Demand for action against CDPO officer who insulted Devadasi women
ಗಂಗಾವತಿ: ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನ ಸಂಘ ಹಾಗೂ
ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಸಮಿತಿಯಿಂದ ದೇವದಾಸಿ ಮಹಿಳೆಯರು ಸಿ ಡಿ ಪಿ ಒ ಕಚೇರಿಗೆ ಹೋದಂತಹ ಸಂದರ್ಭದಲ್ಲಿ ದೇವದಾಸಿ ಮಹಿಳೆಯರನ್ನು ಚಪ್ಪಲಿ ಬಿಡುವ ಜಾಗದಲ್ಲಿ ಕೂರಿಸಿದಂತ ಘಟನೆ ಗಂಗಾವತಿ ನಗರದಲ್ಲಿ ನಡೆದಿದೆ. ಇದನ್ನು ಖಂಡಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನ ಸಂಘ ಹಾಗೂ
ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಸಮಿತಿಯಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಲಿತ ದೇವದಾಸಿ ಮಹಿಳೆಯರನ್ನು ಮರು ಸಮೀಕ್ಷೆ ಮಾಡಲು ಸರ್ಕಾರ ತೀರ್ಮಾನಿಸಿ ಗಂಗಾವತಿ ತಾಲೂಕಿನ ಸಿಡಿಪಿಒ ಕಚೇರಿಗೆ ಸಮೀಕ್ಷೆ ಮಾಡಲು ನೀಡಿದ್ದಾರೆ.
ಆದರೆ ಗಂಗಾವತಿ ತಾಲೂಕಿನ ಸಿ ಡಿ ಪಿ ಓ ಕಚೇರಿಯಲ್ಲಿ ಕಟ್ಟಕಡೆಯ ದೇವದಾಸಿ ಮಹಿಳೆಯನ್ನು ಚಪ್ಪಲಿ ಬಿಡುವ ಜಾಗದಲ್ಲಿ ಕೂರಿಸಿ ಸಮೀಕ್ಷೆ ನಡೆಸುತ್ತಿದ್ದಾರೆ.
ಇದು ನಾಚಿಕೆಗೇದಿನ ಸಂಗತಿ
ಇಂತಹ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು,ಮತ್ತು ಮೂರು ದಿನ ಕಳೆದರು ದೇವದಾಸಿ ಮಹಿಳೆಯರಿಗೆ ಸಮೀಕ್ಷೆ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ದೇವದಾಸಿ ಮಹಿಳೆಯರು ಬೇಸರ ವ್ಯಕ್ತಪಡಿಸಿದ್ದಾರೆ.
ಆದರೂ ಅವರು ಕೂಲಿ ನಾಲಿ ಬಿಟ್ಟು ದಿನನಿತ್ಯ ಕಚೇರಿಗೆ ಅಲೆದಾಡುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು
ದೇವದಾಸಿ ಮಹಿಳೆಯರಿಗೆ ಸರಿಯಾದ ಮಾಹಿತಿಯನ್ನು ಕೊಟ್ಟು ದಿನಕ್ಕೆ ಇಷ್ಟು ಜನ ಬರಬೇಕೆಂದು ತಿಳಿಸಲು ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು
ದಲಿತ ದೇವದಾಸಿ ಮಹಿಳೆಯರನ್ನು ಕಡೆಗಣಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ವಹಿಸಲು ಮತ್ತು ಸರ್ವೆಯಿಂದ ಹೊರಗುಳಿದ ದೇವದಾಸಿ ಮಹಿಳೆಯರನ್ನು ಸರ್ವೆ ಮಾಡಲು ಒತ್ತಾಯಿಸಿ ನಾಳೆ ಜಿಲ್ಲಾಧಿಕಾರಿಗಳಿಗೆ ಹೋರಾಟದ ಮೂಲಕ ಮನವಿ ಸಲ್ಲಿಸಲಾಗುವುದು ಎಂದುb ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ಸಂಘದಿಂದ ಮಂಜುನಾಥ್ ಡಗ್ಗಿ ತಿಳಿಸಿದ್ದಾರೆ.
Kalyanasiri Kannada News Live 24×7 | News Karnataka
