Our goal is to provide justice to the oppressed: Mohan Rao Nalawade.

ವರದಿ : ಬಂಗಾರಪ್ಪ .ಸಿ .
ಹನೂರು : ಸಮಾಜದಲ್ಲಿ ಅನ್ಯಾಯಕ್ಕೆ ತುಳಿತಕ್ಕೊಳಗಾದವರಿಗೆ ನ್ಯಾಯ ಕೊಡಿಸುವುದೆ ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಮೊಹನ್ ರಾವ್ ನಲವಾಡೆ ತಿಳಿಸಿದರು .
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯಲ್ಲಿ ಪತ್ರಕರ್ತರನ್ನೂದ್ದೇಶಿಸಿ
ಮಾನವ ಹಕ್ಕುಗಳು ಮತ್ತು ಭ್ರಷ್ಟಚಾರ ವಿರೋದಿ ನಿರ್ಮೂಲನೆ ಘಟಕದ ರಾಷ್ಟ್ರೀಯ ಅಧ್ಯಕ್ಷರಾದ ಮೊಹನ್ ರಾವ್ ನಲವಾಡೆ ಯವರು ಮಾತನಾಡಿ ನಾವು ದೇಶದ್ಯಾಂತ ಸಂಚಾರ ಮಾಡುತ್ತಿದ್ದು ಸಾರ್ವಜನಿಕರಾದ ನಾವೆಲರು ಕೇವಲ ಪೋಲಿಸ್ ರನ್ನೆ ನಂಬಿ ಕೂರುವಿದಕ್ಕೆ ಸಾದ್ಯವಿಲ್ಲ ಅವರ ಜವಾಬ್ದಾರಿ ಮಾತ್ರ ಸಾಕಾಗುವುದಿಲ್ಲ ನಮ್ಮ ಜವಾಬ್ದಾರಿ ಸಹ ಇರುತ್ತದೆ ಅದೇ ರೀತಿಯಲ್ಲಿ ಹೇಳುವುದಾದರೆ ದ್ವಿಚಕ್ರ ವಾಹನ ಅಪಘಾತ ವಾದರೆ ನಮಗೆ ವಿಮೆ ಜಮವಾಗುವುದಿಲ್ಲ ಕಾರಣ ಅವರಿಗೆ ತಿಳುವಳಿಕೆ ಇರುವುದಿಲ್ಲ . ಪ್ರತಿಯೋಬ್ಬರಿಗೂ ಸಹ ಕಾನೂನಿನ ಅರಿವು ತಿಳಿದುಕೊಲ್ಳವುದು ಬಹಳ ಮುಖ್ಯ ಶಾಲಾ ಕಾಲೇಜುಗಳಲ್ಲಿ ಪ್ರಾಧಿಕಾರದಿಂದ ಪ್ರಚಾರ ಮಾಡುತ್ತೇವೆ ನಮ್ಮ ಕಡೆಯಿಂದ ಕಾನೂನು ಸಲಹೆಗಾರರು ಸಹಕಾರ ನಿಮಗೆ ನೀಡಲು ಸದಾ ಸಿದ್ದವಾಗಿದ್ದೇವೆ . ಪೂರ್ವಜರು ಹೋರಾಟ ಮಾಡಿದ ಫಲವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ನಂತರ ನಮಗೆ ದಾಸ ಮುಕ್ತರನ್ನಾಗಿ ಮಾಡುವುದೇ ನಮ್ಮ ಗುರಿಯಾಗಿದೆ, ಸಮಾಜದಲ್ಲಿ ಅನ್ಯಾಯದ ತುಳಿತಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಲು ಸಹಕಾರ ನೀಡುತ್ತೇವೆ . ಇಪ್ಪತ್ತೇಂಟು ವರ್ಷ ಕಳೆದಿದೆ ಯಾರೋ ತಪ್ಪುಮಾಡಿದರೆ ನಮ್ಮ ಪಾತ್ರದ ಬಗ್ಗೆ ಮನವರಿಕೆ ಮಾಡಲಾಗುವುದು . ಮಹಿಳೆಯರು ಮತ್ತು ಎಸ್ ಸಿ ಹಾಗೂ ಎಸ್ ಟಿ . ಗಳಿಗೆ ಯಾವುದೇ ಶುಲ್ಕವಿಲ್ಲದೆ ಕಾನೂನಿನ ನೆರವಿನಿಂದ ಸಹಾಯ ಮಾಡಲಾಗುವುದು .
ಜೊತೆಯಲ್ಲಿ ಪ್ರಾಧಿಕಾರದಿಂದ ಲೋಕಾದಲತ್ಮುಖಾಂತರವು ಸಹ ನಡೆಸಲಾಗುತ್ತದೆ .
ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷವು ಹಲವಾರು ನ್ಯಾಯಗಳನ್ನು ಬಗೆಹರಿಸಲಾಗಿದೆ .
ಬಡವರ ನ್ಯಾಯಗಳನ್ನು ಸಹ ಕಾನೂರನಿನ ನೆರವಿನಿಂದ ಉಚಿತವಾಗಿ ಮಾಡಿಕೊಡಲಾವುದು, ಊರಿಗೊಬ್ಬರಂತೆ ಕಾನೂನಿನ ನೆರವು ನೀಡಲು ಮುಂದಾಗಬೇಕು . ಸಂವಿಧಾನದ ಪ್ರಕಾರ ನಾವು ಸಾಗೋಣ, ಬಾಲ್ಯ ವಿವಾಹ ತಡೆಗಟ್ಟಲು ಸಹಾಯ ಮಾಡಬೇಕು . ಕಾಲೇಜು ಮಕ್ಕಳಿಗೆ ಶಿಕ್ಷಣ ಸಮಯದಲ್ಲಿ ತಿಳುವಳಿಕೆಯನ್ನು ನೀಡಬೇಕು, ಅಮೇರಿಕಾದ ಖಾಸಗಿ ವಲಯದವರು ನಮ್ಮ ದೇಶದಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡಲು ಅವಕಾಶ ಮಾಡಿಕೊಡುತ್ತದೆ ಆದೇ ನಾವುಗಳು ನಮ್ಮ ದೇಶದ ಐಕ್ಯತೆಯನ್ನು ಕಾಪಾಡಿಕೊಂಡು ಹೋಗೋಣವೆಂದರು.
ಇದೇ ಸಂದರ್ಭದಲ್ಲಿ ಮಹೇಂದ್ರ, ಅದ್ಯಕ್ಷರು“ಮಾನವ ಹಕ್ಕುಗಳು ಹಾಗೂ ಭ್ರಷ್ಟಚಾರ ನಿರ್ಮೂಲನ ಸಂಸ್ಥೆ ನವದೆಹಲಿ”
ಹನೂರು ಘಟಕ, ರವಿ ಎಸ್
ಉಪಾದ್ಯಕ್ಷರು, ಪ್ರಭುಸ್ವಾಮಿ ಎಂ
ಮೀಡಿಯಾ ಕಾರ್ಯದರ್ಶಿ, ಸದಸ್ಯರುಗಳಾದ ಕಾರ್ತಿಕ್, ಸಾಗರ್ ನಿಂಗಯ್ಯ,ಮಹೇಂದ್ರ ಎಂ, ವಿನೋದ್ ಡಿ, ಆಯ್ಕೆಯಾದರು. ತಮಿಳುನಾಡು ರಾಜ್ಯದ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸೆಂದಿಲ್, ಹನೂರು ತಾಲೂಕು ಘಟಕದ ಅಧ್ಯಕ್ಷ ಮಹೇಂದ್ರ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kalyanasiri Kannada News Live 24×7 | News Karnataka
