- Committed to the professional development of newspaper distributors*. G.M. Rajashekar

ಚಿಕ್ಕಮಗಳೂರು:ಪತ್ರಿಕೆ ಮುದ್ರಣ ಎಷ್ಟು ಮುಖ್ಯವೋ ಪತ್ರಿಕೆಗಳ ವಿತರಣೆಯು ಅಷ್ಟೇ, ಪ್ರಮುಖವಾಗಿದ್ದು ಅಂತಹ ವಿತರಕರ ಶ್ರೇ ಯೋಭಿವೃದ್ಧಿಗೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ ಬದ್ಧವಾಗಿದೆ ಎಂದು ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಜಿ.ಎಂ ರಾಜಶೇಖರ್ ತಿಳಿಸಿದರು
ಗುರುವಾರ ಚಿಕ್ಕಮಗಳೂರಿನ ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ ನಡೆದ ಪತ್ರಕರ್ತರೊಂದಿಗೆ ಸಮಲೋಚನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪತ್ರಕರ್ತರಿಗೆ ಸಂಘದ ಧೈರ್ಯೋದ್ದೇಶಗಳು ಕುರಿತಂತೆ ಪತ್ರಕರ್ತರಾದ ನಾವುಗಳು ಒಗ್ಗಟ್ಟಾಗಿ ಸಮಾಜದ ಸಮಸ್ಯೆಗಳನ್ನು ಎತ್ತಿ ಹಿಡಿಯುವ ಕಾರ್ಯ ಮಾಡಬೇಕಾಗಿದೆ ಎಂದರು. ಪತ್ರಕರ್ತರ ಸಮಸ್ಯೆಗಳಿಗೆ ಸಂಘವು ಸದಾ ಸ್ಪಂದಿಸುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿಯೂ ಅವರ ಸಂಕಷ್ಟಗಳಿಗೆ ಸ್ಪಂದಿಸಲಿದ್ದೇವೆ
ಎಂದರು.
ಪತ್ರಕರ್ತರ ಸಮಸ್ಯೆಗಳನ್ನು ಅರಿತು ಸಂಘವು ಆರೋಗ್ಯ ವಿಮೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ ಎಂದರು.
ಹಿರಿಯ ಪತ್ರಕರ್ತರಾದ ತಿಪ್ಪೇರುದ್ರಪ್ಪ ಮಾತನಾಡಿ ಜಿಲ್ಲಾ ಪತ್ರಕರ್ತರ ಸಂಘವು ಹಲವು ವರ್ಷಗಳಿಂದ ಪತ್ರಕರ್ತರ ಏಳಿಗೆಗೆ ಶ್ರಮಿಸುತ್ತಾ ಬಂದಿರುತ್ತದೆ. ಇದರಿಂದ ಪತ್ರಕರ್ತರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಿದೆ ಪತ್ರಕರ್ತರಲ್ಲಿ ಯಾವುದೇ ಭಿನ್ನವಿಪ್ರಾಯಗಳಿದ್ದರೂ ಸಮಾಜದ ಒಳತಿಗಾಗಿ ದುಡಿಯುವ ಅವಶ್ಯಕತೆ ಇದೆ ಎಂದರು.
ಹೊಸದಿಗಂತ ಪತ್ರಿಕೆ ಜಿಲ್ಲಾ ವರದಿಗಾರ ಸುರೇಶ್ ಮಾತನಾಡಿ ಸಂಘದ ಉದ್ದೇಶಗಳು ಉತ್ತಮವಾಗಿದ್ದು ಎಲ್ಲಾ ಪತ್ರಕರ್ತರು ಒಗ್ಗಟ್ಟಾಗಿ ಸಂಘಟನೆಗಳ ಹೊರತಾಗಿಯೂ ಉತ್ತಮ ಬಾಂಧವ್ಯ ಹೊಂದಬೇಕು ಎಂದರು. ಇದೇ
ಈ ಸಂದರ್ಭದಲ್ಲಿ ಪತ್ರಿಕೆ ವಿತರಕರಾದ ಹನುಮಂತಪ್ಪ ಹಾಗೂ ನಂಜುಂಡಿ ಇವರಗಳನ್ನು ಸನ್ಮಾನಿಸಲಾಯಿತು
ಸುವರ್ಣ ನ್ಯೂಸ್ ವರದಿಗಾರ ಕಿರಣ್, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕುಮಾರ್, ಕರ್ನಾಟಕ ಮಾಧ್ಯಮ ಪತ್ರಕರ್ತ ಸಂಘದ ರಾಜ್ಯ ಕಾರ್ಯದರ್ಶಿ ಎಂ.ಸಿ ಮಂಜುನಾಥ , ಕಾರ್ಯದರ್ಶಿ ಪ್ರಸನ್ನ ಕಿಬ್ಬ್ಲಿ ಸದಸ್ಯರಾದ ಪ್ರಕಾಶ್ ಮೂರ್ತಿ ಪುರುಷೋತ್ತಮ್ ಹಾಗೂ ತಾಲೂಕು ಅಧ್ಯಕ್ಷರಾದ ಅನಿಲ್ ಜಿಲ್ಲಾ ಖಜಾಂಚಿ ರಾಜೇಶ್, ಸೇರಿದಂತೆ ಜಿಲ್ಲೆಯ ಪತ್ರಕರ್ತರು ಉಪಸ್ಥಿತರಿದ್ದರು.