The Lingayat community is not a poor land where cattle come and graze - Gangadhar Doddavada
ಲಿಂಗಾಯತ ಸಮಾಜವು ತನ್ನದೇ ಆದ ತತ್ವ ಸಿದ್ಧಾಂತ, ನೀತಿ, ನಿಯಮಾವಳಿಗಳನ್ನು ಒಳಗೊಂಡ ಕನ್ನಡ ನಾಡಿನ ಅತ್ಯಂತ ದೊಡ್ಡ ಸಮಾಜವಾಗಿದೆ. ಈ ಸಮಾಜವನ್ನು ಒಡೆದು ಆಳುವ ಪದ್ಧತಿ ಸರ್ಕಾರದ್ದಲ್ಲ ಕೆಲವು ಪಕ್ಷಗಳದ್ದಾಗಿದೆ, ಮತ್ತು ಸಂಘಟನೆಗಳದ್ದಾಗಿದೆ, ಕೆಲವು ಪಟ್ಟ ಭದ್ರಶಕ್ತಿಗಳದ್ದಾಗಿದೆ, ಎಂದು ರಾಷ್ಟ್ರೀಯ ಬಸವದಳದ ಮಹಾ ಸಂಘಟನಾ ಕಾರ್ಯದರ್ಶಿ ಗಂಗಾಧರ ದೊಡ್ಡವಾಡ ಹೇಳಿದರು. ಮಾಧ್ಯಮ ದೊಂದಿಗೆ ಮಾತನಾಡಿ ಈ ಸಮಾಜಕ್ಕೆ ಸಂಬಂಧ ಇಲ್ಲದ ವ್ಯಕ್ತಿಗಳು ಪ್ರತಾಪ್ ಸಿಂಹರಂತಹ ಮಾಜಿ ಸಂಸದರು ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಈ ಸಮಾಜದ ಬಗ್ಗೆ ಮಾತಾಡುವ ನೈತಿಕ ಹಕ್ಕಿಲ್ಲ, ನಾವು ಪ್ರತ್ಯೇಕ ಧರ್ಮವನ್ನು ಕೇಳಲಿ ಅಥವಾ ಇನ್ನೊಂದು ಧರ್ಮದ ಜೊತೆಗೆ ಇರಲಿ ಇವರ್ಯಾರು ಪ್ರಶ್ನಿಸುವುದಕ್ಕೆ ಇವರೇನು ನಮಗೆ ಪ್ರತ್ಯೇಕ ಧರ್ಮ ಕೊಡುವ ಜವಾಬ್ದಾರಿ ಸ್ಥಾನದಲ್ಲಿದ್ದಾರೆಯೇ ? ಎಂದು ಗಂಗಾಧರ ದೊಡ್ಡವಾಡ ಪ್ರಶ್ನಿಸಿದ್ದಾರೆ. ಲಿಂಗಾಯಿತ ಸಮಾಜದಲ್ಲಿ ಸಾವಿರಾರು ದಾರ್ಶನಿಕರು, ತತ್ವಜ್ಞಾನಿಗಳು ಸಮಾಜ ಚಿಂತಕರು ಸಮಾಜ ಕಟ್ಟುವ ಹೋರಾಟಗಾರರು, ಇದ್ದಾರೆ ನಮ್ಮ ಸಮಾಜದ ಆಗುಹೋಗು ಅಭಿವೃದ್ಧಿ ನಮಗೆ ಬಿಟ್ಟಿದ್ದು ನಮ್ಮ ಸಮಾಜದ ಹಲವಾರು ಪ್ರತಿಭಾನ್ವಿತರು ಇದ್ದಾರೆ. ನಾವು ಪರಿಹರಿಸಿಕೊಳ್ಳುತ್ತೇವೆ, ನಮ್ಮ ಸಮಸ್ಯೆಯಲ್ಲಿ ನೀವೇಕೆ ಮೂಗು ತೂರಿಸುತ್ತಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇಷ್ಟಲಿಂಗದಲ್ಲಿ ಶಿವಲಿಂಗ ಈ ದೇಶದಲ್ಲಿ ಆಯಾಧರ್ಮದ ದಾರ್ಶನಿಕರು ಅವರವರ ಧರ್ಮ ಸ್ಥಾಪಿಸಿದ್ದಾರೆಯೋ ಹಾಗೆಯೇ ಅಣ್ಣ ಬಸವಣ್ಣನವರು ಲಿಂಗಾಯತ ಧರ್ಮವನ್ನು ಸ್ಥಾಪಿಸಿದ್ದಾರೆ. ಇದರ ಬಗ್ಗೆ ನೀವೇನು ಹೆಚ್ಚಿಗೆ ಹೇಳುವ ಅವಶ್ಯಕತೆ ಇಲ್ಲ ಒಟ್ಟಾರೆ ಲಿಂಗಾಯತ ಧರ್ಮವು ಬಿಡಾಡಿ ದನಗಳು ಬಂದು ಮೇಯುವ ಪೋಟ ಖರಾಬ್ ಭೂಮಿಯಲ್ಲ ನಮ್ಮ ಸಮಾಜಕ್ಕೆ ನಮ್ಮ ದೇ ಆದ ಚೌಕಟ್ಟಿದೆ ಎಂದು ಗಂಗಾಧರ ದೊಡವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.