Demand for a purchasing center for table corn and maize
ಕೊಟ್ಟೂರು ಸ 16: ಕೊಟ್ಟೂರು ತಾಲೂಕು ಕಾರ್ಯಾಲಯದ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷರಾದ ಎನ್ ಭರಮಣ್ಣನವರು ಊಟದ ಜೋಳ ಮೆಕ್ಕೆಜೋಳ ಖರೀದಿ ಕೇಂದ್ರ ಶೀಘ್ರದಲ್ಲಿ ತೆರೆಯಬೇಕು. ಕೊಟ್ಟೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪ್ರಸಕ್ತ 2025-26ನೇ ಸಾಲಿನಲ್ಲಿ ಕೊಟ್ಟೂರು ತಾಲೂಕಿನ ರೈತರು ಊಟದ ಜೋಳ, ಮೆಕ್ಕೆಜೋಳ ಬೆಳೆದಿದ್ದು ಇಂದಿನ ವರ್ಷ ಸರ್ಕಾರದಿಂದ ರೂ 3370 ಬೆಂಬಲ ಬೆಲೆ ಖರೀದಿಸಿದ್ದು, ಆದರೆ ಈ ವರ್ಷ ಇನ್ನೂ ಖರೀದಿ ಕೇಂದ್ರ ತೆರೆದಿರುವುದಿಲ್ಲ. ಎಪಿಎಂಸಿ ಮಾರುಕಟ್ಟೆಯ ಖರೀದಿದಾರರು ಕ್ವಿಂಟಲ್ಲಿಗೆ 1500 ರಿಂದ 2000 ರೂ. ಬರೆಯುತ್ತಿರುವುದರಿಂದ ರೈತರು ತುಂಬಾ ನಷ್ಟ ಅನುಭವಿಸುತ್ತಿದ್ದಾರೆ ಕಾರಣ ಕೂಡಲೇ ಖರೀದಿ ಕೇಂದ್ರ ತೆರೆದು ರೈತರು ಬೆಳೆದ ಊಟದ ಜೋಳ, ಮೆಕ್ಕೆಜೋಳ ಖರೀದಿಸಿ ಮತ್ತು ಕೊಟ್ಟೂರ ತಾಲೂಕಿನ ಈರುಳ್ಳಿ ಬೆಳೆಗಾರರಿಗೆ ಅನ್ಯಾಯವಾಗಿರುವುದನ್ನು ಗಮನಿಸಿ ಈರುಳ್ಳಿ ಬೆಳೆದ ರೈತರ ಹೊಲಕ್ಕೆ ಗ್ರಾಮ ಲೆಕ್ಕಾಧಿಕಾರಿಗಳ ಕಳುಹಿಸಿ ಸರ್ಕಾರಕ್ಕೆ ವರದಿ ಒಪ್ಪಿಸಿ ಒಂದು ಎಕ್ಕರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವುದರ ಮೂಲಕ ರೈತರಿಗೆ ನ್ಯಾಯ ಒದಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಎನ್ ಭರಮಣ್ಣ ಹಾಗೂ ಶ್ರೀಧರ ಎಸ್ ಒಡೆಯರ್ ತಾಲೂಕು ಅಧ್ಯಕ್ಷರು ಹಾಗೂ ಸಂಘದ ಸದಸ್ಯರುಗಳು ಹಾಗೂ ರೈತ ಮುಖಂಡರು ಗ್ರೇಡ್ 2 ತಹಸಿಲ್ದಾರರ ಮೂಲಕ ಮಾನ್ಯ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಕೊಲ್ಲೂರಪ್ಪ ಕಂದಗಲ್ಲು ಚೆನ್ನಪ್ಪ ಹನುಮನಹಳ್ಳಿ ಎಸ್ ಶರಣಯ್ಯ ಮಂಜಪ್ಪ ಚೌಡಪ್ಪ ಜಿ ನಾಗರಾಜ್ ಮತ್ತಿತರ ಉಪಸ್ಥಿತರಿದ್ದರು.
Kalyanasiri Kannada News Live 24×7 | News Karnataka
