Teachers' Day celebration program
ವರದಿ ಸೋಮಶೇಖರಯ್ಯ ಸ್ವಾಮಿ ಹಿರೇಮಠ
ಕನಕಗಿರಿ ಪಟ್ಟಣದ ಸರಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಆಚರಣೆ ಮಾಡಲಾಯಿತು, ಈ ಸಂದರ್ಭದಲ್ಲಿ ತತ್ವಜ್ಞಾನಿಗಳು, ಶಿಕ್ಷಣತಜ್ಞರು, ಭಾರತದ ಮಾಜಿ ರಾಷ್ಟ್ರಪತಿಗಳು ಆದ ಭಾರತರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ತುಳಜಾ ನಾಯ್ಕ್ ಅವರು ದೇಶ ಕಂಡಂತಹ ಅತ್ಯುತ್ತಮ ಶಿಕ್ಷಣ ತಜ್ಞ ಹಾಗೂ ರಾಜಕಾರಣಿಯಾಗಿ 1952 ರಿಂದ 1962ರ ವರೆಗೆ ಭಾರತದ ಮೊದಲ ಉಪರಾಷ್ಟ್ರಪತಿ ಯಾಗಿ ಹಾಗೂ 1962ರಿಂದ 1967ರ ವರೆಗೆ ಭಾರತದ ಎರಡನೇ ರಾಷ್ಟ್ರಪತಿಯಾಗಿ ದೇಶದ ಸೇವೆ ಸಲ್ಲಿಸಿದ ಮಹಾನ್ ತತ್ವಜ್ಞಾನಿಗಳು, ಶಿಕ್ಷಣತಜ್ಞರು ಆಗಿದ್ದರು, ರಾಧಾಕೃಷ್ಣನ್ ಅವರು “ಶಿಕ್ಷಕರು ದೇಶದ ಅತ್ಯುತ್ತಮ ಮನಸ್ಸುಗಳಾಗಿರಬೇಕು” ಎಂದು ನಂಬಿದ್ದರು ಎಂದು ತಿಳಿಸಿದರು, ಹಾಗೂ ರಾಧಾಕೃಷ್ಣನ್ ಅವರು ಮೈಸೂರಿನ ವಿಶ್ವ ವಿದ್ಯಾಲಯದ ಕುಲಪತಿಗಳಾಗಿದ್ದಾಗ ಅವರು ವರ್ಗಾವಣೆ ಸಂದರ್ಭದಲ್ಲಿ ಸ್ವತಃ ಮಕ್ಕಳೇ ರಾಧಾಕೃಷ್ಣನ್ ಅವರನ್ನು ಸಾರೋಟಿನಲ್ಲಿ ಕುಳ್ಳಿರಿಸಿಕೊಂಡು ರೈಲ್ವೆ ಸ್ಟೇಷನ್ ಗೆ ಹೋಗಿ ಬಿಳ್ಕೊಟ್ಟು ಬಂದಿದ್ದರು, ಅದು ಅವರು ಮಕ್ಕಳ ಮೇಲೆ ಪ್ರೀತಿ ಮತ್ತು ಕಾಳಜಿಯನ್ನು ತೋರಿಸುತ್ತದೆ ಎಂದು ತಿಳಿಸಿದರು.
ಅದೇ ರೀತಿಯಾಗಿ ಶಾಲೆಯ ಮಕ್ಕಳೇ ವಿಶೇಷವಾಗಿ ಇಬ್ಬರು ಶಿಕ್ಷಕಿಯರಾದ ಶ್ರೀ ಮತಿ ರೂಪಾ ಭೂಸನೂರಮಠ ಹಾಗೂ ಶ್ರೀ ಮತಿ ಸುರೇಖಾ ಅವರನ್ನು ಉತ್ತಮ ಶಿಕ್ಷಕರನ್ನು ಆರಿಸಿದರು ಇಬ್ಬರೂ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು, ಹಾಗೂ ಹಿರಿಯ ಶಿಕ್ಷಕಿ ಶ್ರೀಮತಿ ವಿಮಲಾ ಬಾಯಿ ಜೋಶಿ ಅವರನ್ನು ಶಿಕ್ಷಕರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸರಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಭಾರಿ ಪ್ರಾಚಾರ್ಯರಾದ ಅಮರೇಶ ದೇವರಾಳ, ಶಿಕ್ಷಕರಾದ ಜ್ಯೋತಿ ಮ್ಯಾಗೇರಿ, ಶೃತಿ ಎಂ ಹಿರೇಮಠ, ಹುಸೇನಬೀ, ಸಾವಿತ್ರಿ ನಾಯಕ, ಜ್ಯೋತಿ ಹಿರೇಮಠ, ರೇಣುಕಾ, ನಾಗರತ್ನ, ಸಾನಿಯಾ ಹಾಗೂ ಶಾಲೆಯ ವಿದ್ಯಾರ್ಥಿಗಳು ಇದ್ದರು.