A massive protest by the All Karnataka Valmiki Nayak Mahasabha Taluka.
ಈ ಸಂದರ್ಭದಲ್ಲಿ ಮಹಾಸಭಾ ತಾಲೂಕ ಘಟಕದ ಅಧ್ಯಕ್ಷ ವೀರಭದ್ರಪ್ಪ ನಾಯಕ ಮಾತನಾಡಿದರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಮಾಜಿಕ ಹಾಗೂ ಶೈಕ್ಷಣಿಕ ಜನಗಣತಿಯ ಹೆಸರಿನಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದು ಅತ್ಯಂತ ಖಂಡನೀಯವಾಗಿದೆ.
ಪರಿಶಿಷ್ಟ ಪಂಗಡಕ್ಕೆ ಕುರುಬ ಜನಾಂಗ ಸೇರಿದಂತೆ ಇತರೆ ಜನಾಂಗವನ್ನು ಸೇರಿಸುವುದರ ಮೂಲಕ ವಾಲ್ಮೀಕಿ ನಾಯಕ ಸಮಾಜವನ್ನು ಗುರಿಯನ್ನಾಗಿಸಿ ಶೋಷಣೆಯ ಉದ್ದೇಶವನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿರುವ 65 ಲಕ್ಷ ನಾಯಕ ಸಮಾಜಭಂಧವರ ಶಿರ ಛೇದನ ಮಾಡಿದರು ಸಹ ಯಾವುದೇ ಕಾರಣಕ್ಕೂ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೆ ಅವಕಾಶ ನೀಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಗುಡುಗಿದರು . ಮುಖ್ಯಮಂತ್ರಿ ಸ್ಥಾನಕ್ಕೆ ಕಂಟಕ ಬಂದಾಗ ಇಂತಹ ಸನ್ನಿವೇಶಗಳನ್ನು ಸೃಷ್ಟಿ ಮಾಡಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವಹು ನ್ನ ರ್ ಮಾಡುತ್ತಿದ್ದಾರೆ ಎಂದು ಆರೋಪಿಸಿದವರು ಕಾಂಗ್ರೆಸ್ ಪಕ್ಷದಲ್ಲಿರುವ ನಾಯಕ ಸಮಾಜದ ಸಚಿವರುಗಳು ಶಾಸಕರು ಮಾಜಿ ಹಾಲಿ ವಿವಿಧ ಘಟಕಗಳ ಸದಸ್ಯರುಗಳು ತಕ್ಷಣವೇ ಪಕ್ಷಕ್ಕೆ ಹಾಗೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜೋಗದ ನಾರಾಯಣಪ್ಪ ನಾಯಕ ಹನುಮಂತಪ್ಪ ನಾಯಕ ಪಂಪಣ್ಣ ನಾಯಕ. ವಿರುಪಾಕ್ಷ ನಾಯಕ ಬಳ್ಳಾರಿ ರಾಮಣ್ಣ ಬಸಪ್ಪ ಗುಡ್ಡೇಕಲ್ ನಾಯಕ ಚೌಡಕಿ ರಮೇಶ್ ನಾಯಕ ಮಲ್ಲೇಶಪ್ಪ ನಾಯಕ ಗುಡ್ಡೇಕಲ್ ಶರಣಪ್ಪ ನಾಯಕ ಬಸಪ್ಪ ಮರಮನಹಳ್ಳಿ ವಕೀಲರ ಸಂಘದ ಅಧ್ಯಕ್ಷರು ಶರಣಬಸಪ್ಪ ನಾಯಕ ಎಜೆ ರಂಗನಾಥ್ ನಾಯಕ ಮಾರುತಿ ಮೆತುಗಲ್ ನಾಗರಾಜ್ ಸೇರಿದಂತೆ ಅಪಾರ ಸಂಖ್ಯೆಯ ಸಮಾಜ ಸಮಾಜದ ಹಿರಿಯರು ಮುಖಂಡರು ಹಾಗೂ ಯುವ ಮುಖಂಡರು ಮತ್ತು ಬಾಂಧವರು ಪಾಲ್ಗೊಂಡಿದ್ದರು ಇದಕ್ಕೂ ಮುಂಚೆ ಮಹರ್ಷಿ ವಾಲ್ಮೀಕಿ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಡಾ. ಬಿಆರ್ ಅಂಬೇಡ್ಕರ್ ವೃತ್ತದ ಮೂಲಕ ಶ್ರೀ ಕೃಷ್ಣದೇವರಾಯ ವೃತದಲ್ಲಿ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.