Breaking News

ಒಳ್ಳೆಯ ಪ್ರಜೆಯಲ್ಲದ ಕನ್ನೇರಿ ಶ್ರೀಗಳು ಭಕ್ತರಲ್ಲಿ ಕ್ಷಮೆಯಾಚಿಸಿ; ಕಾವಿ ಬಟ್ಟೆ ಮತ್ತು ಮಠ-ಪೀಠ ತ್ಯಜಿಸಲಿ.

Kanneri Sri, who is not a good citizen, should apologize to the devotees; let him abandon his saffron clothes and the monastery.
ಒಳ್ಳೆಯ ಪ್ರಜೆಯಲ್ಲದ ಕನ್ನೇರಿ ಶ್ರೀಗಳು ಭಕ್ತರಲ್ಲಿ ಕ್ಷಮೆಯಾಚಿಸಿ; ಕಾವಿ ಬಟ್ಟೆ ಮತ್ತು ಮಠ-ಪೀಠ ತ್ಯಜಿಸಲಿ.

 

Screenshot 2025 10 09 09 45 20 28 40deb401b9ffe8e1df2f1cc5ba480b126679023552926848307

ಬಸವಕಲ್ಯಾಣ: ಕನ್ನೇರಿ ಶ್ರೀಗಳ ಬೆಂಬಲಕ್ಕೆ ನಿಂತ ಸನಾತನಿಗಳು ಬೆಳಗಾವಿಯಲ್ಲಿ ಸಭೆ ಸೇರಿ ರಾಜ್ಯಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶ ಮಾಡಬೇಕೆಂದೂ ಮತ್ತು ಕನ್ನೇರಿ ಶ್ರೀಗಳ ನಿರ್ಬಂಧ ಖಂಡಿಸಿ ತಾಲೂಕಾ ದಂಡಾಧಿಕಾರಿಗಳಿಗೆ ಮನವಿ ಕೊಡಬೇಕೆಂದು

ಜಾಹೀರಾತು

ಕರೆ ನೀಡಿದ್ದಾರೆ ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಕನ್ನೇರಿ ಶ್ರೀಗಳಿಗೆ ವಿಜಯಪುರಕ್ಕೆ ಎರಡು ತಿಂಗಳು ಬಾರದಂತೆ ಮಾನ್ಯ ಉಚ್ಛ ನ್ಯಾಯಾಲಯವು ನಿರ್ಬಂಧಿಸಿ ಆದೇಶಿಸಿದ ತೀರ್ಪನ್ನು ಎತ್ತಿ ಹಿಡಿದ ಮಾನ್ಯ ಸರ್ವೋಚ್ಛ ನ್ಯಾಯಾಲಯವು; ಕನ್ನೇರಿ ಶ್ರೀಗಳಿಗೆ 'ನೀವು ಒಳ್ಳೆಯ ಪ್ರಜೆಯಲ್ಲ' ಎಂದು ಹೇಳಿ ಛೀ ಮಾರಿ ಹಾಕಿ, ಸ್ವಾಮೀಜಿಯಾದವರು ಗಂಭೀರವಾಗಿರಬೇಕು, ನೀವು ಮಾತಾಡಿರುವುದು ವ್ಯಕ್ತಿ ಸ್ವಾತಂತ್ರ್ಯದಡಿಯಲ್ಲಿ ಬರುವುದಿಲ್ಲ, ಮಾನಸಿಕ ಸ್ಥಿತಿ ಹಾಳಾಗಿದ್ದರೆ ಯಾವುದಾದರೂ ಮಠದಲ್ಲಿ ಹೋಗಿ ಧ್ಯಾನ ಮಾಡಿ ಎಂದು ಬುದ್ಧಿ ಮಾತು ಹೇಳಿದ್ದಲ್ಲದೆ ಅವರ ಅರ್ಜಿಯನ್ನು ವಜಾ ಮಾಡಿದೆ. ಇಷ್ಟಾದರೂ ಎಚ್ಚೆತ್ತುಕೊಳ್ಳದ ಕನ್ನೇರಿ ಶ್ರೀಗಳ ಅಂಧ ಭಕ್ತರು ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿ ಶ್ರೀಗಳ ಪರವಾಗಿ ನಿಂತು ಬೆಳಗಾವಿಯಲ್ಲಿ ಸಭೆ ಮಾಡಿ, ರಾಜ್ಯಾದ್ಯಂತ ಸಹಿ ಸಂಗ್ರಹಿಸಿ ಬಬಲೇಶ್ವರದಲ್ಲಿ ಸಮಾವೇಶ ಮಾಡಲು ಮುದಾಗುತ್ತಿರುವುದು ಯಾವ ಪುರುಷಾರ್ಥಕ್ಕಾಗಿ? ಇದರಿಂದ ಗೊತ್ತಾಗುತ್ತದೆ ಕಾನೂನಿನ ಆದೇಶ ಮೀರಿ ನಡೆಯುವಷ್ಟು ಜಗಭಂಡರು ನೀವು ಅಂತ. ದೇಶದ ಕಾನೂನಿಗೆ ಬೆಲೆ ಕೊಡದಿರುವುದು ಇದೇನಾ ನಿಮ್ಮ ಆರ್ ಎಸ್ ಎಸ್ ಸಂಸ್ಕೃತಿ.

“ಆಪ್ಯಾಯನಕ್ಕೆ ನೀಡುವೆ ಲಾಂಛನಕ್ಕೆ ಶರಣಂಬೆ ಲಾಂಛನಕ್ಕೆ ತಕ್ಕ ಆಚರಣೆ ಇಲ್ಲದಿದ್ದರೆ ಕೂಡಲ ಸಂಗಮದೇವ ನೀ ಸಾಕ್ಷಿಯಾಗಿ ಛೀ ಎಂಬೆ” ಎಂದು ಗುರು ಬಸವಣ್ಣನವರು ತಮ್ಮ ವಚನದಲ್ಲಿ ಹೇಳುವ ಹಾಗೆ ಕನ್ನೇರಿ ಶ್ರೀಗಳು ಈ ನೆಲದ ಸಂವಿಧಾನ ಮತ್ತು ಧಾರ್ಮಿಕ ಸಂವಿಧಾನ ಎರಡನ್ನು ಮೀರಿ ತಾವು ತೊಟ್ಟ ಲಾಂಛನಕ್ಕೆ ಅಪಚಾರ ವೆಸಗಿದ್ದಾರೆ. ಇಂಥವರನ್ನು ಬೆಂಬಲಿಸಿ ಹೋರಾಟ ಮಾಡುವವರು ಅಪರಾಧಿಗಳ ಸ್ಥಾನದಲ್ಲಿ ನಿಂತು; ತಾವೂ ಸಹಿತ ಉತ್ತಮ ಪ್ರಜೆಗಳಲ್ಲ ಎಂಬುದನ್ನು ಸಾಭೀತು ಮಾಡುತ್ತಿದ್ದಾರೆ. ಸುಪ್ರೀಂಕೋರ್ಟ್ನಿಂದ ಛೀ ಮಾರಿ ಹಾಕಿಸಿಕೊಂಡು ಅಪರಾಧಿ ಸ್ಥಾನದಲ್ಲಿ ನಿಂತವನಿಗೆ ಬೆಂಬಲಿಸಿ ಕಾರ್ಯಕ್ರಮ ಮಾಡಲು ಮುಂದಾಗುವುದು ನ್ಯಾಯಾಲಯವನ್ನೇ ತಿರಸ್ಕರಿಸಿದಂತಾಗುತ್ತದೆ
ಎಂಬ ಸಾಮಾನ್ಯ ವಿವೇಕವೂ ಇವರಲ್ಲಿ ಇಲ್ಲವಾಯಿತೇ? ಇದರಿಂದ ಗೊತ್ತಾಗುತ್ತದೆ ಇವರ ತಲೆಯಲ್ಲಿ ಸನಾತನ ಧರ್ಮದ ಮನುಸ್ಮೃತಿ ಸಂವಿಧಾನ ಅದೆಷ್ಟು ತುಂಬಿದೆ‌ ಎಂದು. ನ್ಯಾಯಾಲಯದ ತೀರ್ಪನ್ನು ದಿಕ್ಕರಿಸುವ ಇಂತಹ ದೇಶದ್ರೋಹಿಗಳನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ಆಗ್ರಹಿಸುತ್ತೇವೆ.

ಮಾತೇತ್ತಿದ್ದರೆ ಹೊಲಸು ಮಾತಾಡುವ, ಬಸವಭಕ್ತರನ್ನು ತಾಲಿಬಾನ್, ನೆಕ್ಷಲೈಟಿಗೆ ಹೋಲಿಸಿ ಮಾತಾಡುವ ಬಸವನಗೌಡ ಪಾಟೀಲ ಯತ್ನಾಳ ಇವರಿಗೂ ಸರಕಾರ ಕಾನೂನು ಕ್ರಮ ಜರುಗಿಸಬೇಕು. ಸಾಮಾನ್ಯ ಮಗುವಿಗೂ ಅರ್ಥವಾಗುತ್ತದೆ ಕನ್ನೇರಿ ಶ್ರೀಗಳ ಹೇಳಿಕೆ ತಪ್ಪು ಎಂದು. ಆದರೆ ನಿನ್ನೆ ಬೆಳಗಾವಿಯಲ್ಲಿ ನಡೆದ ಹಿಂದೂಗಳ ಸಭೆಯಲ್ಲಿ ಪ್ರತಿಯೊಬ್ಬರು ಶ್ರೀಗಳ ಮಾತನ್ನು ಸಮರ್ಥಿಸಿ ಮಾತಾಡುವುದನ್ನು ನೋಡಿದರೆ “ಬಳ್ಳಿ ಗುರುಡರು ಸೇರಿ ಹಳ್ಳಕ್ಕೆ ಬಿದ್ದಂತೆ” ಮೂಡತನದ ಕೂಪಕ್ಕೆ ಬೀಳುತ್ತಿದ್ದಾರೆ, ಶತ ಮೂರ್ಖರು ತಾವು ಎಂಬುದನ್ನು ತೋರಿಸಿಕೊಡುತ್ತಿದ್ದಾರೆ. ಇವರ ನಡೆ ಹೇಗಾಗಿದೆ ಎಂದರೆ “ಮುಂಗೈ ಕಂಕಣಕ್ಕೆ ಕನ್ನಡಿ ತೋರುವಷ್ಟೆ ಹಾಸ್ಯಾಸ್ಪದವಾಗಿದೆ. ಚಕ್ರವರ್ತಿ ಸೂಲಿಬೆಲೆ ಎಂಬ ವಿವೇಕಯುಕ್ತ ವ್ಯಕ್ತಿಯೂ ಸಹಿತ ವಿವೇಕ ಕಳೆದುಕೊಂಡವರಂತೆ ಮಾತಾಡಿರುವುದನ್ನು ನೋಡಿದರೆ ಆಶ್ಚರ್ಯವನ್ನುಂಟು ಮಾಡಿದೆ. ಶ್ರೀಗಳ ಮಾತುಗಳು ಸಹಜವಾಗಿ ಬಂದಿವೆ ಎಂದೂ, ಒಬ್ಬ ಸಂತನ ವ್ಯಕ್ತಿ ಸ್ವತಂತ್ರ ಹರಣವಾಗಿದೆ ಎಂದು ಬೊಬ್ಬೆಯೊಡೆಯುತ್ತಿರುವ ನೀನು ಒಬ್ಬ ಹಿಂದುವೆ? ಎಂಬ ಸಂಶಯ ಮೂಡುತ್ತಿದೆ. "ರತ್ನದ ಸಂಕೋಲೆಯಾದಡೆ ತೊಡರಲ್ಲವೆ?

ಮುತ್ತಿನ ಬಲೆಯಾದಡೆ ಬಂಧನವಲ್ಲವೆ?
ಚಿನ್ನದ ಕತ್ತಿಯಲ್ಲಿ ತಲೆಹೊಯ್ದಡೆ ಸಾಯದಿರ್ಪರೆ? ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದಡೆ ಜನನಮರಣ ಬಿಡುವುದೆ ಚೆನ್ನಮಲ್ಲಿಕಾರ್ಜುನಾ?” ಅಕ್ಕಮಹಾದೇವಿಯ ಈ ವಚನದಂತೆ ಕನ್ನೇರಿ ಶ್ರೀ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಕೀಳು ಬಾಷೆ ಬಳಸಿ ನಿಂದಿಸಿದ್ದಕ್ಕಾಗಿ ಮತ್ತು ದೇಶದ ಸಂವಿಧಾನದ ವಿರುದ್ಧ ನಡೆದುಕೊಂಡಿದ್ದಕ್ಕಾಗಿ ಅವರು ಈಗ ಅಪರಾಧಿ ಸ್ಥಾನದಲ್ಲಿದ್ದಾರೆ, ನಾಗರಿಕ ಪ್ರಜೆಗಳ ಸಾಲಿನಿಂದ ದೂರವಾದ ಕ್ರಿಮಿಯಾಗಿದ್ದಾರೆ, ಇವರ ಬೆನ್ನಿಗೆ ವಿವೇಕ ಪ್ರಜ್ಞೆಯುಳ್ಳವರು ಯಾರೂ ನಿಲ್ಲಬಾರದು. ಈಗ ಅವರು ಸುಪ್ರೀಂ ಕೋರ್ಟ್ ಆದೇಶದಂತೆ ಕಾವಿ ಬಟ್ಟೆ ಮತ್ತು ಮಠ ತ್ಯಜಿಸಿ ಸಿದ್ಧೇಶ್ವರ ಸ್ವಾಮೀಜಿಯವರ ಜ್ಞಾನಯೋಗಾಶ್ರಮದಲ್ಲಿ ಧ್ಯಾನ ಮಾಡಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಪುನಃ ಬಸವಾದಿ ಶರಣರ ಹಿಂದೂ ಸಮಾವೇಶ ಮಾಡಲು ಮುಂದಾದರೆ ನೀವು ಓದಲ್ಲೆಲ್ಲ ಬಸವ ಭಕ್ತರು ಪ್ರತಿಭಟಿಸುವುದು ಖಚಿತ ಮತ್ತು ಇದೇ ರೀತಿ ಪ್ರತೀ ಜಿಲ್ಲೆಯಿಂದಲೂ ಗಡಿಪಾರಾಗಬೇಕಾಗುತ್ತದೆ. ಕೊಟ್ಯಾಂತರ ಬಸವ ಭಕ್ತರ ಮತ್ತು ಲಿಂಗಾಯತ ಮಠಾಧೀಶರ ಒಕ್ಕೂಟದ ಭಾವನೆಗಳಿಗೆ ಸ್ಪಂದಿಸಿ; ನಮ್ಮ ಪರವಾಗಿ ತೀರ್ಪು ನೀಡಿದ ಮಾನ್ಯ ಸರ್ವೋಚ್ಛ ನ್ಯಾಯಾಲಯಕ್ಕೆ ಅನಂತ ಕೃತಜ್ಞತೆಗಳು. ಬಸವತತ್ವಕ್ಕೆ ಜಯ ಸಿಕ್ಕಂತಾಗಿದೆ. ಗೆದ್ದೆವೆಂಬ ಗರ್ವದಲ್ಲಿ ಸುಮ್ಮನೇ ಕೂಡದೆ ಲಿಂಗಾಯತ ಧರ್ಮ ಹೋರಾಟದ ಕಡೆ ಗಮನ ಕೊಟ್ಟು ಮಾನ್ಯತೆ ಸಿಗುವವರೆಗೂ ಹೋರಾಡುವ ಸಂಕಲ್ಪ ಮಾಡೋಣ ಮತ್ತು ಕನ್ನೇರಿ ಶ್ರೀಯಂತಹ ಒಳ್ಳೆಯ ಪ್ರಜೆಯಲ್ಲದ ಅನಾಗರಿಕರನ್ನ ಬಸವತತ್ವ ಮಾರ್ಗಕ್ಕೆ ತಂದು ಉತ್ತಮ ನಾಗರಿಕ ಪ್ರಜೆಯನ್ನಾಗಿ ರೂಪಿಸೋಣ.

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಮಹಾಮಠ ಗುಣತೀರ್ಥವಾಡಿ-ಬಸವಕಲ್ಯಾಣ

About Mallikarjun

Check Also

screenshot 2025 10 29 16 40 46 37 6012fa4d4ddec268fc5c7112cbb265e7.jpg

ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಗೊಂಡಬಾಳಗೆ ಯುವ ಕಾಂಗ್ರೆಸ್ ಸನ್ಮಾನ

Youth Congress felicitates Congress President Jyoti Gondaba ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಗೊಂಡಬಾಳಗೆ ಯುವ ಕಾಂಗ್ರೆಸ್ ಸನ್ಮಾನ ಕೊಪ್ಪಳ; …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.