Reduction in GST burden on poor and middle class is welcome: Former MLA Parannamunavalli

ಗಂಗಾವತಿ: ಕೇಂದ್ರದ ವಿತ್ತ ಸಚಿವೆ ಮಾನ್ಯ ನಿರ್ಮಲಾ ಸೀತಾರಾಮನ್‌ರವರು 56ನೇ ಜಿ.ಎಸ್.ಟಿ ಸಭೆಯಲ್ಲಿ 175 ವಸ್ತುಗಳ ದರ ಇಳಿಕೆ ಮಾಡಿ ದೇಶದ ಬಡ ಮತ್ತು ಮಧ್ಯಮವರ್ಗದವರಿಗೆ ನೆಮ್ಮದಿಯ ಬದುಕಿಗಾಗಿ ಅತ್ಯಂತ ಅನುಕೂಲಕರ ವಾತಾವರಣ ಕಲ್ಪಿಸಿದ್ದಾರೆ. ಹಾಗೂ ಜೀವ ಹಾನಿಕಾರಕ ರೋಗಗಳಿಗೆ ನೀಡಲಾಗುವ ಔಷಧಗಳಲ್ಲೂ ಕೂಡಾ ತೆರಿಗೆಯನ್ನು ಗಣನೀಯವಾಗಿ ಇಳಿಕೆ ಮಾಡಿ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದಾರೆ.

ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಇದೇ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ತಮ್ಮ ಭಾಷಣದಲ್ಲಿ ಬರುವ ದೀಪಾವಳಿ ಹಬ್ಬದ ಒಳಗಾಗಿ ದೇಶದ ಜನತೆಗೆ ಅತಿ ದೊಡ್ಡ ಕಾಣಿಕೆ ನೀಡುತ್ತೇವೆ ಎಂದು ನೀಡಿದ ವಾಗ್ದಾನದಂತೆ ದೇಶದ ಜನರ ದಿನನಿತ್ಯದ ಉಪಯೋಗದ ವಸ್ತುಗಳ ತೆರಿಗೆಯನ್ನು ಕಡಿಮೆ ಮಾಡಿ ದೇಶದ ಜನರಿಗೆ ನಿಜವಾಗಿಯೂ ಹಬ್ಬದ ಸವಿಕಾಣಿಕೆ ನೀಡಿದ್ದಾರೆ.
ಪ್ರಪಂಚದಾದ್ಯಂತ ಇರುವ ವ್ಯವಹಾರಿಕ ಅನಿಶ್ಚಿತತೆಯ ವಾತಾವರಣ, ಹಣದುಬ್ಬರ ಹಾಗೂ ಇನ್ನಿತರ ಸವಾಲುಗಳ ನಡುವೆ, ಅಮೇರಿಕಾ ಅಧ್ಯಕ್ಷರು ನಮ್ಮ ದೇಶದ ಮೇಲೆ ವಿಧಿಸಿರುವ ಹೆಚ್ಚಿನ ತೆರಿಗೆಯಿಂದ ನಮ್ಮ ವಾಣಿಜ್ಯೋದ್ಯಮಿಗಳ ಹಿತ ಕಾಯಲು, ಕೈಗಾರಿಕೆಗಳನ್ನು ಉಳಿಸಲು, ಕೃಷಿ ಕ್ಷೇತ್ರವನ್ನು ಬಲಪಡಿಸಲು ಅತ್ಯಂತ ದಿಟ್ಟ ನಿರ್ಧಾರ ತೆಗೆದುಕೊಂಡ ನಮ್ಮ ಪ್ರಧಾನ ಮಂತ್ರಿಗಳು ಹಾಗೂ ವಿತ್ತ ಸಚಿವರಿಗೆ ಹೃತೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.