Srishtikarta Devashilpi Vishwakarma Jayanti Puja Program

ಗಂಗಾವತಿ: ತಾಲೂಕಿನ ಜಂಗಮರ ಕಲ್ಗುಡಿಯಲ್ಲಿ ಸೆಪ್ಟೆಂಬರ್-೧೭ ರಂದು ಸೃಷ್ಠಿಕರ್ತ ವಿಶ್ವಕರ್ಮನ ಜಯಂತಿಯ ಪೂಜಾಮಹೋತ್ಸವದ ಕಾರ್ಯಕ್ರಮವನ್ನು ಶ್ರೀ ಬೆಟ್ಟದೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ನೆರವೇರಿಸಲಾಯಿತು. ಸಾನಿಧ್ಯವನ್ನು ಶ್ರೀ ಆನೆಗೊಂದಿ ಮಹಾರಾಜರ ಆಸ್ಥಾನ ಪೂಜಿತ ಶ್ರೀ ಶ್ರೀ ಸರಸ್ವತಿ ಶ್ರೀ ವಿಶ್ವಬ್ರಹ್ಮ ವಿಶ್ವಕರ್ಮ ವಿಶ್ವಬ್ರಾಹ್ಮಣ ವಂಶ ಪರಂಪರೆಯ ಆನೆಗೊಂದಿ ಗೊಂದಿಹೊಸಳ್ಳಿ ತುಂಗಭದ್ರಾ ಲೀನಮಾರ್ಗ ಜಂಗಮರ ಕಲ್ಗುಡಿ ಪುರಾತನ ಪಾರಂಪರೆಯ ಹಾದಿಯಲ್ಲಿ ಸಾಗುತ್ತಿರುವ ಡಾ. ಗಣೇಶ್ವರ ಸ್ವಾಮಿಗಳು ವಹಿಸಿಕೊಂಡಿದ್ದರು.
ಸಾನಿಧ್ಯವಹಿಸಿ ಮಾತನಾಡಿದ ಡಾ. ಶ್ರೀ ಗಣೇಶ್ವರ ಸ್ವಾಮಿಗಳು ನಮ್ಮ ಪಾರಂಪರೆಯದ ಆಧ್ಯಾತ್ಮ, ಸಂಗೀತ, ಚಿತ್ರಕಲೆ, ಪಂಚಕರ್ಮ ವೃತ್ತಿ, ಕುಲಕಸುಬುಗಳಾಗಿವೆ. ಕಳೆದ ೧೦ ವರ್ಷಗಳಿಂದ ಕೇಂದ್ರ ಸರ್ಕಾರ ವಿಶ್ವಕರ್ಮ ಜಯಂತಿ ಆಚರಣೆಯನ್ನು ಜಾರಿಗೊಳಿಸಿ, ಯೋಜನೆಗಳಿಗೆ ಚಾಲನೆ ನೀಡಿರುವುದು ಸಂತಸದ ವಿಷಯವಾಗಿದೆ. ಎಲ್ಲಾ ಸಮಾಜಗಳಿಗಿಂತ ಹಿಂದುಳಿದ ಸಮಾಜ ನಮ್ಮ ವಿಶ್ವಕರ್ಮ ಸಮಾಜವಾಗಿದೆ. ನಮ್ಮ ವಿಶ್ವಕರ್ಮ ಸಮಾಜವನ್ನು ವಿಶ್ವಬ್ರಾಹ್ಮಣ ಸಮಾಜವೆಂದು ಕರೆಯಲಾಗುತ್ತದೆ. ನಮ್ಮ ಸಮಾಜದ ಕುಲಕಸುಬುಗಳು ಎಲ್ಲಾ ಸಮಾಜದವರಿಗೆ ಅವಶ್ಯಕವಾಗಿವೆ ಎಂದು ತಿಳಿಸುತ್ತಾ, ತುಂಗಭದ್ರಾ ಜಲಾಶಯ ನಿರ್ಮಾಣಕ್ಕಾಗಿ ನಮ್ಮ ಪೂರ್ವಜರು ಆಸ್ತಿ ಕಳೆದುಕೊಂಡು ಜಂಗಮರ ಕಲ್ಗುಡಿಗೆ ತೇಲಿ ಬಂದಿದ್ದಾರೆ. ಆದ್ದರಿಂದ ವಿಜಯನಗರ ಸಾಮ್ರಾಜ್ಯವೇ ಮೋಸಕ್ಕೆ ಬಲಿಯಾಯಿತು. ಅದರಲ್ಲಿ ನಮ್ಮ ಪಾರಂಪರೆ ಮುಳುಗಿ ಹೋಯಿತು ಎಂದು ನೋವನ್ನು ವ್ಯಕ್ತಪಡಿಸಿ ನಮ್ಮ ಮನೆತನದ ಪಾರಂಪರೆಯ ಸಾಧಕರ ನೆನಪಿನಲ್ಲಿ ಸಾಧನೆಗೈಯ್ಯುತ್ತ ಅವರ ಹಾದಿಯಲ್ಲಿ ಜೀವನ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಸರ್ವ ಸಮಾಜದ ಗರು ಹಿರಿಯರು ಆಶೀರ್ವಾದ ಹಾಗೂ ನಮ್ಮ ಊರಿನವರ ಸರ್ವ ಧರ್ಮದವರ ಸಹಕಾರ ಶ್ರೀರಕ್ಷೆಯಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಲಿಂ. ಹಾನಗಲ್ಲ ಕುಮಾರ ಮಹಾಸ್ವಾಮಿಗಳ ೧೫೮ನೇ ಜಯಂತ್ಯೋತ್ಸವದ ಸದ್ಭಾವನಾ ಪಾದಯಾತ್ರೆಯ ಸರ್ವ ಸ್ವಾಮಿಗಳು ಹಾಗೂ ಜಂಗಮರ ಕಲ್ಗುಡಿ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಸುನಿತಾ ರಾಜುಗಾರು ಮತ್ತು ಗ್ರಾ.ಪಂ ಸದಸ್ಯರು, ಕಳಕನಗೌಡ ಕಲ್ಲೂರು, ಪ್ರಸಾದ, ಸಕ್ಕರೆ ಶ್ರೀನಿವಾಸ, ದೇವಸ್ಥಾನದ ಕಮಿಟಿ ಅಧ್ಯಕ್ಷರಾದ ಜೆ. ಬಸಣ್ಣ, ಗ್ರಾಮದ ಮುಖಂಡರಾದ ಪಕೀರಪ್ಪ ಬಂಗಾರಿ, ದೇವಣ್ಣ, ಶಂಭುಲಿAಗಪ್ಪ ಮತ್ತು ಕುಟುಂಬದವರು, ಶ್ರೀಮತಿ ವನಜಾಕ್ಷಿ ಗಣೇಶ್ವರಸ್ವಾಮಿ ಮತ್ತು ಕುಟುಂಬದವರು ಹಾಗೂ ಗುರುಹಿರಿಯರು, ಗಣ್ಯಮಾನ್ಯರು, ಸರ್ವಧರ್ಮ ಸಮಾಜದ ಬಂಧುಗಳು ಭಾಗವಹಿಸಿದ್ದರು.
Kalyanasiri Kannada News Live 24×7 | News Karnataka
