Demand for immediate repair of the communal toilets in the 7th ward...

ಗಂಗಾವತಿ:ಗುರವಾರ ಮೆಹಬೂಬ್ ನಗರ ನಾಗರಿಕರ ಹೋರಾಟ ಸಮಿತಿ ನೇತೃತ್ವದಲ್ಲಿ ಗಂಗಾವತಿಯ ಮೆಹಬೂಬ್ ನಗರದಲ್ಲಿರುವ ಒಟ್ಟು ಮೂರು, ಮಹಿಳೆಯರ ಸಾಮೂಹಿಕ ಶೌಚಾಲಯಗಳನ್ನು ಕೂಡಲೇ ದುರಸ್ಥಿ ಮಾಡಿ, ಉಪಯೋಗಯೋಗ್ಯ ಮಾಡಬೇಕು ಮತ್ತು ಅವುಗಳ ನಿರ್ವಹಣೆ ಸರಿಯಾಗಿ ನಡೆಯಬೇಕು.. ಅದೇ ರೀತಿ ಇತ್ತೀಚಿಗೆ ವಾರ್ಡ್ 7 ರಲ್ಲಿ ಹರಿಯುವ ದುರುಗಮ್ಮ ಹಳ್ಳಕ್ಕೆ 4 ವರ್ಷದ ಮಗು ಬಿದ್ದು ಜೀವ ಕಳೆದುಕೊಂಡಿದೆ.. ಹಳ್ಳದ ರಸ್ತೆಯ ಎರಡು ಕಡೆ ತಡೆ ಗೋಡೆಗಳನ್ನು ನಿರ್ಮಿಸಬೇಕು ಮತ್ತು ಗುಂಡಿ ಬಿದ್ದಿರುವ ರಸ್ತೆಗಳನ್ನು ತಕ್ಷಣವೇ ಸರಿಪಡಿಸಬೇಕೆಂದು ಮನವಿ ಮಾಡಲಾಯಿತು… ಮನವಿ ಸ್ವೀಕರಿಸಿದ ಪೌರಯುಕ್ತರಾದ ವಿರೂಪಾಕ್ಷ ಮೂರ್ತಿ ಸಕಾರಾತ್ಮಕವಾಗಿ ಸ್ಪಂದಿಸಿದರು… ಈ ಸಂದರ್ಭದಲ್ಲಿ ಮೆಹಬೂಬ್ ನಗರ ನಿವಾಸಿ ಮತ್ತು ಯುವ ಮುಖಂಡರಾದ ಮೈನುದ್ದಿನ್, ಖಾಜಾ ಹುಸೇನ್ ಹಾಗೂ ಹೋರಾಟಗಾರರಾದ ಶರಣು ಪಾಟೀಲ್, ಇದ್ದರು…