Demand for permanent ban on Ispeet gambling in Gangavathi taluk: Ramesh Vithalapur

ಗಂಗಾವತಿ: ತಾಲೂಕಿನ ಮಲ್ಲಾಪುರ, ಹಿರೇಜಂತಕಲ್, ದೇವಘಾಟ್, ವಾಣಿಭದ್ರೇಶ್ವರ ಗುಡ್ಡ, ವೆಂಕಟಗಿರಿ, ಗಡ್ಡಿ, ಉಡುಮಕಲ್ (ಸೋಲಾರ ಪ್ಲ್ಯಾಂಟ್), ಕರಡಿಗುಡ್ಡ, ಹೇರೂರು ಕಾಲುವೆ ಹತ್ತಿರ ಹಾಗೂ ಗಂಗಾವತಿ ಗಂಜ್‌ನಲ್ಲಿ ಹೆಗ್ಗಿಲ್ಲದೆ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ಅಕ್ರಮ ಮತ್ತು ಲಂಚ ನಿರ್ಮೂಲ ವೇದಿಕೆ ಯ ರಾಜ್ಯಾಧ್ಯಕ್ಷರಾದ ರಮೇಶ ವಿಠಲಾಪುರ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ಅವರು ಗಂಗಾವತಿ ಸುತ್ತಮುತ್ತ ನಡೆಯುತ್ತಿರ ತಡೆಯಲು ಅಕ್ಟೋಬರ್-೮ ರಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು. ಸದರಿ ಜೂಜಾಟಗಳಿಗೆ ಕೆಲವು ರೌಢಿಶೀಟರ್‌ಗಳನ್ನು ಬಳಸಿಕೊಂಡು ರಾತ್ರಿ ವೇಳೆಯಲ್ಲಿ ದುಡ್ಡು ಮಾಡಲು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಈ ದಂಧೆಕೋರರು ಯಾವುದೇ ರೀತಿಯ ಕಾನೂನು ಭಯವಿಲ್ಲದೆ, ರಾಜಾರೋಷವಾಗಿ ಮಧ್ಯರಾತ್ರಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದು, ಈ ಅಕ್ರಮ ಜೂಜಾಟಗಳ ಬಗ್ಗೆ ಕೆಲವು ಅಧಿಕಾರಿಗಳ ಗಮನಕ್ಕಿದ್ದರೂ ಸಹ ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ. ಇಂತಹ ಜೂಜಾಟಗಳಿಂದ ಯುವಪೀಳಿಗೆ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ.

ಈ ಜೂಜಾಟಗಳಲ್ಲಿ ಭಾಗಿಯಾಗಿರುವ ರೌಡಿಶೀಟರ್‌ಗಳ ಮೇಲೆ ಶಿಸ್ತು ಕಾನೂನು ಕ್ರಮ ಜರುಗಿಸಬೇಕು ಹಾಗೂ ಮೇಲ್ಕಾಣಿಸಿದ ಗಂಗಾವತಿ ತಾಲೂಕಿನ ಗ್ರಾಮಗಳಲ್ಲಿ ಜೂಜಾಟವನ್ನು ಸಂಪೂರ್ಣವಾಗಿ ನಿಷೇದ ಮಾಡಿ ಹಾಗೂ ರೌಢಿಶೀಟರ್‌ಗಳ ಮೇಲೆ ನಿಗಾವಹಿಸಲು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಸೇರಿದಂತೆ ಪದಾಧಿಕಾರಿಯಾದ ದುರುಗೇಶ ವಟಪರ್ವಿ, ವಿಜಯ ಮಹಾಂತೇಶ ಉಪಸ್ಥಿತರಿದ್ದರು.