Headmaster Kanchana presented the World Record Award

ಕಲೆ ರಂಗದಲ್ಲಿ ತನ್ನದೇ ಆದ ಹೆಜ್ಜೆ ಗುರುತನ್ನು ಮೂಡಿಸಿದ ಧೃತಿ ಬಿ ಕರಾಟೆ,ಯೋಗ, ಡ್ಯಾನ್ಸ್, ಸ್ಕೇಟಿಂಗ್, ಆಕ್ಟಿಂಗ್ ನಲ್ಲಿ ಸಹ ಸೈ ಎನಿಸಿಕೊಂಡಿದ್ದಾಳೆ.
ಕೊಪ್ಪಳ ನಗರದ ಶಾರದಾ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಒಂದನೇ ತರಗತಿ ಅಭ್ಯಾಸ ಮಾಡುತ್ತಿರುವ ಧೃತಿ ಬಿ, ಬೆಂಗಳೂರಿನಲ್ಲಿ ನಡೆದ ವೃಕ್ಷಾಸನ 3 ನಿಮಿಷಗಳ ಕಾಲ ಸ್ಪರ್ಧೆಯಲ್ಲಿ ಭಾಗವಹಿಸಿ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಪಡೆದುಕೊಂಡಿದ್ದಾಳೆ.
ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯಲ್ಲಿ ಒಂದಾದ ಅವಿನಾಶ್ ಯೋಗ ಅಂಡ್ ಏರೋಬಿಕ್ ಸಂಸ್ಥೆ ದಿನಾಂಕ 24/08/2025 ರಂದು ಏರ್ಪಡಿಸಿದ ಐದನೇ ರಾಷ್ಟ್ರೀಯ ಯೋಗಾ ಸ್ಪರ್ಧೆಯಲ್ಲಿ ಮೂರು ನಿಮಿಷಗಳ ಕಾಲ ವೃಕ್ಷಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ಪಡೆದುಕೊಂಡಿದ್ದಾಳೆ.
ಪ್ರಶಸ್ತಿ ಪಡೆದ ವಿದ್ಯಾರ್ಥಿಗೆ ಶಾರದಾ ಇಂಟರ್ನ್ಯಾಷನಲ್ ಸ್ಕೂಲ್ ನ ಪ್ರಿನ್ಸಿಪಾಲರಾದ ಶ್ರೀಮತಿ ಕಾಂಚನ ಹಾಗೂ ಸಹ ಶಿಕ್ಷಕಿಯರಾದ ಅಮೃತ ಹಾಗೂ ಮಮತಾ ಮೇಡಂ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ವಿತರಿಸಿ ಅಭಿನಂದಿಸಿದರು.
Kalyanasiri Kannada News Live 24×7 | News Karnataka
