Verification of the records of the candidates in the final selection list for various posts on September 8th
ಕೊಪ್ಪಳ ಸೆಪ್ಟೆಂಬರ್ 06, (ಕರ್ನಾಟಕ ವಾರ್ತೆ): ಎನ್.ಹೆಚ್.ಎಂ ಯೋಜನೆಯಡಿಯಲ್ಲಿ ವಿವಿಧ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಯು ಸೆಪ್ಟೆಂಬರ್ 8ರಂದು ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ.ಲಿಂಗರಾಜು ಅವರು ತಿಳಿಸಿದ್ದಾರೆ.
ಎನ್.ಹೆಚ್.ಎಂ ಅಡಿಯಲ್ಲಿ ಚಿಕ್ಕಮಕ್ಕಳ ತಜ್ಞವೈದ್ಯರು. ಡಿಇಐಸಿ ಶುಶ್ರೂಷಣಾಧಿಕಾರಿಗಳು ಹಾಗೂ ಆರ್.ಕೆ.ಎಸ್.ಕೆ ಕೋರ್ಡಿನೇಟರ್ ಹುದ್ದೆಗಳ ತಾತ್ಕಾಲಿಕ ಪಟ್ಟಿಗಳನ್ನು www.koppal.nic.in ನಲ್ಲಿ ಪ್ರಚುರಪಡಿಸಿದ್ದು. ಈ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳು, ಆನ್‌ಲೈನ್‌ನಲ್ಲಿ ಅಪ್ ಲೋಡ್ ಮಾಡಿದ ಎಲ್ಲಾ ಮೂಲ ದಾಖಲಾತಿಗಳ ಜತೆಗೆ ಒಂದು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಸೆ.8ಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಕೊಪ್ಪಳ ಇವರ ಕಾರ್ಯಾಲಯಕ್ಕೆ ಹಾಜರಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.