735th rank honoured in NEET exam.
ಗಂಗಾವತಿ: ತಾಲೂಕಿನ ಮಲ್ಲಾಪೂರ ಗ್ರಾಮದ ಬಿ.ಲಿಂಗಣ್ಣ ಮತ್ತು ಶೈಲಜಾ ದಂಪತಿಗಳ ಪುತ್ರ ಡಾ.ಬಿ. ಲೋಹಿತ್ ವೈಧ್ಯಕೀಯ ಸ್ನಾತಕೋತ್ತರ ನೀಟ್ ಪರೀಕ್ಷೆಯಲ್ಲಿ 735 ನೇ ರ್ಯಾಂಕ್ ಪಡೆದಿದ್ದಕ್ಕಾಗಿ ವಿಶ್ವ ಔಷಧ ತಜ್ಞರ ದಿನಾಚರಣೆಯ ಅಂಗವಾಗಿ ಸೋಮವಾರ ಹಮ್ಮಿ ಕೊಂಡಿದ್ದ ಔಷಧ ವ್ಯಾಪಾರಿಗಳ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಮಾಜಿ ಸಂಸದ ಸಂಗಣ್ಣ ಕರಡಿ, ಸಿದ್ದರಾಮ ಸ್ವಾಮಿ, ವೆಂಕಟೇಶ ರಾಠೋಡ,ಎಚ್.ಗಿರೇಗೌಡ,ಅಶೋಕಸ್ವಾಮಿ ಹೇರೂರ, ವಿರುಪಾಕ್ಷಪ್ಪ ಸಿಂಗನಾಳ, ಮನೋಹರಗೌಡ ಹೇರೂರ, ಉಪ ಪೋಲೀಸ್ ಅಧೀಕ್ಷಕರಾದ ಸಿದ್ದಲಿಂಗಪ್ಪ ಗೌಡ ಪಾಟೀಲ್,ತಿಪ್ಪೇರುದ್ರಸ್ವಾಮಿ, ಸಂಧ್ಯಾ ಹೇರೂರ, ನಂದಿನಿ ಮುದಗಲ್,ಚಂದ್ರು ಹೇರೂರ ಮತ್ತಿತರರು ಸಾಕ್ಷಿಯಾದರು.