Ex Devadasi Re-Examination : Applications Invited
ಕೊಪ್ಪಳ ಸೆಪ್ಟೆಂಬರ್ 17 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನೆಡೆಸಲಾಗುತ್ತಿರುವ ಮಾಜಿ ದೇವದಾಸಿ ಮಹಿಳೆಯರ ಮರುಸಮೀಕ್ಷೆಯಲ್ಲಿ ಭಾಗವಹಿಸಲು ಬಯಸುವ ಮಹಿಳೆಯರು ಮತ್ತು ಕುಟುಂಬಗಳಿಂದ ನಿಗಧಿತ ನಮೂನೆಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ-2025ಯನ್ನು ಕೈಗೊಂಡಿದ್ದು, ಈಗಾಗಲೇ ಸರ್ಕಾರದಿಂದ 1993-94 ಮತ್ತು 2007-08ನೇ ಸಾಲುಗಳಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಇದ್ದು, ಮರಣ ಹೊಂದಿರುವ ಮಹಿಳೆಯ ಕುಟುಂಬದ ಅಧೀಕೃತ ಸದಸ್ಯರು ನಮೂನೆ-1 ರಲ್ಲಿ, ಆ ಸಮೀಕ್ಷೆಯಲ್ಲಿ ಹೊರಗುಳಿದ, ಹಾಲಿ ಜೀವಂತವಿರುವ ಹೊಸದಾಗಿ ದೇವದಾಸಿ ಪಟ್ಟಿಗೆ ಸೇರ್ಪಡೆ ಬಯಸುವ ದೇವದಾಸಿ ಮಹಿಳೆಯರು ನಮೂನೆ-2 ರಲ್ಲಿ ಹಾಗೂ ಸಮೀಕ್ಷೆಯಲ್ಲಿ ಹೊರಗುಳಿದ ಮತ್ತು ಪ್ರಸ್ತುತ ಮರಣ ಹೊಂದಿರುವ ಮಹಿಳೆಯರ ಕುಟುಂಬದ ಅಧೀಕೃತ ಸದಸ್ಯರು ನಮೂನೆ-3 ರಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ದಾಖಲೆಗಳಾದ ಮಹಿಳೆಯ ಆಧಾರ ಕಾರ್ಡು, ಮಹಿಳೆಯ ಮರಣ ಪ್ರಮಾಣ ಪತ್ರ, ವಂಶವೃಕ್ಷ, ಕುಟುಂಬದ ಅಧೀಕೃತ ಸದಸ್ಯರ ಆಧಾರ ಕಾರ್ಡು ಮತ್ತು ಹೊಸ ಸೇರ್ಪಡೆ ಬಯಸುವ ಮಹಿಳೆಯರ ವಯಸ್ಸಿನ ದೃಢೀಕರಣ ಪತ್ರಗಳೊಂದಿಗೆ ಅರ್ಜಿಯನ್ನು ಸಂಬಂಧಪಟ್ಟ ಆಯಾ ತಾಲ್ಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಅಕ್ಟೋಬರ್ 2ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಮರುಸಮೀಕ್ಷೆ ಜಿಲ್ಲಾ ಮಟ್ಟದ ಸಮಿತಿಯ ಕಾರ್ಯದರ್ಶಿಗಳ ಪ್ರಕಟಣೆಯು ತಿಳಿಸಿದೆ
Kalyanasiri Kannada News Live 24×7 | News Karnataka
