
ಗಂಗಾವತಿ- ಮುದಗಲ್ ರಸ್ತೆಗೆ ಹಾಕಿರುವ ಉಬ್ಬುಗಳು ತೆರುವಿಗೆ ಒತ್ತಾಯಿಸಿ ಸರ್ಕಾರಕ್ಕೆ ಪತ್ರ

Letter to the government demanding the removal of the humps on the Gangavathi-Mudagal road
ಗಂಗಾವತಿ: ಗಂಗಾವತಿ-ನಗರದಿಂದ ಮುದಗಲ್ ವರೆಗೂ ರಾಜ್ಯ ಹೆದ್ದಾರಿ-29 ರಲ್ಲಿ ಹಾಕಿರುವ ಹೆಚ್ಚಿನ ಸಂಖ್ಯೆಯ ರಸ್ತೆ ಉಬ್ಬುಗಳು ತೆರುವು ಗೊಳಿಸಲು ಆಗ್ರಹಿಸಿ,ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯಿಂದ ಸರಕಾರಕ್ಕೆ ಪತ್ರ ಬರೆಯಲಾಗಿದೆ.ಲೋಕ ಧ್ವನಿ ಪತ್ರಿಕೆಯಲ್ಲಿ ಇತ್ತೀಚೆಗೆ ಈ ಬಗ್ಗೆ ವರದಿ ಪ್ರಕಟವಾಗಿದ್ದು ,ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿತ್ತು.ಇದನ್ನು ಗಮನಿಸಿದ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಪತ್ರಿಕೆಯ ವರದಿಯ ಭಾಗವನ್ನು ಮತ್ತು ದೂರನ್ನು ಸರಕಾರಕ್ಕೆ ರವಾನಿಸಿದ್ದಾರೆ.ರಾಜ್ಯದ ರಾಜ್ಯಪಾಲರು, ಮುಖ್ಯ ಮಂತ್ರಿ, ಸರಕಾರದ ಮುಖ್ಯ ಕಾರ್ಯದರ್ಶಿ,ಲೋಕೋಪಯೋಗಿ ಸಚಿವರು, ಪ್ರಧಾನ ಕಾರ್ಯದರ್ಶಿ,ಇಲಾಖೆಯ ಇತರ ಅಧಿಕಾರಿಗಳಿಗೆ ಸೇರಿದಂತೆ ಕೊಪ್ಪಳದ ಜಿಲ್ಲಾಧಿಕಾರಿ, ಆಧೀನ ಜಿಲ್ಲಾಧಿಕಾರಿ,ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಇಮೇಲ್ ಮೂಲಕ ದೂರನ್ನು ಸಲ್ಲಿಸಿದ್ದಾರೆ.ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗಲ್ಲದೆ,ಈ ಬಗ್ಗೆ ಕೇಂದ್ರದ ಸಚಿವರ ಮತ್ತು ಅಧಿಕಾರಿಗಳ ಗಮನ ಸೆಳೆದಿದ್ದಾರೆ.ರಸ್ತೆ ಉಬ್ಬುಗಳಿಂದಾಗಿ ಜನರ ಆರೋಗ್ಯದ ಮೇಲೆ ವಿಪರೀತ ತೊಂದರೆಯಾಗಿದ್ದು,ಪ್ರಯಾಣಿಕರು ಮತ್ತು ಚಾಲಕರು ಸೊಂಟ ಮತ್ತು ಕುತ್ತಿಗೆ ನೋವಿನಿಂದ ನರಳುತ್ತಿದ್ದಾರೆ, ರಸ್ತೆಗಳ ಉಬ್ಬುಗಳಿಂದ ಅಂಬ್ಯೂಲೆನ್ಸ್ ಮತ್ತು ಅಗ್ನಿಶಾಮಕ ದಳದ ವಾಹನಗಳ ಸಂಚಾರಕ್ಕೂ ಅಡಚಣೆಯಾಗಿದೆ ಎಂದು ದೂರಿನಲ್ಲಿ ಅವರು ವಿವರಿಸಿದ್ದಾರೆ.ರಾಷ್ಟ್ರೀಯ ಹೆದ್ದಾರಿಗಳಲ್ಲಿಯೂ ಅವೈಜ್ಞಾನಿಕ ರಸ್ತೆ ಉಬ್ಬುಗಳ ಬಗ್ಗೆಯೂ ಪ್ರಸ್ಥಾಪಿಸಿರುವ ಅವರು ಪ್ರಧಾನ ಮಂತ್ರಿ ಮತ್ತು ಹೆದ್ದಾರಿ ಸಚಿವರಿಗೆ ಇಮೇಲ್ ಸಂದೇಶದ ಮೂಲಕ ದೂರು ನೀಡಿದ್ದಾರೆ.ಇಂತಹ ಸಮಸ್ಯೆಗಳನ್ನು ಕಂಡು ಕಾಣದಂತೆ ಜನಪ್ರತಿನಿಧಿಗಳು ಸಂಚರಿಸುತ್ತಿರುವುದು ವಿಷಾಧಕರ ಎಂದು ಹೇರೂರ ಅಭಿಪ್ರಾಯ ಪಟ್ಟಿದ್ದಾರೆ.




