Hanagal Kumara Swamy Jayanti
Tipperudraswamy Lake for success
ಗಂಗಾವತಿ. 08:ನಗರದಲ್ಲಿ ಸೆ.೧೦ ರಿಂದ ೨೦ರವರೆಗೆ ಆಯೋಜಿಸಿರುವ ಹಾನಗಲ್ ಕುಮಾರ ಶಿವಯೋಗಿಗಳ ೧೫೮ ಜಯಂತೋತ್ಸವ ಯಶಸ್ವಿಗೆ ಸರ್ವ ಸನ್ನದ್ಧರಾಗಬೇಕು ಎಂದು ಕರೆ ನೀಡಿರುವ ಮಾಜಿ ಕಾಡಾ ಅಧ್ಯಕ್ಷ ಬಿ.ಹೆಚ್.ಎಂ.ತಿಪ್ಪೇರುದ್ರಸ್ವಾಮಿ ವಕೀಲರು ಅವರು ಈ ಜಯಂತಿ ಸಂದರ್ಭದಲ್ಲಿ ಜನರಲ್ಲಿ ದುಶ್ಚಟಗಳನ್ನು ದೂರುಗೊಳಿಸುವ ಅರಿವು ಮೂಡಿಸಿ ನಾಡಿನ ನೂರಾರು ಪೂಜ್ಯರು ಆಗಮಿಸುತ್ತಿರುವುದು ನಮ್ಮ ತಾಲೂಕಿನ ಭಾಗ್ಯವಾಗಿದೆ. ಹೀಗಾಗಿ ಹತ್ತು ದಿನಗಳ ಕಾಲ ನಡೆಯುವ ಪಾದಯಾತ್ರೆ ಮತ್ತಿತರ ಕಾರ್ಯಕ್ರಮದಲ್ಲಿ ಎಲ್ಲರು ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಈ ಕುರಿತು ಅವರು ಮಾಧ್ಯಮಗಳ ಮೂಲಕ ಜನರಲ್ಲಿ ಮನವಿ ಮಾಡಿದ್ದು, ಶಿವಯೋಗಿ ಮಂದಿರವನ್ನು ಸ್ಥಾಪಿಸಿ ವಿಭೂತಿ ತಯಾರಿಸುವ ಸಂಸ್ಥೆ ಕಟ್ಟಿ ಗೋವುಗಳ ರಕ್ಷಣೆ ಮಾಡುವುದರ ಜೊತೆಗೆ ನಾಡಿನ ಸಮಸ್ಥ ಜನರಲ್ಲಿ ಸಂಸ್ಕಾರ, ಅಧ್ಯಾತ್ಮ, ಸಂಗೀತ, ಸಂಸ್ಕೃತ ಪಾಂಡಿತ್ಯವನ್ನು ನೀಡುವ ದೊಡ್ಡ ಸಂಸ್ಥೆಯನ್ನು ಕಟ್ಟಿ ಸಮಾಜ ಪರಿವರ್ತನೆ ರೂವಾರಿಗಳಾಗಿರುವ ಪೂಜ್ಯ ಕುಮಾರ ಮಹಾಶಿವಯೋಗಿಗಳ ಜಯಂತಿ ಕಾರ್ಯಕ್ರಮ ನಡೆಸುವ ಭಾಗ್ಯ ನಮ್ಮ ತಾಲೂಕಿಗೆ ಬಂದಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಅಖಿಲ ಭಾರತ ವೀರಶೈವ ಮಹಾಸಭಾ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಸರ್ವರು ಭಾಗವಹಿಸಿ ಪೂಜ್ಯರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ತಿಪ್ಪೇರುದ್ರಸ್ವಾಮಿ ವಕೀಲರು ಕರೆ ನೀಡಿದ್ದಾರೆ.