
Honorary program for civic workers at Cambridge Public School, Karatagi
ಕಾರಟಗಿ:23: ಇಂದು ಪೌರ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ನಲ್ಲಿ ಪುರಸಭೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು 30ಕ್ಕೂ ಹೆಚ್ಚು ಪೌರಕಾರ್ಮಿಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು ಎಲ್ಲರಿಗೂ ಶಾಲೆಯಿಂದ ಪ್ರೀತಿಯ ಉಡುಗೊರೆಗಳನ್ನು ನೀಡಿ ಅವರ ಕಾರ್ಯವನ್ನು ಸ್ಮರಿಸಿ ಗೌರವ ಸಮರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಬಿಚ್ಚಗಲ್, ಶಾಲೆಯ ಪ್ರಾಂಶುಪಾಲರಾದ ಹನುಮಂತಪ್ಪ ವಿಟಿ ಹಾಗೂ ಹೆಲ್ತ್ ಇನ್ಸ್ಪೆಕ್ಟರ್ ಅಕ್ಷತಾ ಹಾಗೂ ಮಲ್ಲಮ್ಮ ಶಾಲೆಯ ಶಿಕ್ಷಕ ಬಳಗದವರು ಉಪಸ್ಥಿತರಿದ್ದರು.
ಜಾಹೀರಾತು





