CM delegation opposes Baldota: MSPL Airport meets CM.

ಕೊಪ್ಪಳ: ಇಲ್ಲಿನ ಬಸಾಪುರ ಎಂಎಸ್ಪಿಎಲ್ ವಿಮಾನ ನಿಲ್ದಾಣದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಕೊಪ್ಪಳ ಇದರ ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಡಿ.ಎಚ್.ಪೂಜಾರ, ಕೆ.ಬಿ.ಗೋನಾಳ, ಮಹಾಂತೇಶ ಕೊತಬಾಳ, ಶರಣು ಗಡ್ಡಿ, ಕರೀಮ್ ಪಾಷಾ ಗಚ್ಚಿನಮನಿ ಇವರು ನಿಯೋಗದಿಂದ ಕಾರ್ಖಾನೆ ದೂಳು ಬಾಧಿತ 20 ಹಳ್ಳಿಗಳಿಗೆ ಮುಖ್ಯಮಂತ್ರಿ ಖುದ್ದಾಗಿ ಭೇಟಿ ಕೊಡಬೇಕು ಎನ್ನಲು ಸಿ.ಎಂ. ಭೇಟಿ ಕೊಡಲು ಒಪ್ಪಿಕೊಂಡರು. ಈಗಿರುವ ಬಲ್ಡೋಟ ಎಂಎಸ್ಪಿಎಲ್ ಪಲ್ಲೆಟ್ ಘಟಕದಿಂದ ನಗರದ 40 ಭಾಗ ಪರಿಸರ ಹಾನಿಯಾಗಿದ್ದು ಜನರ ಆರೋಗ್ಯದ ಹಿತದೃಷ್ಟಿಯಿಂದ ಆ ಘಟಕ ಬಂದ್ ಮಾಡಬೇಕು, ಬಸಾಪುರ 44.35 ಎಕರೆ ಕೆರೆಯನ್ನು ಸಾರ್ವಜನಿಕರು ಬಳಸಲು ಮುಕ್ತವಾಗಿಡಬೇಕು ಎಂದಾಗ, ನಾನು ಇಲ್ಲಿ ಚುನಾವಣೆಗೆ ನಿಂತಿದ್ದೇನೆ ನನಗೆ ಎಲ್ಲಾ ಗೊತ್ತಿದೆ ಎಂದಾಗ ಶಾಸಕ ರಾಘವೇಂದ್ರ ಹಿಟ್ನಾಳ ಮಧ್ಯಪ್ರವೇಶ ಮಾಡಿ ಗಡಿಬಿಡಿ ಮಾಡಿ ದಾರಿ ತಪ್ಪಿಸಲು ಮುಂದಾದರು. ಆಗ ವೇದಿಕೆಯವರು ನೀವೇ ಜನರ ಸಮಸ್ಯೆ ಕುರಿತು ಹೇಳಬೇಕು ಅಂತದ್ದರಲ್ಲಿ ಗಡಿಬಿಡಿ ಏಕೆ ಮಾಡುತ್ತೀರಿ ಎಂದು ಪ್ರಶ್ನಿಸಿದರು. ತಕ್ಷಣ ಬಲ್ಡೋಟ ಬಿಎಸ್ಪಿಎಲ್ ಬೇಡವೇ ಬೇಡ ಎಂದು ವೇದಿಕೆಯವರು ಘೋಷಣೆ ಕೂಗಿದರು. ಅಲ್ಲಿದ್ದವರು ಘೋಷಣೆ ಹಿಂಬಾಲಿಸಿದರು.
ಇತ್ತ ಬೆಳಿಗ್ಗೆಯಿಂದಲೇ ಅಶೋಕ ವೃತ್ತದಲ್ಲಿ ವೇದಿಕೆಯ ಬ್ಯಾನರ್ ಹಿಡಿದು ಬಲ್ಡೋಟ ತೊಲಗಲಿ, ಕೊಪ್ಪಳ ಉಳಿಯಲಿ, ಮುಖ್ಯಮಂತ್ರಿ ಬಾಧಿತ ಹಳ್ಳಿಗಳಿಗೆ ಭೇಟಿ ನೀಡಬೇಕೆಂದು ಪ್ರತಿಭಟನೆಗೆ ಮುಂದಾದ ನೂರಾರು ಮಹಿಳೆಯರು ಮತ್ತು ಚಳವಳಿಕಾರರ ನೇತೃತ್ವ ವಹಿಸಿದ್ದ ಮುಖಂಡರಾದ ಬಸವರಾಜ ಶೀಲವಂತರ, ಮುದುಕಪ್ಪ ಹೊಸಮನಿ, ಎಸ್.ಎ.ಗಫಾರ್, ಮೂಕಪ್ಪ ಮೇಸ್ತ್ರಿ ಬಸಾಪುರ, ಚನ್ನಬಸಪ್ಪ ಅಪ್ಪಣ್ಣವರ, ಗವಿಸಿದ್ದಪ್ಪ ಹಲಗಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ಬಂದೇನವಾಜ್ ಮಣಿಯಾರ, ಗಿಣಿಗೇರಿ ನಾಗರಿಕ ಹೋರಾಟ ಸಮಿತಿ ಮುಖಂಡರಾದ ಮಂಗಳೇಶ ರಾತೋಡ್ ಹನುಮಂತ ಕಟಗಿ ಗಿರಿಯಮ್ಮ ಮಾಲಿಪಾಟೀಲ ಕುಣಿಕೇರಿ, ಚನ್ನವೀರಯ್ಯ ಹಿರೇಮಠ ಕುಣಿಕೇರಿ, ಗೌರಮ್ಮ ಪೂಜಾರ ಕುಣಿಕೇರಿ, ಹನುಮಂತಪ್ಪ ಗೊಂದಿ, ಕುಪ್ಪವ್ವ ಕಲ್ಗುಡಿ ಕುಣಿಕೇರಿ, ಗಂಗಮ್ಮ ಗಾಂಧಿನಗರ, ಭೀಮಪ್ಪ ಯಲಬುರ್ಗಾ, ಗಾಳೆಪ್ಪ ಮುಂಗೋಲಿ, ಶಿವಪ್ಪ ಹಡಪದ, ಹಂಚಾಳಪ್ಪ, ಕಾಶಪ್ಪ ಚಲವಾದಿ, ರಘು ಚಾಕ್ರಿ, ಮಂಜುನಾಥ ಬೆಲ್ಲದ, ಸುಂಕಪ್ಪ ಮೀಸಿ, ಬಸವರಾಜ ನರೇಗಲ್, ಚಿಟ್ಟಿಬಾಬು ಸಿಂಧನೂರು, ರೇಣುಕಾ ಸಿಂಧನೂರು, ಪಾಮಣ್ಣ ಮಲ್ಲಾಪುರ, ಸಣ್ಣ ಹನುಮಂತಪ್ಪ ಹುಲಿಹೈದರ, ನಜೀರಸಾಬ್ ಮೂಲಿಮನಿ, ಹನುಮಂತಪ್ಪ ಚಿಂಚಲಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.
