Kuknoor Navodaya: Decision to fill vacant seats in class 11 directly
ಕೊಪ್ಪಳ ಸೆಪ್ಟೆಂಬರ್ 17 (ಕರ್ನಾಟಕ ವಾರ್ತೆ): ಕುಕನೂರಿನ ಪಿ.ಎಮ್ ಶ್ರೀ ಜವಾಹರ ನವೋದಯ ವಿದ್ಯಾಲಯದಲ್ಲಿ 2025-26ನೇ ಸಾಲಿನಲ್ಲಿ 11ನೇ ತರಗತಿಯ ವಾಣೀಜ್ಯ ವಿಭಾಗದಲ್ಲಿ ಖಾಲಿ ಇರುವ ಸೀಟುಗಳನ್ನು ನೇರವಾಗಿ ಭರ್ತಿ ಮಾಡಲು ನಿರ್ಧರಿಸಲಾಗಿದೆ.
ಇದರ ಸದುಪಯೋಗವನ್ನು 2024-25ರಲ್ಲಿ 10ನೇ ತರಗತಿಯಲ್ಲಿ ಉತ್ತೀರ್ಣರಾಗಿ 60% ಅಂಕ ಪಡೆದ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಸೆಪ್ಟೆಂಬರ್ 23 ಕೊನೆಯ ದಿನವಾಗಿದ್ದು, ಆಸಕ್ತರು ನವೋದಯ ವಿದ್ಯಾಲಯಕ್ಕೆ ಬರುವಾಗ ಅಗತ್ಯವಿರುವ ಎಲ್ಲಾ ಮೂಲ ಮತ್ತು ನಕಲು ದಾಖಲಾತಿಗಳನ್ನು ತೆಗೆದುಕೊಂಡು ಬರಬೇಕು. ಕೆಲವೇ ಸೀಟುಗಳು ಮಾತ್ರ ಲಭ್ಯವಿದ್ದು, ಆದಷ್ಟು ಬೇಗನೆ ಪ್ರವೇಶಾತಿಯನ್ನು ಪಡೆಯಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9447196502 ಮತ್ತು 7899072236 ಗೆ ಸಂಪರ್ಕಿಸುವAತೆ ಕುಕನೂರಿನ ಪಿ.ಎಮ್ ಶ್ರೀ ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Kalyanasiri Kannada News Live 24×7 | News Karnataka
