Central Government's campaign to achieve financial inclusion perfection

ಗಂಗಾವತಿ: ತಾಲೂಕಿನ ಹೊಸಕೇರಾ ಗ್ರಾಮದ ಗ್ರಾಮಪಂಚಾಯತ್ ಸಭಾಂಗಣದಲ್ಲಿ ನಡೆದ ಅಭಿಯಾನ ಕಾರ್ಯಕ್ರಮದಲ್ಲಿ
ಕೇಂದ್ರ ಸರ್ಕಾರ ಜಾರಿಗೊಳಿಸಿದ ಸಾಮಾಜಿಕ ಭದ್ರತಾ ಯೋಜನೆ ಎಲ್ಲರೂ ಸದ್ಬಳಕೆ ಮಾಡಿಕೊಳ್ಳಲು ಹೊಸಕೇರಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಿರಣಕುಮಾರ ಕರೆ ನೀಡಿದರು 18 ರಿಂದ 70 ವರ್ಷ ವಯಸ್ಸಿನ ಎಲ್ಲರೂ ಬ್ಯಾಂಕ್ ಖಾತೆಗಳ ಮೂಲಕ ವಿಮಾ ಸೌಲಭ್ಯ ಪಡೆಯಲು ತಿಳಿಸಿದರು. ಬಡ ಕುಟುಂಬದ ಸರ್ವರಿಗೂ ಈ ಯೋಜನೆ ಕಾಮಧೇನು ಇದ್ದಂತೆ, ಕಡಿಮೆ ವಿಮಾ ಕಂತಿನಲ್ಲಿ ಎರಡು ಲಕ್ಷ ಮೊತ್ತದ ವಿಮಾ ಪರಿಹಾರ ಪಡೆದು ಕೊಳ್ಳಬಹುದು. ಎಲ್ಲರು ಸೌಲಭ್ಯ ಪಡೆಯಲು ತಿಳಿಸಿದರು*
*ಈ ಸಂದರ್ಭದಲ್ಲಿ ಗಂಗಾವತಿ ಭಾರತೀಯ ಸ್ಟೇಟ್ ಬ್ಯಾಂಕ್ ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಟಿ.ಆಂಜನೇಯ ರವರು ಕೇಂದ್ರ ಸರ್ಕಾರ, ರಾಜ್ಯ ಮಾರ್ಗದರ್ಶಿ ಬ್ಯಾಂಕ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಆದೇಶದಂತೆ ಜುಲೈ 1 ರಿಂದ ಸೆಪ್ಟೆಂಬರ್ 30 ರವರಿಗೆ ಹಣಕಾಸು ಸೇರ್ಪಡೆ ಪರಿಪೂರ್ಣತೆ ಅಭಿಯಾನ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ. ಅಭಿಯಾನ ಕಾರ್ಯಕ್ರಮದಲ್ಲಿ ಈ- ಕೆವೈಸಿ, ನಾಮಿನೇಷನ್ ಸೌಲಭ್ಯ, ಜನ ಧನ್ ಖಾತೆ, ಸಾಮಾಜಿಕ ಭದ್ರತಾ ಯೋಜನೆ ಸೌಲಭ್ಯ, ಡಿಜಿಟಲ್ ಬ್ಯಾಂಕಿಂಗ್, ಸೈಬರ್ ಕ್ರೈಂ ಕುರಿತು ಮಾಹಿತಿಗಳನ್ನು ಗ್ರಾಹಕರಿಗೆ ಮತ್ತು ಸಾರ್ವಜನಿಕರಿಗೆ ತಿಳಿಯಪಡಿಸಲಾಗುವುದು ಎಂದು ತಿಳಿಸಿದರು*
ಮರಳಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಪ್ರವೀಣ್ ರವರು ತಮ್ಮ ಬ್ಯಾಂಕಿನ ಸೌಲಭ್ಯಗಳು ಮತ್ತು ವಿಶೇಷವಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ಕೇಂದ್ರ ಸರ್ಕಾರ ಜಾರಿ ಮಾಡಿದ ವಿಮಾ ಯೋಜನೆಗಳ ಕುರಿತು ಮಾತನಾಡಿದರು
ಆರ್ಥಿಕ ಸಾಕ್ಷರತಾ ಕೇಂದ್ರದ ಪವನ್ ರವರು ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಮತ್ತು ಗ್ರಾಹಕರಿಗೆ ರೈತಾಪಿ ವರ್ಗದವರಿಗೆ ಬ್ಯಾಂಕಿನಲ್ಲಿ ವಿಶೇಷವಾಗಿ ಕೇಂದ್ರ ಸರಕಾರ ಜಾರಿಗೊಳಿಸಿದ ಹಲವಾರು ಯೋಜನೆಗಳ ಮಾಹಿತಿಯನ್ನು ನೀಡಿದರು
ಪ್ರಾರಂಭದಲ್ಲಿ ಹೊಸಕೆರೆ ಗ್ರಾಮದ ಯುವ ಮುಖಂಡರಾದ ಮಂಜುನಾಥ್ ಹೊಸಕೇರಿ ವಿಕಲಚೇತನ ಸಂಘದ ಹಿರಿಯ ಪದಾಧಿಕಾರಿಗಳು ರವರು ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು
ಈ ಪರಿಪೂರ್ಣತೆ ಅಭಿಯಾನ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಸಿಬ್ಬಂದಿ ದೊಡ್ಡ ಬಸವ,ಗ್ರಾಮದ ಹಿರಿಯರು ಶಿವಕುಮಾರ ಪಾಟೀಲ್ ಮತ್ತು ಸದಸ್ಯರು ಮತ್ತು ಸಿಬ್ಬಂದಿಗಳು ಅಲ್ಲದೆ ಒಕ್ಕೂಟದ ಪದಾಧಿಕಾರಿಗಳಾದ ಶ್ರೀಮತಿ ಅನಿತಾ,ಅನಂತಲಕ್ಷ್ಮಿ,ದುರುಗಮ್ಮ ಮತ್ತು ಅನೇಕ ಮಹಿಳೆಯರು ರೈತರು ಭಾಗವಹಿಸಿದ್ದರು