Dr. J. Krishna appointed as the in-charge principal of Kolli Nageshwar Rao Government College

ಗಂಗಾವತಿ: ನಗರದ ಕೊಲ್ಲಿನಾಗೇಶ್ವರಾವ್ ಸರಕಾರಿ ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯರಾಗಿ ಹಿರಿಯ ಪ್ರಾಧ್ಯಾಪಕ ಅರ್ಥಶಾಸ್ತ್ರದ ಮುಖ್ಯಸ್ಥರಾದ ಡಾ.ಜೆ.ಕೃಷ್ಣ ಉನ್ನತ ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ಅಧಿಕಾರ ಸ್ವೀಕರಿಸಿದ್ದಾರೆ.
ಈ ಸಂದರ್ಭದಲ್ಲಿ ಅವರು ಮಾತನಾಡಿ, ನಮ್ಮ ಕಾಲೇಜಿನಲ್ಲಿ ಬಹುತೇಕ ಗ್ರಾಮೀಣ ಮತ್ತು ಬಡತನ ಹಿನ್ನೆಲೆಯ ವಿದ್ಯಾರ್ಥಿಗಳು ಓದುತ್ತಿದ್ದು ಅವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಞಾನ ತುಂಬುವ ಮೂಲಕ ಉನ್ನತ ಸ್ಥಾನಕ್ಕೇರಲು ನಾವೆಲ್ಲ ಕಾರ್ಯ ಮಾಡಬೇಕಿದೆ. ಸರಕಾರ ಸಕಲ ಸೌಕರ್ಯಗಳನ್ನು ಕಾಲೇಜಿನಲ್ಲಿ ಕಲ್ಪಿಸಿದ್ದು ವಿದ್ಯಾರ್ಥಿಗಳು ಗ್ರಂಥಾಲಯ ಮತ್ತು ಪ್ರಾಧ್ಯಾಪಕರ ಮಾರ್ಗದರ್ಶನ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕೆಂದರು.
ಪ್ರಾಚಾರ್ಯರ ಹುದ್ದೆಯ ಪ್ರಭಾರ ಬಿಟ್ಟುಕೊಟ್ಟ ಪ್ರಾಧ್ಯಾಪಕಿ ಡಾ.ಮುಮ್ತಾಜ್ ಬೇಗಂ ಮಾತನಾಡಿ, ಒಂದು ವರ್ಷಗಳ ಕಾಲ ಪ್ರಾಚಾರ್ಯ ಹುದ್ದೆಯಲ್ಲಿ ಕಾರ್ಯ ಮಾಡಿದ ತೃಪ್ತಿ ಇದೆ ಎಂದರು.
ಈ ಸಂದರ್ಭದಲ್ಲಿ ಪ್ರಾಧ್ಯಾಕರಾದ ಫಣಿರಾಜ್ ಬಾರಿಕೇರ್, ಅಣ್ಣೋಜಿರೆಡ್ಡಿ, ದೊರೆಬಾಬು, ಇಬ್ರಾಹಿಂ ಸಾಬ, ಮಲ್ಲಿಕಾರ್ಜುನ, ಮಂಜುನಾಥ, ಅನಿಲ್ ಎಡ್ವರ್ಡ್, ರವಿ, ಶೋಭಾರಾಣಿ, ಅನಿತಾ, ಅಶ್ರಫ್, ರವಿಕುಮಾರ, ಮಾರುತಿ ಅಕ್ಕಿ, ಪಂಚಕ್ಷರಯ್ಯ, ಶ್ರೀಶೈಲ ಪೂಜಾರಿ, ಶಾಹೀನ್ ಕೌಸರ್, ಜಿ.ಪವನಕುಮಾರ್, ಮುದುಕನಗೌಡ, ಸುರೇಶ, ತಾಯಪ್ಪ, ರಾಘವೇಂದ್ರ ಚೌಡ್ಕಿ, ವಿಜಯಮಹಾಂತೇಶ ಸೇರಿ ಅನೇಕರಿದ್ದರು.
ಕೊಲ್ಲಿ ನಾಗೇಶ್ವರಾವ್ ಸರಕಾರಿ ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯರಾಗಿ ಡಾ.ಜೆ.ಕೃಷ್ಣ ನಿಯೋಜನೆ
ಕಿಷ್ಕಿಂಧವಾಣಿ ಸುದ್ದಿ