Breaking News

ಮಾಜಿ ದೇವದಾಸಿ ಮರುಸಮೀಕ್ಷೆ : ಅರ್ಜಿ ಸಲ್ಲಿಕೆ ಅವಧಿ ಅ.15 ರವರೆಗೆ ವಿಸ್ತರಣೆ

Former Devadasi Re-evaluation: Application submission period extended till October 15
ಕೊಪ್ಪಳ ಸೆಪ್ಟೆಂಬರ್ 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಮಹಿಳಾ ಮತ್ತಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನೆಡೆಸಲಾಗುತ್ತಿರುವ ಮಾಜಿ ದೇವದಾಸಿ ಮಹಿಳೆಯರ ಮರುಸಮೀಕ್ಷೆಯಲ್ಲಿ ಭಾಗವಹಿಸಲು ಬಯಸುವ ಮಹಿಳೆಯರು ಮತ್ತು ಕುಟುಂಬಗಳಿAದ ನಿಗದಿತ ನಮೂನೆಗಳಲ್ಲಿ ಅರ್ಜಿ ಸಲ್ಲಿಸಲು ಅಕ್ಟೋಬರ್ 15 ರವರೆಗೆ ಅವಧಿ ವಿಸ್ತರಿಸಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ-2025ಯನ್ನು ಕೈಗೊಂಡಿದ್ದು, ಈಗಾಗಲೇ ಸರ್ಕಾರದಿಂದ 1993-94 ಮತ್ತು 2007-08ನೇ ಸಾಲುಗಳಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಇದ್ದು, ಮರಣ ಹೊಂದಿರುವ ಮಹಿಳೆಯ ಕುಟುಂಬದ ಅಧೀಕೃತ ಸದಸ್ಯರು ನಮೂನೆ-1 ರಲ್ಲಿ, ಆ ಸಮೀಕ್ಷೆಯಲ್ಲಿ ಹೊರಗುಳಿದ, ಹಾಲಿ ಜೀವಂತವಿರುವ ಹೊಸದಾಗಿ ದೇವದಾಸಿ ಪಟ್ಟಿಗೆ ಸೇರ್ಪಡೆ ಬಯಸುವ ದೇವದಾಸಿ ಮಹಿಳೆಯರು ನಮೂನೆ-2 ರಲ್ಲಿ ಹಾಗೂ ಸಮೀಕ್ಷೆಯಲ್ಲಿ ಹೊರಗುಳಿದ ಮತ್ತು ಪ್ರಸ್ತುತ ಮರಣ ಹೊಂದಿರುವ ಮಹಿಳೆಯರ ಕುಟುಂಬದ ಅಧಿಕೃತ ಸದಸ್ಯರು ನಮೂನೆ-3 ರಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ದಾಖಲೆಗಳಾದ ಮಹಿಳೆಯ ಆಧಾರ್ ಕಾರ್ಡು, ಮಹಿಳೆಯ ಮರಣ ಪ್ರಮಾಣ ಪತ್ರ, ವಂಶವೃಕ್ಷ, ಕುಟುಂಬದ ಅಧೀಕೃತ ಸದಸ್ಯರ ಆಧಾರ ಕಾರ್ಡು ಮತ್ತು ಹೊಸ ಸೇರ್ಪಡೆ ಬಯಸುವ ಮಹಿಳೆಯರ ವಯಸ್ಸಿನ ದೃಢೀಕರಣ ಪತ್ರಗಳೊಂದಿಗೆ ಅರ್ಜಿಯನ್ನು ಸಂಬAಧಪಟ್ಟ ಆಯಾ ತಾಲ್ಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಅ. 15 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಹಾಗೂ ಮಾಜಿ ದೇವದಾಸಿ ಮಹಿಳೆಯರ ಮರುಸಮೀಕ್ಷೆ ಜಿಲ್ಲಾ ಮಟ್ಟದ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Mallikarjun

Check Also

img202510021202142.jpg

ಸ್ವಾಭಿಮಾನಿ ಕಲ್ಯಾಣ ಪರ್ವ 12ನೇ ಶತಮಾನದ ಶರಣರ ಸ್ವಾಭಿಮಾನದ ಪ್ರತೀಕ

Swabhimani Kalyana Parva is a symbol of the self-respect of the 12th century Sharanas. ಹನ್ನೆರಡನೇ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.