
Giving money for the development of temples is a commendable act.
ವರದಿ : ಬಂಗಾರಪ್ಪ .ಸಿ.
ಹನೂರು:ಕ್ಷೇತ್ರ ವ್ಯಾಪ್ತಿಯಲ್ಲಿನ ಉದ್ದನೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು ತಮ್ಮ ಬೋನಸ್‌ನ ಒಂದು ಭಾಗವನ್ನು ಸಮಾಜಮುಖಿ ಕಾರ್ಯಕ್ಕಾಗಿ ಮೀಸಲಿಟ್ಟು, ಗ್ರಾಮದ ದಂಡಿನ ಮಾರಮ್ಮ ಮತ್ತು ಚೌಡಿ ಮಾರಮ್ಮ ದೇವಾಲಯಗಳ ಅಭಿವೃದ್ಧಿಗೆ ₹1 ಲಕ್ಷ ನೀಡಲು ತೀರ್ಮಾನಿಸಿದ್ದಾರೆ.

ಉದ್ದನೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ
ಸರ್ವ ಸದಸ್ಯರ ಸಭೆ ಸೋಮವಾರ ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಇಂದಿನ ಚರ್ಚೆಯಲ್ಲಿ, ಕಳೆದ ಒಂದು ವರ್ಷದಲ್ಲಿ ಸಂಘವು ₹3.68 ಲಕ್ಷ ಆದಾಯ ಗಳಿಸಿದೆ ಎಂಬ ವಿಷಯ ಬಹಿರಂಗವಾಯಿತು. ಇದರ ಪೈಕಿ ₹1.71 ಲಕ್ಷವನ್ನು ಬೋನಸ್ ರೂಪದಲ್ಲಿ ಸದಸ್ಯರಿಗೆ ವಿತರಿಸಲು ನಿರ್ಧರಿಸಲಾಗಿದೆ.
ಆದರೆ ಈ ಬೋನಸ್‌ನಿಂದ ಸಮಾಜಮುಖಿ ಸೇವೆಯ ಭಾಗವಾಗಿ ₹1 ಲಕ್ಷ ಹಣವನ್ನು ಧರ್ಮದ ನಿಧಿಯಿಂದ ದೇವಸ್ಥಾನಗಳ ಅಭಿವೃದ್ಧಿಗೆ ನೀಡಲು ಸದಸ್ಯರು ಮುಂದಾಗಿರುವುದು ವಿಶೇಷವಾಗಿದೆ.
ಇದೇ ಸಮಯದಲ್ಲಿ
ಮಾತನಾಡಿದ ನಿರ್ದೇಶಕ ಉದ್ದನೂರು ಪ್ರಸಾದ್ ರವರು
ದೇವಾಲಯದ ಅಭಿವೃದ್ಧಿಗೆ ಬೋನಸ್ ಹಣ ನೀಡುತ್ತಿರುವುದು ಗ್ರಾಮೀಣ ಸಹಕಾರ ಸಂಘಗಳಿಂದ ಆಗಬಹುದಾದ ಸಮಾಜಮುಖಿ ಕಾರ್ಯಗಳಿಗೆ ಮಾದರಿ.
ಈ ಮನೋಭಾವನೆ ಎಲ್ಲ ಕಡೆಗೂ ಹರಡಬೇಕು ಎಂದು ಪ್ರಶಂಸಿಸಿದರು.
ಹಾಗಯೇ ಉದ್ದನೂರು – ಬೆಳ್ಳತ್ತೂರು – ಮಹಾಲಿಂಗಕಟ್ಟೆ ವ್ಯಾಪ್ತಿಯ ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ನಿರಂತರವಾಗಿ ಸರಬರಾಜು ಮಾಡುತ್ತಿರುವುದರಿಂದ, ಉದ್ದನೂರು ಬಿಎಂಸಿ ಜಿಲ್ಲೆಯಲ್ಲಿ ಮಾದರಿಯಾಗಿ ಕೇಂದ್ರವಾಗಿ ಗುರುತಿಸಿಕೊಂಡಿದೆ. ಈ ಯಶಸ್ಸು ನಮ್ಮ ಮೂರು ಗ್ರಾಮದ ರೈತರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮಕ್ಕೆ ಆಗಮಿಸಿದ ಚಾಮುಲ್ ವಿಸ್ತಾರಣಾಧಿಕಾರಿ ಮಾತನಾಡಿ ಬೆಳ್ಳತ್ತೂರು ಹಾಲು ಉತ್ಪಾದಕಕರ ಸಂಘವು 71ಸಾವಿರ ನಿವ್ವಳ ಲಾಭ ಬಂದಿರುವ ಕುರಿತು ಹಾಗೂ ಮಹಾಲಿಂಗನಕಟ್ಟೆ ಹಾಲು ಉತ್ಪಾದಕ ಸಹಾಕರ ಸಂಘವು5ಲಕ್ಷ 39ಸಾವಿತ ನಿವ್ವಳ ಲಾಭ ಬಂದಿರುವ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಉದ್ದನೂರು ಕಾರ್ಯದರ್ಶಿ ಶಾಂತಮೂರ್ತಿ, ಬೆಳ್ಳತ್ತೂರು ಅದ್ಯಕ್ಷ ಶ್ರೀದರ್ ಕಾರ್ಯದರ್ಶಿ ರಂಗಸ್ವಾಮಿ ಮಹಾಲಿಂಗನಕಟ್ಟೆ ಅದ್ಯಕ್ಷ ಕುಮಾರ್ ಕಾರ್ಯದರ್ಶಿ ಜಡೇಸ್ವಾಮಿ ಸೇರಿ




