Old age pension for fake beneficiaries - District Magistrates are far away

ಗಂಗಾವತಿ: ತಾಲೂಕಿನಾಧ್ಯಂತ ಕಾನೂನುಬಾಹಿರವಾಗಿ ಸರ್ಕಾರದ ಮಹತ್ತರ ಯೋಜನೆಗಳಾದ ಸಂಧ್ಯಾಸುರಕ್ಷಾ, ರಾಷ್ಟ್ರೀಯ ಇಂದಿರಾಗಾಂಧಿ ವೃದ್ದಾಪ್ಯ ವೇತನದಂತಹ ಮಾಸಿಕ ಪಿಂಚಣಿ ಯೋಜನೆಗಳನ್ನು ಪಡೆಯುತ್ತಿರುವ ಫಲಾನುಭವಿಗಳನ್ನು ಪತ್ತೆಮಾಡಿ, ಅವರ ಮಂಜೂರಾತಿ ಆದೇಶವನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆಯ ಜಿಲ್ಲಾಧ್ಯಕ್ಷರಾದ ಶಿವನಾರಾಯಣ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ಪತ್ರಿಕೆ ಪ್ರಕಟನೆ ಮೂಲಕ ಮಾತನಾಡಿ.
ಆಗಸ್ಟ್-26 ಮಂಗಳವಾರ ವೃದ್ಧಾಪ್ಯ ವೇತನ ಪಡೆಯುತ್ತಿರುವ ನಕಲಿ ಫಲಾನುಭವಿಗಳಿಗೆ ಸಹಕಾರ ನೀಡಿ, ಸರ್ಕಾರದ ಯೋಜನೆಗಳಿಗೆ ಧಕ್ಕೆ ಉಂಟುಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ . ಕಂದಾಯ ಇಲಾಖೆಯ ಅಧಿಕಾರಿಗಳು ಸಂಧ್ಯಾ ಸುರಕ್ಷ, ರಾಷ್ಟ್ರೀಯ ಇಂದಿರಾಗಾಂಧಿ ವೃದ್ಧಾಪ್ಯ ವೇತನ ಯೋಜನೆಗೆ ಸರ್ಕಾರ ನಿಗದಿಪಡಿಸಿದಂತೆ ತಹಶೀಲ್ದಾರರು ಪ್ರಮಾಣೀಕರಿಸಿ ನೀಡಿರುವಂತಹ ಮೂಲ ಗುರುತಿನ ಚೀಟಿಗಳಾದ ಚುನಾವಣಾ ಗುರುತಿನ ಚೀಟಿ, ಆಧಾರ ಕಾರ್ಡ್‌ಗಳಲ್ಲಿ ನಮೂದಿಸಿದ ವಯಸ್ಸನ್ನು ಸ್ಪಷ್ಟವಾಗಿ ಪರಿಶೀಲಿಸಿದ ನಂತರ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಾಗಿರುತ್ತದೆ. ಆದರೆ ಕಂದಾಯ ಇಲಾಖೆಯ ಅಧಿಕಾರಿಗಳು ಈ ಯೋಜನೆಗೆ ಅರ್ಹತೆಯನ್ನು ಹೊಂದದೇ ಬೊಟ್ಟಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಅರ್ಜಿಗಳನ್ನು ಹಣದಾಸೆಗೆ ಪುರಸ್ಕರಿಸಿರುತ್ತಾರೆ. ಈ ಅಕ್ರಮ ಫಲಾನುಭವಿಗಳ ಸಂಖ್ಯೆ ವೆಂಕಟಗಿರಿ ಹಾಗೂ ಮರಳಿ ಹೋಬಳಗಳಲ್ಲಿ ಅಧಿಕವಾಗಿರುತ್ತದೆ. ಈ ಯೋಜನೆಯಡಿ ಫಲಾನುಭವಿಗಳ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದರೂ ಅಧಿಕಾರಿಗಳು ಮಾಹಿತಿ ನೀಡಿರುವುದಿಲ್ಲ. ಇದರಿಂದ ಈ ಯೋಜನೆಗಳಲ್ಲಿ ಅಕ್ರಮವಾಗಿರುವ ಬಗ್ಗೆ ನಮ್ಮ ಗಮನಕ್ಕೆ ಕಂಡುಬಂದಿರುತ್ತದೆ. ಆದರೂ ಅಕ್ರಮ ಫಲಾನುಭವಿಗಳ ದಾಖಲೆಗಳನ್ನು ನಮ್ಮ ಬಳ ಲಭ್ಯವಿದ್ದು, ತಾಲೂಕಾಡಳಿತ ಕೇಳಿದರೆ ನೀಡಲು ಬದ್ಧನಾಗಿದ್ದೇನೆ. ಗಂಗಾವತಿ ತಾಲೂಕಿನಾಧ್ಯಂತ ನಡೆದಿರುವ ಈ ರೀತಿಯ ತೊಟ್ಟಿ ದಾಖಲೆಗಳ ಮೂಲಕ ವೃದ್ದಾಪ್ಯ ವೇತನ ಪಡೆಯುವ ಫಲಾನುಭವಿಗಳನ್ನು ಪರಿಶೀಲಿಸಬೇಕು. ಈ ಕೃತ್ಯದಲ್ಲಿ ಭಾಗಿಯಾಗಿರುವ ತಹಶೀಲ್ದಾರರು ಹಾಗೂ ಕಂದಾಯ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಿ ಅಧಿಕಾರಿಗಳನ್ನು ಹುದ್ದೆಯಿಂದ ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಲಾಗಿದೆ ಎಂದರು. ಒಂದು ವೇಳೆ ನಮ್ಮ ಈ ಮನವಿಯನ್ನು ಪರಿಗಣಿಸದೇ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸದೇ ಹೋದಲ್ಲಿ ಈ ಅಕ್ರಮವನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಎಚ್ಚರಿಸಿದ್ದಾರೆ.