ತುಂಗಭದ್ರಾ ನೀರಾವರಿ ಇಲಾಖೆ ಗುತ್ತಿಗೆ ನೌಕರರ ವೇತನ ಪಾವತಿಗೆ ಆಗ್ರಹ
Demand for payment of salaries of Tungabhadra Irrigation Department contract employees
ಗಂಗಾವತಿ:ಕರ್ನಾಟಕ ನೀರಾವರಿ ನಿಗಮಕ್ಕೆ ಸೇರಿದ ತುಂಗಭದ್ರಾ ನೀರಾವರಿ ಕಾರ್ಮಿಕರ ವೇತನ ಪಾವತಿಸುವಂತೆ ಆಗ್ರಹಿಸಿ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ (ಂIಅಅಖಿU) ಕೇಂದ್ರ ಸಮಿತಿ ಕಾರ್ಮಿಕ ನಿರೀಕ್ಷಕರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಎಲ್ಲಾ ಉಪ ವಿಭಾಗದ ಕಾರ್ಯನಿರ್ವಹಿಸುತ್ತಿರುವ ಕಾಲುವೆ ಮತ್ತು ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ
ಕಾರ್ಮಿಕರಿಗೆ ೫ ತಿಂಗಳಿAದ ಬಾಕಿ ವೇತನ ಪಾವತಿಸದೇ ವಿಳಂಬ ಮಾಡಲಾಗಿದ್ದು, ಸೂಕ್ತ ಕಾನೂನು ಕ್ರಮ ಕೈಗೊಂಡು ಕೂಡಲೇ ವೇತನ ಪಾವತಿಸುವಂತೆ ಒತ್ತಾಯಿಸಿದರು.
ಕರ್ನಾಟಕ ನೀರಾವರಿ ನಿಗಮಕ್ಕೆ ಸೇರಿದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಎಲ್ಲಾ ಉಪ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕಳೆದ ೫ ತಿಂಗಳಿAದ ಬಾಕಿ ವೇತನ ಪಾವತಿಸದೇ ವಿಳಂಬ ಮಾಡಲಾಗಿರುತ್ತದೆ. ಇದರಿಂದ ಕಾರ್ಮಿಕರ ಕುಟುಂಬ ನಿರ್ವಹಣೆಗೆ ಸಮಸ್ಯೆಯಾಗಿದ್ದು, ದೈನಂದಿನ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಹಾಗೂ ಮನೆಯ ಸದಸ್ಯರಿಗೆ ಅನಾರೋಗ್ಯ ಸಮಸ್ಯೆಗೆ ಚಿಕಿತ್ಸೆ ಕೊಡಿಸಲು ಸಾಲ-ಸೋಲ ಮಾಡುವಂತಾಗಿದೆ. ಕಾರ್ಮಿಕರು ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ಕೆಲಸದಲ್ಲಿ ತೊಡಿಗಿರುವ ಕಾರ್ಮಿಕರಿಗೆ ಟೆಂಡರ್ ನಿಯಮಾವಳಿಗಳಂತೆ ವೇತನ ಪಾವತಿಸದೇ ಟೆಂಡರ್ ಪಡೆದ ಗುತ್ತಿಗೆದಾರ ಹಾಗೂ ಸಂಬAಧಿಸಿದ ಇಲಾಖೆಯ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಿ, ಕಾರ್ಮಿಕರಿಗೆ ಟೆಂಡರ್‌ನ ನಿಯಮಾವಳಿಯಂತೆ ವೇತನ ಪಾವತಿಗೆ ಕ್ರಮ ವಹಿಸಬೇಕು. ೧೯೩೬ ರ ವೇತನ ಪಾವತಿ ಕಾಯ್ದೆಯ ಸೆಕ್ಷನ್ ೫ ರ ಪ್ರಕಾರ ಪ್ರತಿ ತಿಂಗಳ ೭ ನೇ ತಾರೀಖಿನ ಮೊದಲು ವೇತನವನ್ನು ಪಾವತಿಸಬೇಕು. ಆದಾಗ್ಯೂ ೫ ತಿಂಗಳು ಕಾರ್ಮಿಕರಿಗೆ ವೇತನವನ್ನು ಪಾವತಿಸಲಾಗಿಲ್ಲ. ತಕ್ಷಣ
ಬಾಕಿ ಇರುವ ಎಲ್ಲಾ ವೇತನ ಇಎಸ್‌ಐ, ಇಪಿಎಫ್ ಸೇರಿದಂತೆ ಇನ್ನಿತರೆ ಸೌಕರ್ಯಗಳನ್ನು ಒದಗಿಸಬೇಕು. ತಕ್ಷಣವೇ ವೇತನ ಪಾವತಿಸಲು ಮತ್ತು ವಿಳಂಬವಾದ ವೇತನದ ಮೇಲೆ ಬಡ್ಡಿಯನ್ನು ಪಾವತಿಸಲು ನೀವು ತುರ್ತಾಗಿ ಮಧ್ಯಪ್ರವೇಶಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
Kalyanasiri Kannada News Live 24×7 | News Karnataka
