುಗಾರಿಕೆ ಇಲಾಖೆ ವತಿಯಿಂದ 2025-26 ನೇ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಧರ್ತಿ ಆಭಾ ಜನ ಜಾತೀಯ ಗ್ರಾಮ ಉತ್ಕರ್ಷ ಅಭಿಯಾನವನ್ನು ಜಾರಿಗೊಳಿಸುವ ಸಲುವಾಗಿ ಕೊಪ್ಪಳ, ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕುಗಳ ಆಯ್ದ ಗ್ರಾಮಗಳ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪರಿಶಿಷ್ಟ ಪಂಗಡ ವರ್ಗದ ಮೀನುಗಾರರಿಂದ ಮೀನು ಮಾರಾಟಕ್ಕಾಗಿ ಐಸ್ ಬಾಕ್ಸ್ ನೊಂದಿಗೆ ದ್ವಿಚಕ್ರ ವಾಹನ, ಐಸ್ ಬಾಕ್ಸ್ ನೊಂದಿಗೆ ತ್ರಿಚಕ್ರ ವಾಹನ ಮತ್ತು ಜೀವಂತ ಮೀನು ಮಾರಾಟ ಕೇಂದ್ರಗಳನ್ನು ಸ್ಥಾಪಿಸಲು ಸಹಾಯಧನ ನೀಡಲಾಗುತ್ತಿದ್ದು, ಕೊಪ್ಪಳ ತಾಲೂಕಿನ ಹನುಮನಹಳ್ಳಿ ಮತ್ತು ಹಳೆಕುಂಟ, ಯಲಬುರ್ಗಾ ತಾಲೂಕಿನ ಸಾಲಭಾವಿ, ಪುಟಗಮರಿ, ಗುಂಟಮಡು, ಸಿಡ್ಲಭಾವಿ, ಎನ್ ಜರಕುಂಟಿ, ಬೀರಲದಿನ್ನಿ, ಚಿಕ್ಕವಂಕಲಕುಂಟಾ, ತಿಪ್ಪನಹಾಳ ಮತ್ತು ಕುಕನೂರು ತಾಲೂಕಿನ ಚಿಕ್ಕ ಬೀಡಿನಹಾಳ ಗ್ರಾಮಗಳನ್ನು ಈ ಯೋಜನೆಯಡಿ ಆಯ್ಕೆ ಮಾಡಲಾಗಿರುತ್ತದೆ.
ಈ ಎಲ್ಲಾ ಗ್ರಾಮಗಳಿಂದ ಮಾತ್ರ ಬುಡಕಟ್ಟು ಸಮುದಾಯದ ಅಥವಾ ಪರಿಶಿಷ್ಟ ಪಂಗಡ ವರ್ಗದ ಅರ್ಹ ಮೀನುಗಾರರು ಮತ್ತು ಮೀನು ಕೃಷಿಕರು ಅರ್ಜಿ ಸಲ್ಲಿಸಬಹುದು. ಸರ್ಕಾರದ ಮಾರ್ಗಸೂಚಿ ಹಾಗೂ ಲಭ್ಯವಿರುವ ಅನುದಾನದ ಮೇರೆಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದರಿಂದ ಅರ್ಹ ಮೀನುಗಾರರು ಮತ್ತು ಮೀನುಕೃಷಿಕರು ಡಿಸೆಂಬರ್ 8 ರೊಳಗಾಗಿ ಕೊಪ್ಪಳ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿಗೆ ಯೋಜನೆಯ ನಿಯಮಾನುಸಾರ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Mallikarjun

Check Also

screenshot 2025 11 25 20 24 32 83 e307a3f9df9f380ebaf106e1dc980bb6.jpg

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಸುರಕ್ಷತಾ ಕ್ರಮ

ಕೊಪ್ಪಳ ತಾಲೂಕ ಪಂಚಾಯತಿಯಲ್ಲಿ ಜರುಗಿದ ನೋಡಲ್ ಅಧಿಕಾರಿಗಳ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸಭೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.