ಪ್ರಮುಖ ಪ್ರಾಗೈತಿಹಾಸಿಕ ಹಿರೇಬೆಣಕಲ್ ನೆಲೆ ಪರಿಚಯ ಸೇವೆಗೆ ಮಂಜುನಾಥ ಗುಡ್ಲಾನೂರ ಗೆ ರಾಜ್ಯೋತ್ಸವ ಪ್ರಶಸ್ತಿ
Rajyotsava Award to Manjunath Gudlanur for his introduction to the important prehistoric site of Hirebenkal
ಗಂಗಾವತಿ: ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದೆನಿಸಿದ ಹಿರೇಬೆಣಕಲ್ ನೆಲೆಯಲ್ಲಿನ ಶಿಲಾಕೋಣಿಗಳು ಮತ್ತು ಗುಹಾಚಿತ್ರಗಳ ಸಂರಕ್ಷಣೆ ಹಾಗೂ ಪ್ರಚಾರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ಗಂಗಾವತಿ ಪತ್ರಕರ್ತ ಮಂಜುನಾಥ್ ಗುಡ್ಲಾನೂರರವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಸುಮಾರು ೫,೦೦೦ ವರ್ಷಗಳ ಇತಿಹಾಸ ಹೊಂದಿರುವ ಹಿರೇಬೆಣಕಲ್, ಸಾವಿರಾರು ಶಿಲಾಕೋಣಿಗಳು ಮತ್ತು ಗುಹಾಚಿತ್ರಗಳನ್ನು ಒಳಗೊಂಡಿದೆ. ನಾಗರಿಕ ಮಾನವನ ಬದುಕಿನ ಬುನಾದಿ ಹಾಕಿದ ಈ ನೆಲೆ, ಕಾಲದ ಹೊಡೆತಕ್ಕೆÀ ನಾಶವಾಗುವ ಅಪಾಯವನ್ನು ಎದುರಿಸುತ್ತಿತ್ತು. ಈ ಸಂದರ್ಭದಲ್ಲಿ, ಮಂಜುನಾಥ್ ಗುಡ್ಲಾನೂರ ರವರು ಈ ನೆಲೆಯ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಸತತವಾಗಿ ಶ್ರಮಿಸಿದರು. ಹಿರೇಬೆಣಕಲ್‌ನ ಸಂರಕ್ಷಣೆಗಾಗಿ ಹಲವಾರು ಮುಖ್ಯ ಕಾರ್ಯಗಳನ್ನು ಮಾಡಿದ್ದಾರೆ. ಸುಮಾರು ವರ್ಷಗಳಿಂದ ಅವರು ಐತಿಹಾಸಿಕ ಆಸಕ್ತಿ ಉಳ್ಳವರನ್ನು, ಸಂಶೋಧಕರನ್ನು ಮತ್ತು ಪ್ರವಾಸಿಗರನ್ನು ಹಿರೇಬೆಣಕಲ್‌ಗೆ ಕರೆದುಕೊಂಡು ಹೋಗಿ, ಅದರ ಮಹತ್ವವನ್ನು ವಿವರಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲೇಖನಗಳು ಮತ್ತು ಪುಸ್ತಕಗಳನ್ನು ಬರೆದು, ಈ ನೆಲೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಾ ರಾಜ್ಯ ಮತ್ತು ದೇಶದ ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡಿ ಪುಸ್ತಕಗಳನ್ನು ನೀಡಿ ಮಾಹಿತಿ ನೀಡುವ ಮೂಲಕ ಹಿರೇಬೆಣಕಲ್‌ಗೆ ಆಗಮಿಸಲು ಪ್ರೋತ್ಸಾಹಿಸಿದ್ದಾರೆ. ಸ್ನೇಹಿತರು ಮತ್ತು ಸ್ಥಳೀಯ ಸಂಘಟನೆಗಳ ಸಹಕಾರದೊಂದಿಗೆ, ಮಂಜುನಾಥ್ ಗುಡ್ಲಾನೂರ ಹಿರೇಬೆಣಕಲ್‌ನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ. ಇದರ ಫಲವಾಗಿ, ರಾಜಕಾರಣಿಗಳು, ಅಧಿಕಾರಿಗಳು, ಶಾಲಾ ಮಕ್ಕಳು ಸೇರಿದಂತೆ ಹಲವರು ಈಗ ಈ ನೆಲೆಯನ್ನು ಭೇಟಿ ಮಾಡುತ್ತಿದ್ದಾರೆ ಮತ್ತು ಅದರ ಮಹತ್ವವನ್ನು ಅರಿತುಕೊಂಡು ಇತರರಿಗೆ ಹೇಳುತ್ತಿದ್ದಾರೆ.
ಮಂಜುನಾಥ್ ಗುಡ್ಲಾನೂರರ ಈ ಅಮೂಲ್ಯ ಸೇವೆಯನ್ನು ಪರಿಗಣಿಸಿ, ಕುಂಭಮೇಳ ಸಾಂಸ್ಕೃತಿಕ ಅಕಾಡೆಮಿ ನಡೆಸಿಕೊಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಅವರಿಗೆ ನೀಡಲಾತ್ತಿz.ೆ ನವೆಂಬರ್ ೧೯, ೨೦೨೫, ಬುಧವಾರ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನರಂಗ ಮಂದಿರದಲ್ಲಿ ನಡೆಯುವ ಗೌರವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ
ಇವರ ಶ್ರಮ ಮತ್ತು ನಿಷ್ಠೆಯಿಂದಾಗಿ, ಹಿರೇಬೆಣಕಲ್ ಈಗ ಕರ್ನಾಟಕದ ಒಂದು ಪ್ರಮುಖ ಐತಿಹಾಸಿಕ ಮತ್ತು ಪ್ರವಾಸಿ ಕೇಂದ್ರವಾಗಿ ಮಾರ್ಪಟ್ಟಿದೆ. ಅವರ ಸೇವೆ ರಾಜ್ಯದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯ ಸಂರಕ್ಷಣೆಗೆ ಸ್ಪೂರ್ತಿದಾಯಕವಾಗಿದೆ.
Kalyanasiri Kannada News Live 24×7 | News Karnataka
