Hulagappa Kojji submitted a petition to the Social Welfare Department officials condemning the fact that the food served to the children of the Dr. Ambedkar Boys' Residential Home in Sainagar is being eaten by the idols.
ಗಂಗಾವತಿ ನಗರದ ಸಾಯಿನಗರದಲ್ಲಿ ಬರುವ ಡಾ.ಬಿ.ಆರ್. ಅಂಬೇಡ್ಕರ ಸರ್ಕಾರಿ ಮೆಟ್ರಿನ್ ನಂತರದ ಬಾಲಕರ ವಸತಿ ನಿಯಲದಲ್ಲಿ ಬಾತ್ ರೂಮ್, ಕಿಚನ್, ಗಲೀಜಿನಿಂದ ಕೂಡಿದ್ದು ಸದರಿ ಅಧಿಕಾರಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳು ವ ಕುರಿತು ಒತ್ತಾಯಿಸಿ ಭಾರತೀಯ ಪ್ರಜಾ ಸೇನೆ. ಕಾರ್ಯದರ್ಶಿ ಹುಲಗಪ್ಪ ಕೊಜ್ಜಿ ಮನವಿಸಲ್ಲಿ ಸಿದರು.

ಗಂಗಾವತಿ ನಗರದ ಸಾಯಿನಗರದಲ್ಲಿ ಬರುವ ಡಾ.ಬಿ.ಆರ್. ಅಂಬೇಡ್ಕರ ಸರ್ಕಾರಿ ಮೆಟ್ರಿನ್ ನಂತರದ ಬಾಲಕರ ವಸತಿ ನಿಲಯ ಇದ್ದು, ಸದರಿ ವಸತಿ ನಿಲಯದಲ್ಲಿ ಬಾತ್ ರೂಮ್, ಕಿಚನ್ ಇನ್ನಿತರೇ ರೂಮುಗಳು ಸ್ವಚ್ಛತೆಯಿಂದ ಕೂಡಿದ್ದರೆ ಅಲ್ಲಿನ ವಿದ್ಯಾರ್ಥಿಗಳು ಆರೋಗ್ಯವಾಗಿ ಇರುತ್ತಾರೆ. ಆದರೆ ಸದರಿ ವಸತಿ ನಿಲಯದಲ್ಲಿ ಬಾತ್ ರೂಮ್ ಕೊಳೆತು ನಾರುತ್ತಿದೆ. ಮತ್ತು ನೀರಿನ ಪೈಪುಗಳು ಲೀಕೇಜ್ ಆಗಿ ಬಾತ್ ರೂಮ್ ಹತ್ತಿರ ನೀರು ನಿಂದಿವೆ ಇದರಿಂದ ಅಲ್ಲಿ ಪಾಚಿ ಬೆಳೆದು ವಿದ್ಯಾರ್ಥಿಗಳು ಸ್ಥಾನಕ್ಕೆ ಹೋದಾಗ ಕಾಲು ಜಾರಿ ಬಿದ್ದು ಕೈಕಾಲುಗಳನ್ನು ಮುರಿದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಮತ್ತು ನೀರು ನಿಲ್ಲುವುದರಿಂದ ಅಲ್ಲಿ ಗಲೀಜು ವಾತಾವರಣ ಸೃಷ್ಟಿಯಾಗಿ ಸೊಳ್ಳೆ ಇನ್ನಿತರ ಕ್ರಿಮಿಗಳು ಬಂದು ವಿದ್ಯಾರ್ಥಿಗಳಿಗೆ ಸೊಳ್ಳೆಗಳು ಕಡಿತದಿಂದ ಡೆಂಗ್ಯೂ ಇನ್ನಿತರ ರೋಗಕ್ಕೆ ತುತ್ತಾಗುತ್ತಾರೆ. ಹಾಗೂ ಕಿಚನ್ ರೂಮ್ ಇದ್ದು ಇಲ್ಲಿಯು ಸಹ ಗಬ್ಬು ನಾರುತ್ತಿದೆ. ಒಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸಾಕ್ರಾಮಿಕ ರೋಗಗಳು ಹರಡುವ ಸಾದ್ಯತೆಗಳು ಇರುತ್ತವೆ. ಹಾಗೂ ಸದರಿ ವಿದ್ಯಾರ್ತಿಗಳಿಗೆ ಊಟ ಸಹ ಸರಿಯಾಗಿ ಇರುವುದಿಲ್ಲ. ಆದ್ದರಿಂದ ಹಾಸ್ಟೇಲ್ ವಾರ್ಡನ್ ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ ಎಂದು ಕಂಡು ಬರುತ್ತದೆ. ಆದ್ದರಿಂದ ವಾರ್ಡನ್ ಮೇಲೆ ಸೂಕ್ತ ಕ್ರಮ ಕೈಗೊಂಡು ಬಾತ್ ರೂಮ್ ಮತ್ತು ಕಿಚನ್ ದುರಸ್ಥಿ ಮಾಡಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ತಮ್ಮಲ್ಲಿ ಮನವಿ ಸಲ್ಲುಸಲಾಯಿತು ಎಂದು ಭಾರತೀಯ ಪ್ರಜಾ ಸೇನ ಕಾರ್ಯದರ್ಶಿ ಹುಲುಗಪ್ಪ ಕೊಜ್ಜಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.