The teacher who completed the survey work first was felicitated by the Taluka Chief.
ಮೂಡಲಗಿ:ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸೆ.22 ರಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಮಗೆ ವಹಿಸಿದ್ದ ಕರ್ತವ್ಯವನ್ನು ಕೇವಲ 8 ದಿನಗಳಲ್ಲಿ ಪ್ರ ಪ್ರಥಮವಾಗಿ ಪೂರ್ಣಗೊಳಿಸಿದ ಶಿಕ್ಷಕ ಅಶೋಕ ಬಸಳಿಗುಂದಿ ಅವರನ್ನು ತಾಲೂಕಾ ಆಡಳಿತದಿಂದ ತಹಸೀಲ್ದಾರ ಶ್ರೀಶೈಲ ಗುಡುಮೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಪಿ ಬಿ ಹಿರೇಮಠ ಅವರು ಸತ್ಕರಿಸಿ ಅಭಿನಂದಿಸಿದರು.
ಮೂಡಲಗಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಇವರಿಗೆ ಹನ್ನೊಂದನೇ ವಾರ್ಡಿನ 85 ಮನೆಗಳ ಸಮೀಕ್ಷೆಗೆ ನಿಯೋಜಿಸಲಾಗಿತ್ತು. ಸಮೀಕ್ಷೆ ಪೂರ್ಣಗೊಳ್ಳಲು ಇನ್ನೂ 15 ದಿನಗಳು ಇದ್ದರೂ ಕೇವಲ 8 ದಿನಗಳಲ್ಲಿ ಎಲ್ಲ ಮನೆಗಳ ಸಮೀಕ್ಷೆಯನ್ನು ಸಂಗ್ರಹಿಸುವ ಮೂಲಕ ಪ್ರಥಮವಾಗಿ ಪೂರ್ಣಗೊಳಿಸಿದ ಹೆಗ್ಗಳಿಕೆ ಇವರದಾಗಿದೆ. ಇವರ ತ್ವರಿತ ಕಾರ್ಯದ ಪ್ರಗತಿಗೆ ತಾಲೂಕಾಡಳಿತವು ಶ್ಲಾಘನೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಹಿಂದುಳಿದ ಇಲಾಖೆ ವಸತಿ ಶಾಲೆ ನಿಲಯಪಾಲಕ ಎಸ್ ಎಸ್ ಸೋರಗಾಂವಿ, ಇ ಸಿ ಓ ಗಡಾದ, ತಾಂತ್ರಿಕ ಸಲಹೆಗಾರ ಎ ಬಿ ಬಾಗೇವಾಡಿ, ಮೇಲ್ವಿಚಾರಕ ಸಮೀರ ದಬಾಡಿ, ಬಿ ಆರ್ ಪಿ ಎಸ್ ವೈ ಮೂಡಲಗಿ, ಶಿಕ್ಷಕ ಎಸ್ ಎಂ ಶೆಟ್ಟರ್ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.