A massive protest was held on October 27th under the leadership of JDS leader K.T. Shanthakumar, demanding the filling of water in Tiptur Amanikere and Itchanur lakes

ತಿಪಟೂರು: ನಗರಕ್ಕೆ ಕುಡಿಯುವ ನೀರೊದಗಿಸುವ ಈಚನೂರು ಕೆರೆ ಯುಜಿಡಿ ಕೊಳಚೆ ನೀರು ತುಂಬಿ ಕಲೂಷಿತವಾಗಿದೆ ಅನುವ ಕಾರಣ ನೀಡಿ ಈಚನೂರು ಕೆರೆಗೆ ನೀರು ತುಂಬಿಸಲಾಗಿಲ್ಲ,ನಗರದ ಅಂತರ್ ಜಲದ ಮೂಲವಾದ ತಿಪಟೂರು ಕೆರೆ ಏರಿ ರಿಪೇರಿ ಹೆಸರಿನಲ್ಲಿ ನೀರಿಲ್ಲದೆ ಬರಿದ್ದಾಗಿದ್ದು ಕೂಡಲೇ ಸರ್ಕಾರ ಈಚನೂರು ಕೆರೆ ಹಾಗೂ ತಿಪಟೂರು ಅಮಾನೀಕೆರೆ ನೀರು ತುಂಬಿಸ ಬೇಕು ಎಂದು ಒತ್ತಾಯಿಸಿ ಅಕ್ಟೋಬರ್ 27ರಂದು ಸೋಮವಾರ ಜೆಡಿಎಸ್ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್ ತಿಳಿಸಿದರು
ನಗರದ ತಮ್ಮ ಗೃಹಕಚೇರಿಯಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು ತಿಪಟೂರು ನಗರಕ್ಕೆ ಶಾಸಕರ ನಿರ್ಲಕ್ಷ್ಯದ ಕಾರಣದಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಆಹಾಕಾರ ಉಂಟಾಗಲಿದೆ.ಈಚನೂರು ಕೆರೆ ಕಲೂಷಿತವಾಗಿದೆ ಅನೋಕಾರಣ ನೀಡಿ,ಈಚನೂರು ಕೆರೆ ತುಂಬಿಸಿಲ್ಲ, ಆದರೂ ಯುಜಿಡಿ ಕೊಳಚೆ ನೀರು ಈಚನೂರು ಕೆರೆಗೆ ಹರಿಯುವುದನ್ನ ತಪ್ಪಿಸಲು ಸಾಧ್ಯವಾಗಿಲ್ಲ,ಈಗಲೂ ಕೊಳಚೆ ನೀರು ಈಚನೂರು ಕೆರೆ ಸೇರುತ್ತಿದೆ,ನಗರಕ್ಕೆ ಕುಡಿಯುವ ನೀರು ಪೂರೈಸುವ ಈಚನೂರು ಕೆರೆ ಬರಿದ್ದಾಗಿದೆ.ಬೇಸಿಗೆ ಕಾಲದಲ್ಲಿ ಬೋರ್ ವೆಲ್ ಗಳ ಕುಡಿಯುವ ನೀರು ಪೂರೈಕೆ ಮಾಡಲು ನೆರವಾಗಲು ತಿಪಟೂರು ಕೆರೆಯಲ್ಲಿ ನೀರಿಲ್ಲದೆ ಅಂತರ್ ಜಲ ಕುಸಿಯುತ್ತಿದ್ದು ಸರ್ಕಾರ ಕೂಡಲೇ ಅಮಾನೀಕೆರೆ ಹಾಗೂ ಈಚನೂರು ಕೆರೆಗೆ ನೀರು ತುಂಬಿಸಬೇಕು.ತಾತ್ಕಾಲಿಕವಾಗಿ ಹೇಮಾವತಿ ನಾಲೆಯಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ನವಂಬರ್ ಅಂತ್ಯಕ್ಕೆ ನಾಲೆ ನೀರು ನಿಲುಗಡೆಯಾದರೆ, ಕುಡಿಯುವ ನೀರಿಗೆ ತೀವ್ರತೊಂದರ ಉಂಟಾಗುತ್ತದೆ.ನಗರದ ನಾಗರೀಕ ಹಿತದೃಷ್ಠಿಯಿಂದ ಕೆರೆಗಳಿಗೆ ನೀರು ತುಂಬಿಸಿ.ನೀರು ತುಂಬಿಸಲು ವಿಫಲವಾದರೆ ಅಕ್ಟೋಬರ್ 27ರಂದು ಸೋಮವಾರ ಜೆಡಿಎಸ್ ಪಕ್ಷದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ಎಂದು ತಿಳಿಸಿದರು.
ಪತ್ರಿಕಾಘೋಷ್ಠಿಯಲ್ಲಿ ಜೆಡಿಎಸ್ ಅಧ್ಯಕ್ಷ ಮತ್ತಿಘಟ್ಟ ಶಿವಸ್ವಾಮಿ.ಗುರುಗದಹಳ್ಳಿ ನಟರಾಜ್ .ಜೆಡಿಎಸ್ ನಗರಾಧ್ಯಕ್ಷ ರಾಜು. ಇಮ್ರಾನ್ ಕೆ.ಕೆ. ಮೋಹನ್ ಜಕ್ಕನಹಳ್ಳಿ.ನಟರಾಜ್.ಹೇಮರಾಜ್.ಈಶ್ವರ್.ನಾಗರಾಜು ಮುಂತ್ತಾದವರು ಉಪಸ್ಥಿತರಿದರು.