Breaking News

ಶಿಕ್ಷಣ ಕ್ಷೇತ್ರದಲ್ಲಿ ಮಠಮಾನ್ಯಗಳ ಕೊಡುಗೆ ಅಪಾರ. : ಸಂಸದ ರಾಜಶೇಖರ ಹಿಟ್ನಾಳ್

The contribution of monks in the field of education is immense: MP Rajashekar Hitnal

ಗಂಗಾವತಿ: ಕರ್ನಾಟಕದ ಧರ್ಮ, ಶಿಕ್ಷಣ, ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರಗಳಿಗೆ ಮಠ ಮಾನ್ಯಗಳ ಕೊಡುಗೆ ಅಪಾರವಾಗಿದೆ. ಅದರಲ್ಲೂ ಲಿಂಗಾಯತ ಮಠಗಳು ಅನ್ನ, ಆಶ್ರಯ,ಅಕ್ಷರ ಗಳ ತ್ರಿವಿಧ ದಾಸೋಹ ಸೂತ್ರವನ್ನು ಅಳವಡಿಸಿಕೊಂಡು ಸಲ್ಲಿಸಿದ ಸೇವೆ ಅಮೋಘವಾಗಿದೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ರಾಜಶೇಖರ ಹಿಟ್ನಾಳ ಅವರು ಅಭಿಪ್ರಾಯ ಪಟ್ಟರು ಅವರು ನಿನ್ನೆ ಗಂಗಾವತಿಯ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ತಮ್ಮ ಅನುದಾನದಲ್ಲಿ ನಿರ್ಮಿಸಿದ ಹೈಮಾಸ್ ದೀಪವನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ಗಂಗಾವತಿಯ ಕಲ್ಮಠ ವು ಕೂಡಾ ಕೊಪ್ಪಳ ಜಿಲ್ಲೆಯ ಶೈಕ್ಷಣಿಕ ಬೆಳವಣಿಗೆಗೆ ಸಲ್ಲಿಸುತ್ತಿರುವ ಸೇವೆ ಗಮನಾರ್ಹವಾದುದು.ಸಂಸ್ಥೆಯ ಬೆಳವಣಿಗೆಗೆ ಯಾವತ್ತು ನಾನು ಬೆಂಬಲವಾಗಿ ನಿಲ್ಲುತ್ತೇನೆ ಎಂದರು. ಸಾನಿಧ್ಯ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಡಾ. ಕೊಟ್ಟೂರು ಮಹಾಸ್ವಾಮಿಗಳು ಸಂಸ್ಥೆ ಬಡವಿದ್ಯಾರ್ಥಿಗಳಿಗಾಗಿಯೇ ಸ್ಥಾಪಿಸಿದ್ದು, ಕಡಿಮೆ ಶುಲ್ಕದಲ್ಲಿ ಕಳೆದ ಅರವತ್ತು ವರ್ಷಗಳಿಂದ ಶಿಕ್ಷಣದಾಸೋಹಗೈಯುತ್ತಲಿದೆ .ಸಂಸ್ಥೆಯ 18 ಶಾಖೆಗಳಲ್ಲಿ 4000 ವಿದ್ಯಾರ್ಥಿಗಳು ಕೆ.ಜಿ ಯಿಂದ ಪಿ.ಜಿಯ ವರೆಗೆ ಅಧ್ಯಯನ ಮಾಡುತ್ತಿದ್ದಾರೆ ಎಂದರು.‌ ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಕರ್ನಾಟಕದಲ್ಲಿ ಲಿಂಗಾಯತ ಮಠಮಾನ್ಯಗಳು ಇರದಿದ್ದರೇ ಕರ್ನಾಟಕ ಶೈಕ್ಷಣಿಕವಾಗಿ ಕತ್ತಲೆ ಕೂಪದಲ್ಲಿ ಇರುತ್ತಿತ್ತು.ಕಲ್ಮಠವೂ 700 ವರ್ಷಗಳಿಂದಲೂ ಸೇವಾನಿರತವಾಗಿದೆ. ರಾಜಕಾರಣಿಗಳು ಮಠ ಮಾನ್ಯಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಿ ಪ್ರೋತ್ಸಾಹಿಸಬೇಕೆಂದರು .ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶರಣೇಗೌಡ ಮಾಲಿಪಾಟೀಲ್ ನಗರಸಭಾ ಸದಸ್ಯ ಮನೋಹರ್ ಸ್ವಾಮಿ ಹಿರೇಮಠ ಮಾಜಿನಗರ ಸಭಾ ಸದಸ್ಯ ಕೆ ವೆಂಕಟೇಶ್ ಸಂಸ್ಥೆಯ ಸಾಮಾನ್ಯ ಸದಸ್ಯ ಸತೀಶ್ ಭೋಜ ಶೆಟ್ಟರ್ ಮುಂತಾದವರು ಮತ್ತು ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಶಾಲಾ-ಕಾಲೇಜುಗಳ ಮುಖ್ಯೋಪಾಧ್ಯಾಯರು ,ಪ್ರಾಚಾರ್ಯರು ,ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

ಜಾಹೀರಾತು

About Mallikarjun

Check Also

screenshot 2025 09 08 20 43 04 31 6012fa4d4ddec268fc5c7112cbb265e7.jpg

ವಿನಾಯಕ ಆಪ್ಟಿಕಲ್ ಮತ್ತು ಕಣ್ಣಿನ ಪರೀಕ್ಷಾ ಕೇಂದ್ರ ಹಲವಾರು ಅಂಧರ ಬಾಳಿಗೆ ಬೆಳಕಾಗಿದೆ: ಶಂಕರ ಕಣ್ಣಿನ ಆಸ್ಪತ್ರೆ ನೇತ್ರತಜ್ಞೆ ಡಾ.ಶಮೀಕ್ಷಾ

Vinayak Optical and Eye Examination Center has brought light to the lives of many blind …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.