Breaking News

ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಸಿದ್ಧತೆಗಾಗಿ ಮತದಾರರ ಮಾಹಿತಿ ಸೌಲಭ್ಯ ಕೇಂದ್ರ ಸ್ಥಾಪನೆ

Voter Information Facility Center established for preparation of voter list for North East Teachers' Constituency

ರಾಯಚೂರು ಅಕ್ಟೋಬರ್ 15 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರ ಮತದಾರರ ಪಟ್ಟಿಯನ್ನು ಸಿದ್ದಪಡಿಸುವ ಸಂಬಂಧ ಮತದಾರರ ಮಾಹಿತಿ ಸೌಲಭ್ಯ ಕೇಂದ್ರ ಸ್ಥಾಪಿಸಲಾಗಿದೆ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ತಿಳಿಸಿದ್ದಾರೆ.
ಮತದಾರರು ತಮ್ಮ ನೋಂದಣಿ, ಮತಗಟ್ಟೆ ಹಾಗೂ ಇತರೆ ಮಾಹಿತಿ ಸಂಬಂಧ ಈ ಮುಂದಿನ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ರಾಯಚೂರು ಜಿಲ್ಲೆಗೆ ಸಂಬಂಧಿಸಿದ ಮಾಹಿತಿ ಸೌಲಭ್ಯ ಕೇಂದ್ರವನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯ ರಾಯಚೂರು 08532-228551, ರಾಯಚೂರು ತಾಲೂಕಿನ ಮಾಹಿತಿ ಸೌಲಭ್ಯ ಕೇಂದ್ರವನ್ನು ತಹಸೀಲ್ದಾರ ಕಚೇರಿ ದೂ. 08532-200772, ಮಾನವಿ ಹಾಗೂ ಸಿರವಾರ ತಾಲೂಕು ವ್ಯಾಪ್ತಿಯ ಮಾಹಿತಿ ಸೌಲಭ್ಯ ಕೇಂದ್ರವನ್ನು ಮಾನವಿ ತಹಸೀಲ್ ಕಚೇರಿಯಲ್ಲಿ ದೂ:08538-220239, ದೇವದುರ್ಗ ಹಾಗೂ ಅರಕೇರಾ ತಾಲೂಕು ವ್ಯಾಪ್ತಿಯ ಮಾಹಿತಿ ಸೌಲಭ್ಯ ಕೇಂದ್ರವನ್ನು ದೇವದುರ್ಗ ತಹಸೀಲ್ ಕಚೇರಿಯಲ್ಲಿ ದೂ. 08531-200117, ಲಿಂಗಸೂಗೂರು ತಾಲೂಕು ವ್ಯಾಪ್ತಿಯ ಮಾಹಿತಿ ಸೌಲಭ್ಯ ಕೇಂದ್ರವನ್ನು ದೇವದುರ್ಗ ತಹಸೀಲ್ ಕಚೇರಿಯಲ್ಲಿ ದೂ: 08537-275247, ಸಿಂಧನೂರು ತಾಲೂಕು ವ್ಯಾಪ್ತಿಯ ಮಾಹಿತಿ ಸೌಲಭ್ಯ ಕೇಂದ್ರವನ್ನು ಸಿಂಧನೂರ ತಹಸೀಲ್ ಕಚೇರಿಯಲ್ಲಿ ದೂ: 08535-220151 ಮತ್ತು ಮಸ್ಕಿ ತಾಲೂಕು ವ್ಯಾಪ್ತಿಯ ಮಾಹಿತಿ ಸೌಲಭ್ಯ ಕೇಂದ್ರವನ್ನು ಮಸ್ಕಿ ತಹಸೀಲ್ ಕಚೇರಿಯಲ್ಲಿ ದೂ: 08537-295504ಸ್ಥಾಪನೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತ ಚುನಾವಣಾ ಆಯೋಗವು ದಿನಾಂಕ 12.09.2025ರ ಪತ್ರದನ್ವಯ ದಿನಾಂಕ:11.11.2026ಕ್ಕೆ ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಸದಸ್ಯರ ಪದಾವಧಿಯು ಮುಕ್ತಾಗೊಳ್ಳಲಿದ್ದು ದಿನಾಂಕ 01.11.2025ಕ್ಕೆ ಅನ್ವಯಿಸುವಂತೆ ಮತದಾರರ ಪಟ್ಟಿಯನ್ನು ಸಿದ್ದಪಡಿಸಲು ವೇಳಾಪಟ್ಟಿಯನ್ನು ಹೊರಡಿಸಿರುತ್ತದೆ. ಅದರನ್ವಯ ದಿನಾಂಕ 25.11.2025ರಂದು ಕರಡು ಮತದಾರರ ಪಟ್ಟಿ ಪ್ರಚುರಪಡಿಸಿ ದಿನಾಂಕ 25.11.2025 ರಿಂದ 10.12.2025ರವರೆಗೆ ಆಕ್ಷೇಪಣೆಗಳನ್ನು ಅಹ್ವಾನಿಸಿ ದಿನಾಂಕ 30.12.2025ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಚೂರಪಡಿಸಲು ವೇಳಾಪಟ್ಟಿಯನ್ನು ಹೊರಡಿಸಿ ನಿರ್ದೇಶಿಸಿರುತ್ತಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.