H.M. Nagaiah, the pioneer of new Kannada poetry in Bellary district
ಕೊಟ್ಟೂರು : ಕನ್ನಡ ಸಾಹಿತ್ಯ ಲೋಕದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಮೊದಲಿಗೆ ಹೊಸ ಕಾವ್ಯವನ್ನು ರಚಿಸಿದ್ದ ದಿ.ಹಿ.ಮ.ನಾಗಯ್ಯನವರು ಅಂದಿನ ದಿನಗಳಲ್ಲಿ ಹೊಸ ಕಾವ್ಯದ ಪ್ರವರ್ತಕರಾಗಿ ಹೊರ ಹೊಮ್ಮಿದ್ದರು ಎಂದು ಹೊಸಪೇಟೆಯ ಶಿಕ್ಷಕ ಬಿ.ಎಂ.ರಾಜಶೇಖರ ಹೇಳಿದರು.
ಪಟ್ಟಣದ ಶ್ರೀ ರೇಣುಕ ಸಭಾಭವನದಲ್ಲಿ ತಾಲೂಕು ಕ.ಸಾ.ಪ. ಆಯೋಜಿಸಿದ್ದ ದಿ.ಹಿ.ಮ.ನಾಗಯ್ಯನವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಶನಿವಾರ ವಿಶೇಷ ಉಪನ್ಯಾಸ ನೀಡಿದರು.
ಕೂಡ್ಲಿಗಿ ತಾಲೂಕಿನ ಹಿರೇಕುಂಬಳಕುAಟೆ ಗ್ರಾಮದ ಹಿ.ಮ.ನಾ.ಅವರು, ಕವಿ ಮತ್ತು ಕವಿತೆ ಬೇರೆ ಅಲ್ಲ ಎಂದು ಭಾವಿಸಿದ್ದರಿಂದಲೇ ಅವರ ಸಾಹಿತ್ಯ ಸರಳ ಭಾಷೆಯಲ್ಲಿದೆ. ಪತ್ರಕರ್ತರಾಗಿ, ಸ್ವಂತ ಪತ್ರಿಕೆ ನಡೆಸಿ, ಬೆಂಗಳೂರು ಮಹಾ ನಗರ ಪಾಲಿಕೆ ಸದಸ್ಯರಾಗಿ, ಆಸ್ತಿ ತೆರಿಗೆ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ರಾಮಕೃಷ್ಣ ಹೆಗಡೆಯವರಿಗೆ ಆತ್ಮೀಯರಾಗಿದ್ದ ಅವರಿಗೆ ದೊಡ್ಡ ರಾಜಕೀಯ ನಂಟು ಇದ್ದರೂ ಆಮಿಷಕ್ಕೊಳಗಾಗದೇ ಕೊನೆವರೆಗೂ ಸರಳ ಜೀವನ ನಡೆಸಿದ್ದರು ಎಂದರು.
ಬಳ್ಳಾರಿ ಜಿಲ್ಲೆಯಲ್ಲಿ ಕನ್ನಡ ಶಾಲೆಗಳನ್ನು ತೆರೆದು, ಭಾಷೆ ಬೆಳಸಿ ರಾಜ್ಯದಲ್ಲಿಯೇ ಉಳಿಯುವಂತೆ ಮಾಡಿದ ಕೀರ್ತಿ ಹಿರಿಯ ಸಾಹಿತಿ ನಾಗೇಶಶಾಸ್ತಿçಗಳಿಗೆ ಸಲ್ಲುತ್ತದೆ. ಅದರಂತೆ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಕಾವ್ಯ ರಚನೆ ಆರಂಭವಾಗಿದ್ದರೂ ಜಿಲ್ಲೆಯಲ್ಲಿ ಮೊದಲಿಗೆ ಹೊಸ ಕಾವ್ಯ ರಚಿಸಿದ್ದ ಕೀರ್ತಿ ಹಿ.ಮ.ನಾ.ರದ್ದಾಗಿದೆ. ಸ್ವಾತಂತ್ರö್ಯ ಹೋರಾಟ ಕುರಿತಾಗಿ ಅನೇಕ ಕಥೆಗಳು ಬಂದಿದ್ದರೂ, ಸ್ವಾತಂತ್ರö್ಯ ಸಂಗ್ರಾಮವನ್ನು ರೋಚಕವಾಗಿ ಕಾವ್ಯ ಮೂಲಕ ಬಣ್ಣಿಸಿದ ಮೊದಲಿಗರು ಹಿ.ಮ.ನಾಗಯ್ಯನವರ. ನಾಡಿನ ಕುವೆಂಪು ಸೇರಿ ಅನೇಕ ಸಾಹಿತಿಗಳ ಆತ್ಮೀರಾಗಿದ್ದ ಅವರ ಸಾಹಿತ್ಯಕ್ಕೆ ಪ್ರಚಾರ ಸಿಗದೇ ಕಾರಣಕ್ಕೆ ಹೆಚ್ಚು ಬೆಳಕಿಗೆ ಬರಲಾಗಲಿಲ್ಲ. ಕನ್ನಡದ ಕಾವ್ಯಗಳು ಬೆಳೆದದ್ದು ಉತ್ತರ ಕರ್ನಾಟಕದಲ್ಲಿ, ಮುಂದಿನ ಪೀಳಿಗೆಗೆ ಇತಿಹಾಸ, ಪುರಾಣ ಪರಂಪರೆಗಳನ್ನು ಈಗಿನ ಪೀಳಿಗೆಗೆ ತಿಳಿಸಿದಾಗ ಮಾತ್ರ ನಮ್ಮ ಪರಂಪರೆ ಮುಂದುವರೆಯುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿ, ಅಖಂಡ ಕೂಡ್ಲಿಗಿ ತಾಲೂಕಿನಲ್ಲಿ ಸಾಹಿತ್ಯ ಸಂಸ್ಕೃತಿ ಕ್ಷೇತ್ರದಲ್ಲಿ ಅನೇಕರಿದ್ದು, ಬಳ್ಳಾರಿಯಲ್ಲಿ ನಡೆವ ಸಾಹಿತ್ಯ ಸಮ್ಮೇಳದಲ್ಲಿ ಈ ಭಾಗದ ಸಾಹಿತಿಗಳ ಕುರಿತು ವಿಚಾರ ಗೋಷ್ಟಿ ಆಯೋಜನೆ ಮಾಡುತ್ತೇನೆ. ಹಿ.ಮ.ನಾಗಯ್ಯನವರ ಸಾಹಿತ್ಯ ಕೊಡುಗೆ ದೊಡ್ಡದಿದ್ದು, ಅವರ ಕುಟುಂಬದವರು ಟ್ರಸ್ಟ್ ರಚಿಸಿ ಅದರ ಮೂಲಕ ಅವರ ಸಾಹಿತ್ಯವನ್ನು ಯುವಕರಿಗೆ ಪರಿಚಯಿಸುವ ಕಾರ್ಯ ಮಾಡಬೇಕು. ಅವರ ಸಾಹಿತ್ಯವನ್ನು ಡಿಜಿಟಿಲೀಕರಣ ಮಾಡಿ ಇಂದಿನ ಪೀಳಿಗೆಗೂ ತಿಳಿಸುವತ್ತ ಚಿಂತನೆ ಮಾಡಬೇಕು ಎಂದರು.
ಬೆAಗಳೂರಿನ ಎಚ್.ಎಂ.ಹರ್ಷ ಮಾತನಾಡಿ, ತಂದೆ ನಾಗಯ್ಯನವರು ಕೊಟ್ಟೂರಿನಲ್ಲಿಯೇ ವಿಧ್ಯಾಭ್ಯಾಸ ಮಾಡಿದ್ದರು. ಅವರ ಶಿಕ್ಷಣ ಪ್ರೀತಿಗಾಗಿ ಅವರ ತವರಿನಲ್ಲಿ ಸರಕಾರಿ ಶಾಲೆಗೆ ಕಟ್ಟಡ ನಿರ್ಮಿಸಿದ್ದೇವೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ದೇವರಮನಿ ಕೊಟ್ರೇಶ ಪ್ರಾಸ್ತಾವಿಕ ಮಾತನಾಡಿ, ತಾಲೂಕು ಕಸಾಪದಿಂದ ದಾನಿಗಳಿಂದ ೧೦ದತ್ತಿ ದೇಣಿಗೆ ಸಂಗ್ರಹಿಸಿದ್ದು, ಇನ್ನೊಂದು ವರ್ಷದಲ್ಲಿ ೨೦ ದತ್ತಿ ದೇಣಿಕೆ ಗುರಿ ಮಾಡಲಾಗುವುದು. ಅಖಂಡ ಕೂಡ್ಲಿಗಿ ತಾಲೂಕಿನ ಹಿ.ಮ.ನಾಗಯ್ಯನವರ ಜನ್ಮ ಶತಮಾನೋತ್ಸವ ಆಚರಣೆ ಆಯೋಜನೆ ನಮ್ಮ ಕಸಾಪಗೆ ಲಭಿಸಿದ್ದು ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಪ್ರಶಾಂತಸಾಗರ ಶಿವಾಚಾರ್ಯ ಸ್ವಾಮಿಗಳು, ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಬಿ.ಎಂ.ಪ್ರಭುದೇವ, ಶಸಾಪ ಜಿಲ್ಲಾ ಕಾರ್ಯದರ್ಶಿ ಎನ್.ಎಂ.ರವಿಕುಮಾರ, ಬೆಂಗಳೂರಿನ ಜೆಎಂ ಶಶಿಕುಮಾರ ಮಾತನಾಡಿದರು. ಸನ್ಮಾನಿತರಾದ ಹಿ.ಮ.ನಾಗಯ್ಯ ಕುರಿತು ಸಂಶೋದನೆ ವ್ಯಾಸಂಗ ಮಾಡುತ್ತಿರುವ ಉಪನ್ಯಾಸಕಿ ಕೆ.ಜೆ.ಪೂರ್ಣೀಮ ಹಿ.ಮ.ನಾ. ಕುರಿತು ಮಾತನಾಡಿದರು. ಸಾಹಿತಿ ಕುಂ.ವೀರಭದ್ರಪ್ಪ, ಕಲಾಕೇಂದ್ರ ಅಧ್ಯಕ್ಷ ಎಎಂಜೆ ಸತ್ಯಪ್ರಕಾಶ ಇದ್ದರು.
ಕಸಾಪ ಖಜಾಂಚಿ ಈಶ್ವರಪ್ಪ ತುರಕಾಣಿ, ಕಾರ್ಯದರ್ಶಿ ಅರವಿಂದ ಬಸಾಪರ, ಎಸ್.ಶಶಿಕಲಾ ನಿರ್ವಹಿಸಿದರು.


