Breaking News

ಮೈಲಾರ ಮಲ್ಲಣ್ಣ ಜಾತ್ರೆ 26 ರಿಂದ.

ಮೈಲಾರ ಮಲ್ಲಣ್ಣ ಜಾತ್ರೆ 26 ರಿಂದ

ಜಾಹೀರಾತು
Mylara Mallanna fair from 26th

Screenshot 2025 11 20 20 53 39 00 E307a3f9df9f380ebaf106e1dc980bb62500331230258726094
ಬೀದರ್: ಭಾಲ್ಕಿ ತಾಲ್ಲೂಕಿನ ಖಾನಾಪುರದಲ್ಲಿ ಮೈಲಾರ ಮಲ್ಲಣ್ಣ ದೇವರ ಜಾತ್ರಾ ಮಹೋತ್ಸವ ನ. 26 ರಿಂದ ಡಿಸೆಂಬರ್ 26 ರ ವರೆಗೆ ಅದ್ಧೂರಿಯಾಗಿ ನಡೆಯಲಿದೆ.
ನ. 26 ರಂದು ರಾತ್ರಿ 9.30ಕ್ಕೆ ಮಲ್ಹಾರಿ ಮತ್ತು ಮಾಳಸಾಕಾಂತೆ ಹಾಗೂ ಭಾನು ಅವರ ಮದುವೆಯೊಂದಿಗೆ ಜಾತ್ರೆಗೆ ವಿಧ್ಯುಕ್ತ ಚಾಲನೆ ಸಿಗಲಿದೆ.
ನ. 30 ರಂದು ರಾತ್ರಿ 8.30ಕ್ಕೆ ಪಲ್ಲಕ್ಕಿ ಉತ್ಸವ ಹಾಗೂ ನಂದಿ ಮೇಲೆ ದೇವರ ವಿಗ್ರಹದ ಮೆರವಣಿಗೆ ಜರುಗಲಿದೆ.

Screenshot 2025 11 20 20 53 49 36 E307a3f9df9f380ebaf106e1dc980bb6981987578741909973ಡಿ. 4 ರಂದು ರಾತ್ರಿ 8.30ಕ್ಕೆ ನವಿಲು ಮೇಲೆ ದೇವರ ವಿಗ್ರಹದ ಮೆರವಣಿಗೆ, ಡಿ. 7 ರಂದು ರಾತ್ರಿ 8.30ಕ್ಕೆ ಪಲ್ಲಕ್ಕಿ ಉತ್ಸವ, ಕುದುರೆ ಮೇಲೆ ದೇವರ ವಿಗ್ರಹದ ಮೆರವಣಿಗೆ, ಡಿ. 14 ರಂದು ಪಲ್ಲಕ್ಕಿ ಉತ್ಸವ, ಆನೆಯ ಮೇಲೆ ದೇವರ ವಿಗ್ರಹದ ಮೆರವಣಿಗೆ, ಡಿ. 21 ರಂದು ಪಲ್ಲಕ್ಕಿ ಉತ್ಸವ, ನಂದಿಯ ಮೇಲೆ ದೇವರ ವಿಗ್ರಹದ ಮೆರವಣಿಗೆ ನಡೆಯಲಿದೆ. ಡಿ. 26 ರಂದು ಬೆಳಿಗ್ಗೆ 11ಕ್ಕೆ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭ ಜರುಗಲಿದೆ.
ಭಕ್ತರು ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆಯಬೇಕು ಎಂದು ಮಲ್ಲಣ್ಣ ದೇವಸ್ಥಾನದ ಆಡಳಿತಾಧಿಕಾರಿ ಮುಕುಲ್ ಜೈನ್ ಹಾಗೂ ಕಾರ್ಯನಿರ್ವಹಣಾಧಿಕಾರಿ ಅನಂತರಾವ್ ಕುಲಕರ್ಣಿ ಮನವಿ ಮಾಡಿದ್ದಾರೆ.

About Mallikarjun

Check Also

screenshot 2025 11 19 18 46 22 08 6012fa4d4ddec268fc5c7112cbb265e7.jpg

ಬೈಕ್ ಸವಾರರ ಮೇಲೆ ಕಾಡಾನೆ ದಾಳಿ; ಓರ್ವ ಸಾವು, ಮತ್ತೋರ್ವ ಪಾರ.

ಬೈಕ್ ಸವಾರರ ಮೇಲೆ ಕಾಡಾನೆ ದಾಳಿ; ಓರ್ವ ಸಾವು, ಮತ್ತೋರ್ವ ಪಾರ. Wild elephant attacks bikers; one dead, …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.