New District Visual Media Association formed
Mukkanna Kathi elected as President, Raju B. R elected as General Secretary

ಕೊಪ್ಪಳ:ನೂತನ ಜಿಲ್ಲಾ ದೃಶ್ಯ ಮಾಧ್ಯಮ (ಎಲೆಕ್ಟ್ರಾನಿಕ್ ಮೀಡಿಯಾ) ಸಂಘ ರಚನೆಯಾಗಿದ್ದು, ಜಿಲ್ಲಾ ಮಟ್ಟದ ಪದಾಧಿಕಾರಿಗಳನ್ನು, ದೃಶ್ಯ ಮಾಧ್ಯಮದ ಸರ್ವ ಸದಸ್ಯರು ಸರ್ವಾನುಮತದಿಂದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನಗರದ ಪ್ರವಾಸಿ ಮಂದಿರದಲ್ಲಿ ಸಭೆ ಮಾಡಿದ ದೃಶ್ಯ ಮಾಧ್ಯಮದ ವರದಿಗಾರರು ಹಾಗೂ ಕ್ಯಾಮೆರಾಮಾನ್ ಗಳು ನೂತನ ಜಿಲ್ಲಾ ದೃಶ್ಯ ಮಾಧ್ಯಮ ಸಂಘವನ್ನು ರಚನೆ ಮಾಡಿದರು. ನಂತರ ಸಂಘದ ಎಲ್ಲಾ ಸದಸ್ಯರು ಸರ್ವಾನುಮತದಿಂದ ಸಂಘದ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು. ಸಂಘದ ನೂತನ ಹಾಗೂ ಪ್ರಥಮ ಜಿಲ್ಲಾಧ್ಯಕ್ಷರಾಗಿ ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ಮುಕ್ಕಣ್ಣ ಕತ್ತಿ..
ಉಪಾಧ್ಯಕ್ಷರಾಗಿ ಪವರ್ ಟಿವಿ ಕ್ಯಾಮೆರಾಮಾನ್ ಉಮೇಶ್ ಅಬ್ಬಿಗೇರಿ ಪ್ರಧಾನ ಕಾರ್ಯದರ್ಶಿಯಾಗಿ ನ್ಯೂಸ್ ಫಸ್ಟ್ ಕನ್ನಡ ವರದಿಗಾರ ರಾಜು.ಬಿ.ಆರ್.ಖಜಾಂಚಿಯಾಗಿ ಈಟಿವಿ ಭಾರತಿ ವರದಿಗಾರ ಜಗದೀಶ್ ಚಿಟ್ಟಿ ಹಾಗೂ ಕಾರ್ಯದರ್ಶಿಯಾಗಿರಾಜ್ ಟಿವಿ ವರದಿಗಾರ ಸಿದ್ದು ಹಿರೇಮಠ, ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ , ಟಿವಿ9 ವರದಿಗಾರ ಶಿವಕುಮಾರ್ ಪತ್ತಾರ್, ಸುವರ್ಣ ಟಿವಿ ವರದಿಗಾರ ದೊಡ್ಡೇಶ್ ಯಲಿಗಾರ, ಪವರ್ ಟಿವಿ ವರದಿಗಾರ ಶುಕ್ರರಾಜ್, ರಿಪಬ್ಲಿಕ್ ಟಿವಿ ವರದಿಗಾರ ಈರಯ್ಯ ಹಿರೇಮಠ, ಟಿವಿ೫ ವರದಿಗಾರ ನಾಗಾರಜ್ ವೈ, ಜಿಟಿವಿ ವರದಿಗಾರ, ಬಸವರಾಜ್, ಇಂಡಿಯ ಟುಡೆ ವರದಿಗಾರ ಮಲ್ಲು ಪರೂತಿ, ಎಎನ್ ಐ ಟಿವಿ ವರದಿಗಾರ ಧರ್ಮಣ್ಣ ಹಟ್ಟಿ, ಟಿವಿ9 ಕ್ಯಾಮೆರಾಮಾನ್ ಮಾರುತಿ ಕಟ್ಟಿಮನಿ, ಪಬ್ಲಿಕ್ ಟಿವಿ ಕ್ಯಾಮೆರಾಮಾನ್ ಮಾನ್ ವಿನಾಯಕ ಸುವರ್ಣ ಟಿವಿ ಕ್ಯಾಮೆರಾಮಾನ್ ಸಮೀರ್ ಆಯ್ಕೆಯಾಗಿದ್ದಾರೆ.
ನ್ಯೂಸ್ 18 ಹಿರಿಯವರದಿಗಾರರಾದ ಶರಣಪ್ಪ ಬಾಚಲಪುರ, ಟಿವಿ5 ಕ್ಯಾಮೆರಾಮಾನ್ ಅಂಜೀನಯ್ಯ, ರಾಜ್ ಟಿವಿ ಕ್ಯಾಮೆರಾಮಾನ್ ಕುಂದಗೋಳ, ಸಂಘದ ಸದಸ್ಯರಾಗಿದ್ದು, ಸರ್ವಾನುಮತದಿಂದ ಎಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದಾರೆ.