Thondithevarappa fair held with great pomp

ವರದಿ ಸೋಮಶೇಖರಯ್ಯ ಸ್ವಾಮಿ ಹಿರೇಮಠ ಕನಕಗಿರಿ
ಕನಕಗಿರಿ: ಪಟ್ಟಣದ ಐತಿಹಾಸಿಕ ತೊಂಡಿತೇವರಪ್ಪ(ಕಂಠಿರಂಗ) ದೇವರ ಜಾತ್ರೆ ಶ್ರಾವಣದ ಕೊನೆಯ ಶನಿವಾರ ಶ್ರದ್ಧಾ-ಭಕ್ತಿಯಿಂದ ನಡೆಯಿತು.
ಬೆಳಿಗ್ಗೆಯಿಂದ ಹನುಮಂತ ಮೂರ್ತಿಗೆ ರುದ್ರಾಭಿಷೇಕ, ವಿಶೇಷ ಪೂಜೆ, ಸಹಸ್ರ ನಾಮಾವಳಿ, ವಿಶೇಷ ಅಲಂಕಾರ, ಮಂಗಳಾರತಿ, ನೈವೇದ್ಯ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.
ನಂತರ ಸಂಜೆ ದೇವಸ್ಥಾನದ ರಾಜಬೀದಿಯಲ್ಲಿ ಅದ್ದೂರಿಯಾಗಿ ಶ್ರೀ ತೊಂಡಿತೇವರಪ್ಪಸ್ವಾಮಿಯ ರಥೋತ್ಸವ ನಡೆಯಿತು ಭವ್ಯ ರಥದಲ್ಲಿ ಶ್ರೀ ಆಂಜನೇಯನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು ಹಾಗೂ ರಥ ಸಾಗುವಾಗ ರಥದ ಮುಂದೆ ವಿವಿಧ ಭಜನಾ ಮಂಡಳಿಯಿಂದ ಭಜನಾ ಪದಗಳು ಹಾಗೂ ವಾದ್ಯ ಬಾಜಾ ಭಜಂತ್ರಿ ಯವರಿಂದ ವಾದ್ಯಗಳು ಮೊಳಗಿದವು. ಕನಕಗಿರಿ ಸೇರಿದಂತೆ ಕೊಪ್ಪಳ, ಕಾರಟಗಿ, ಗಂಗಾವತಿ, ಕೊಪ್ಪಳ, ಹೇರೂರು, ತಾವರಗೇರಾ ಹಾಗೂ ಕನಕಗಿರಿಯ ಸುತ್ತ ಮುತ್ತಲಿನ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ದೇವಸ್ಥಾನದ ಸಮಿತಿಯಿಂದ ನಡೆಯಿತು. ಜಾತ್ರೆಗೆ ಆಗಮಿಸಿದ್ದ ಭಕ್ತರು ಪಕ್ಕದ ವಿಶಾಲ ವಾದ ಮೈದಾನದಲ್ಲಿ ಹಾಗೂ ಅಕ್ಕ ಪಕ್ಕದ ಹೋಲಗಳಲ್ಲಿ ಕುಳಿತು , ಮಂಡಕ್ಕಿ ಮಿರ್ಚಿ ಸವಿಯುತ್ತಿರುವುದು ಕಂಡುಬಂತು.
ಪ್ರಮುಖರಾದ ಗಂಗಾಧರಸ್ವಾಮಿ, ಸಣ್ಣ ಕನಕಪ್ಪ, ಪ.ಪಂ.ಉಪಾದಕ್ಷ ಕಂಠಿರಂಗ ನಾಯಕ, ಪ್ರಕಾಶ ಹಾದಿಮನಿ, ಪ.ಪಂ.ಸದಸ್ಯ ಶರಣೇಗೌಡ ಮಾ.ಪಾ. ರವಿ ಪಾಟೀಲ್, ಮಹಾಂತೇಶ ಸಜ್ಜನ, ಶರಣಪ್ಪ ಭಾವಿಕಟ್ಟಿ ವೀರೇಶ್ ವಸ್ತ್ರದ್, ವೀರೇಶಪ್ಪ ಸಮಗಂಡಿ, ರವಿ ಭಜಂತ್ರಿ, ಅರುಣ ಭೂಸನೂರಮಠ, ಅನಿಲ್ ಬಿಜ್ಜಳ, ಶರಣಬಸಪ್ಪ ಭತ್ತದ, ಗುರುಸಿದ್ದಪ್ಪ ಹಾದಿಮನಿ, ವಾಗೀಶ ಹಿರೇಮಠ, ಪ್ರಶಾಂತ ತೆಗ್ಗಿನಮನಿ, ರವೀಂದ್ರ ಸಜ್ಜನ, ಶೇಖರಪ್ಪ ಭಾವಿಕಟ್ಟಿ ಇತರರಿದ್ದರು.