Breaking News

ಮೈಸೂರು ದಸರಾ ಕ್ರೀಡಾಕೂಟ-೨೦೨೫ ರಲ್ಲಿ ಗಂಗಾವತಿಯ ವಿದ್ಯಾರ್ಥಿಗಳ ಸಾಧನೆ.

Achievements of Gangavathi students in Mysore Dasara Games-2025.

Screenshot 2025 09 25 18 00 20 56 E307a3f9df9f380ebaf106e1dc980bb67250886504140343037

ಗಂಗಾವತಿ: ಮೈಸೂರು ದಸರಾ ಕ್ರೀಡಾಕೂಟ ೨೦೨೫ ರಾಜ್ಯಮಟ್ಟದ ಟೇಕ್ವಂಡೋ ಸ್ಪರ್ಧೆಯಲ್ಲಿ ಗಂಗಾವತಿಯ ಬ್ಲೂö್ಯ ಡ್ರ‍್ಯಾಗನ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ಸ್ ಸಂಸ್ಥೆ ಹಾಗೂ ಸಮೃದ್ಧಿ ಸ್ಪೋರ್ಟ್ಸ್ ಅಕಾಡೆಮಿಯ ೩ ವಿದ್ಯಾರ್ಥಿಗಳು ವಿವಿಧ ಫೈಟ್ ವಿಭಾಗದಲ್ಲಿ ೩ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಈ ಸ್ಪರ್ಧೆಯು ಸೆಪ್ಟೆಂಬರ್-೨೨ ರಿಂದ ೨೪ರ ವರೆಗೆ ಮೈಸೂರಿನ ಯುವರಾಜ ಒಳ ಕ್ರೀಡಾಂಗಣದಲ್ಲಿ ನಡೆದಿರುತ್ತದೆ.
ಈ ಕ್ರೀಡಾಕೂಟದಲ್ಲಿ ರಾಜ್ಯಮಟ್ಟದ ಟೇಕ್ವಂಡೋ ಸ್ಪರ್ಧೆಯಲ್ಲಿ ನಂದಿತಾ ಮಂಜುನಾಥ್-೫೫ ಕೆ.ಜಿ. ಫೈಟ್ ವಿಭಾಗದಲ್ಲಿ ತೃತೀಯ ಸ್ಥಾನ, ಮಹಾಲಕ್ಷ್ಮಿ ಬಸವರಾಜ್-೭೦ ಕೆ.ಜಿ ಮೇಲ್ಭಾಗದ ಫೈಟ್ ವಿಭಾಗದಲ್ಲಿ ತೃತೀಯ ಸ್ಥಾನ ಹಾಗೂ ಸಿ.ಎಂ. ಮಣಿಕಂಠ ಸಿ.ಎಂ. ರಾಘವೇಂದ್ರ-೮೨ ಕೆ.ಜಿ. ಫೈಟ್ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದುಕೊಂಡು ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಹಾಗೂ ಮುಖ್ಯ ತರಬೇತುದಾರ ಷಣ್ಮುಖಪ್ಪನವರು ತಿಳಿಸಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಸಹ ಶಿಕ್ಷಕರಾದ ಮೋಹನ್ ಕುಮಾರ್, ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ರಂಗಮ್ಮ, ಷಣ್ಮುಖಪ್ಪ, ಸಮೃದ್ಧಿ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಚಳಮರದ್, ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಹ ವಿದ್ಯಾರ್ಥಿಗಳು ಶುಭ ಕೋರಿದ್ದಾರೆ.

ಜಾಹೀರಾತು

About Mallikarjun

Check Also

img202510021202142.jpg

ಸ್ವಾಭಿಮಾನಿ ಕಲ್ಯಾಣ ಪರ್ವ 12ನೇ ಶತಮಾನದ ಶರಣರ ಸ್ವಾಭಿಮಾನದ ಪ್ರತೀಕ

Swabhimani Kalyana Parva is a symbol of the self-respect of the 12th century Sharanas. ಹನ್ನೆರಡನೇ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.