Dalit leader Nagaraj leads 9th day of Bhimavad Satyagraha against Sahagapur factoryದ.ಸಂ.ಸ ಭೀಮವಾದ 9ನೇ ದಿನದ ಸತ್ಯಾಗ್ರಹದ ನೇತೃತ್ವ ದಲಿತ ಮುಖಂಡ ನಾಗರಾಜ ಸಃಗಾಪುರ ಕಾರ್ಖಾನೆ ವಿರುದ್ಧ ಕಿಡಿ

ಕೊಪ್ಪಳ : ನಗರಕ್ಕೆ ಹೊಂದಿಕೊಂಡ ಬಲ್ಡೋಟ (ಬಿಎಸ್ಪಿಎಲ್) ವಿಸ್ತರಣೆ ಬೇಡ, ಎಂ.ಎಸ್.ಪಿ.ಎಲ್. ಅತಿಕ್ರಮಣದಿಂದ ಕಾಂಪೌಂಡ್ ಹಾಕಿರುವ 44.35 ಎಕರೆ ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು, 20 ಕಾರ್ಖಾನೆ ದೂಳು ಬಾಧಿತ ಜನರ ಆರೋಗ್ಯ ರಕ್ಷಣೆಗಾಗಿ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆಯ ಕಾರ್ಖಾನೆ ವಿರೋಧಿ ಅನಿರ್ದಿಷ್ಟಾವಧಿ ಧರಣಿ 9ನೇ ದಿನದಲ್ಲಿ ಮುಂದುವರೆಯಿತು. ಸತ್ಯಾಗ್ರಹಿಗಳನ್ನು ಉದ್ದೇಶಿಸಿ ದ.ಸಂ.ಸ. (ಸಂಯೋಜಕ) ಜಿಲ್ಲಾ ಮುಖಂಡ ನಾಗರಾಜ ಸಂಗಾಪುರ ಇವರು ಮಾತನಾಡುತ್ತಾ ಈ ಕಾರ್ಖಾನೆಗಳು ಕೇವಲ ಕೊಪ್ಪಳ ಜನರಿಗಷ್ಟೇ ಮಾಲಿನ್ಯ ಮಾಡಿಲ್ಲ. ತುಂಗಭದ್ರಾ ನದಿ ತಟ, ಜಲಾಶಯದ ಹಿನ್ನೀರ ಒಡಲಲ್ಲಿ ಸ್ಥಾಪನೆಯಾದ ಈ ಕಾರ್ಖಾನೆಗಳು ರೈತರು ಬಳಸಿಕೊಳ್ಳುವ ತುಂಗಭದ್ರಾ ನೀರನ್ನು ಲೆಕ್ಕವಿಲ್ಲದಷ್ಟು ಪ್ರಮಾಣದಲ್ಲಿ ಬಳಸಿ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯದ 3 ಕೋಟಿ ಜನರ ನೀರಿನ ಹಕ್ಕು ಕಸಿದುಕೊಳ್ಳುತ್ತಿವೆ. ಜಿಲ್ಲಾ ಮಂತ್ರಿ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ ಇವರು ಏನು ಮಾಡುತ್ತಿದ್ದಾರೆ? ಇವರಿಗೆ ಇಷ್ಟೊಂದು ಜನರ ಆರೋಗ್ಯ ಕಾಪಾಡುವ ಜವಾಬ್ದಾರಿ ಇಲ್ಲವೆ? ಇವರಿಂದ ಗವಿಮಠದ ಸ್ವಾಮೀಜಿ ಹೇಳಿದ್ದಕ್ಕೆ ತಡೆ ಆದೇಶ ತರದಿದ್ದರೆ ಇವರೆಲ್ಲಾ ರಜೀನಾಮೆ ಕೊಡಲಿ ಎಂದು ಕಿಡಿಕಿಡಿಯಾದರು. ಇನ್ನೊಬ್ಬ ದಲಿತ ಮುಖಂಡ ಪ್ರಕಾಶ ಎಚ್. ಹೊಳೆಯಪ್ಪನವರ ಇಲ್ಲಿ ವಿಸ್ತರಣೆಗೆ ಮುಂದಾಗಿರುವ ಬಲ್ಡೋಟ ಅವಳಿ ನಗರದ 1.5 ಲಕ್ಷ ಜನರ ಆರೋಗ್ಯದ ಮೇಲೆ ದುಃಷ್ಪರಿಣಾಮ ಉಂಟು ಮಾಡುತ್ತದೆ. ಈ ವಿಸ್ತರಣೆಯನ್ನು ಒಕ್ಕೊರಲಿನಿಂದ ವಿರೋಧಿಸಿ ಫೆ.24ರಂದು ಕೊಪ್ಪಳ ಬಂದ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಸರಕಾರ ಹಗುರವಾಗಿ ಪರಿಗಣಿಸಿದರೆ ಜನ ಬೀದಿಗಿಳಿದು ಜನಪ್ರತಿನಿದಿನಗಳ ಮನೆ ಮುತ್ತಿಗೆ ಹಾಕುವ ಕಾಲ ದೂಲವಿಲ್ಲ ಎಂದರು. ಧರಣಿಯಲ್ಲಿ ಕೆ.ಎಂ.ಆರ್.ವಿ. ಜಿಲ್ಲಾಧ್ಯಕ್ಷ ಮುದಕಪ್ಪ ಎಂ. ಹೊಸಮನಿ, ಸಂಯೋಜಕ ಸಮಿತಿ ಜಿಲ್ಲಾಧ್ಯಕ್ಷ ರಾಮಪ್ಪ ಎಂ. ಗುಡ್ಲಾನೂರು, ನಿಂಗಪ್ಪ ಜಿ.ಎಸ್. ಬೆಣಕಲ್, ಎಂ.ಕೆ.ಸಾಹೇಬ ಮಾತನಾಡಿದರು. ಧರಣಿ ನೇತೃತ್ವವನ್ನು ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಮಖಬೂಲ್ ರಾಯಚೂರು, ಬಸವರಾಜ ನರೇಗಲ್, ಮಹಾದೇವಪ್ಪ ಎಸ್.ಮಾವಿನಮಡು, ಸುಂಕಪ್ಪ ಮೀಸಿ ವಹಿಸಿದ್ದರು. ಧರಣಿಯಲ್ಲಿ ಎಂ.ಮಾರುತಿ, ಗಾಳೆಪ್ಪ ಪೂಜಾರ, ಚನ್ನವೀರಯ್ಯ ಹಿರೇಮಠ, ಫಕೀರಪ್ಪ ದೊಡ್ಡಮನಿ, ಸುರೇಶ ಪೂಜಾರ, ಸಿದ್ದಪ್ಪ ಬೇಳೂರು, ಮಾರುತಿ ಪೂಜಾರ, ಫಾಸ್ಟರ್ ಚನ್ನಬಸಪ್ಪ ಅಪ್ಪಣ್ಣವರ, ಶಿವು ಹತ್ತಿಕಟಿಗಿ, ಬಸವರಾಜ ಶೀಲವಂತರ, ಶಿವಪ್ಪ ಹಡಪದ, ಶರಣಬಸಪ್ಪ ದಾನಕೈ, ಅಮರೇಶ ಕರಡಿ, ಫಕ್ರುಸಾಬ ಹೊಸಕೇರಿ, ಕೆಂಚಪ್ಪ ವೀರಾಪುರ, ಸುರೇಶ ಹಿಟ್ನಾಳ, ಶಿವಪ್ರಸಾದ ಆರ್. ರಾಮಸ್ವರೂಪ ಕೆ. ನಾಗರಾಜ ಕೆ.ಎಂ. ತಿಮ್ಮಣ್ಣ ಭೋವಿ,,ಇದ್ದರು.
Kalyanasiri Kannada News Live 24×7 | News Karnataka
