Application invited under the Fisheries Sanctuary Scheme
ಕೊಪ್ಪಳ ಅಕ್ಟೋಬರ್ 15 (ಕರ್ನಾಟಕ ವಾರ್ತೆ): ಮೀನುಗಾರಿಕೆ ಇಲಾಖೆಯಿಂದ 2024-25ನೇ ಸಾಲಿಗೆ ಮತ್ಸಾಶ್ರಯ ಯೋಜನೆಯಡಿ ಕನಕಗಿರಿ ವಿಧಾನ ಕ್ಷೇತ್ರದ ಮೀನುಗಾರರಿಗೆ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಲಾಗುತ್ತಿದ್ದು, ಅರ್ಹ ನಿರ್ವಸತಿ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಯಡಿ ಕನಕಗಿರಿ ವಿಧಾನಸಭಾ ಮತಕ್ಷೇತ್ರಕ್ಕೆ ಸಾಮಾನ್ಯ ವರ್ಗ-38, ಪ.ಜಾತಿ-9, ಪ.ಪಂಗಡ-3 ಸೇರಿದಂತೆ ಒಟ್ಟು 50 ಮನೆಗಳು ಹಂಚಿಕೆಯಾಗಿವೆ. ಕನಕಗಿರಿ ವಿಧಾನಸಭಾ ಕ್ಷೇತ್ರದ ಮೀನುಗಾರರ ಸಹಕಾರ ಸಂಘದ ಸದಸ್ಯರಿಗೆ ಮೊದಲ ಆದ್ಯತೆ ಹಾಗೂ ನಿರ್ವಸತಿ ಮೀನುಗಾರರು ಅಕ್ಟೋಬರ್ 23 ರೊಳಗೆ ಸಹಾಯಕ ನಿರ್ದೇಶಕರ ಕಚೇರಿ, ಗಂಗಾವತಿ ಕಾರ್ಯಾಲಯದಿಂದ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9632338221 ಗೆ ಸಂಪರ್ಕಿಸಬಹುದು ಅಥವಾ ತಾಲ್ಲೂಕಾ ಕಚೇರಿಗೆ ಭೇಟಿ ನೀಡಬಹುದು ಎಂದು ಕೊಪ್ಪಳ ಮೀನುಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.