Continuous rains destroy the cotton crop, demand for crop loan waiver
ಕನಕಗಿರಿ: ಕ್ಷೇತ್ರದಲ್ಲಿ ನವಲಿ ಹೋಬಳಿಯ ಯತ್ನಟ್ಟಿ ಗ್ರಾಮದಲ್ಲಿ ಮೂರು ದಿನದಿಂದ ಸುರಿತ್ತಿರುವ ಉತ್ತರಿ ಮಳೆಯಿಂದ
ರೈತ ಬೆಳೆದ ತೊಗರಿ ಬೆಳೆ ಮಳೆ ನೀರು ಸಂಗ್ರಹಿಸಿ ತೊಗರೆ ಬೆಳೆ ನಾಶವಾಗಿದೆ. ಮಳೆಯಿಂದ ರೈತ ಸಂಕಷ್ಟಕ್ಕೆ ಈಡಾಗಿದ್ದಾನೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಸುಮಾರು 3 ದಿನಗಳಿಂದ ಸುರುತ್ತಿರುವ ಮಳೆಯಿಂದ ರೈತರು ಬೆಳೆದ ಬೆಳೆ ಮಳೆಗೆ ಸಂಪೂರ್ಣ ನೀರಿನಿಂದ ಮುಳುಗಿಹೋಗಿದೆ, ಬ್ಯಾಂಕಿನಲ್ಲಿ ಮತ್ತು ದಲಾಲ ಅಂಗಡಿಗಳಲ್ಲಿ ರೈತರು ಸಾಲ ಮಾಡಿ ಬೆಳೆದ ಬೆಳೆ ಮಳೆಗೆ ಸಂಪೂರ್ಣ ನಾಶವಾಗಿದೆ, ನಮ್ಮ ಕ್ಷೇತ್ರದ ಸಚಿವರಾದ ಶಿವರಾಜ ತಂಗಡಗಿಯವರು ಕೂಡಲೇ ಕ್ಷೇತ್ರಕ್ಕೆ ವೀಕ್ಷಣೆ ಮಾಡಿ ರೈತರ ಬೆಳೆಗೆ ಪರಿಹಾರ ನೀಡಬೇಕು, ಕೂಡಲೇ ರೈತರ ಬ್ಯಾಂಕಿನಲ್ಲಿರುವ ಸಾಲವನ್ನು ಮನ್ನಾ ಮಾಡಬೇಕು ದೇವಪ್ಪ ಯತ್ನಟ್ಟಿ ಸಣ್ಣ ರೈತ ಒತ್ತಾಯಿಸಿದ್ದಾನೆ.