Preeti Purohita achieves distinction in Bharatanatyam senior exam

ಗಂಗಾವತಿ:ಇತ್ತೀಚಿಗೆ ಬಳ್ಳಾರಿಯಲ್ಲಿ ಜರುಗಿದ ಭರತನಾಟ್ಯ ಸೀನಿಯರ್ ಪರೀಕ್ಷೆಯಲ್ಲಿ ಪ್ರೀತಿ ವೆಂಕಟೇಶ ಪುರೋಹಿತ ಕಿನ್ನಾಳ ಇವರು ಡಿಸ್ಟಿಂಕ್ಷನ್ (ಶೇ.88) ನಲ್ಲಿ ತೇರ್ಗಡೆಯಾಗಿದ್ದಾರೆ. ಗಂಗಾವತಿ ನಗರದ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಪ್ರಥಮ ವರ್ಷ( ವಿಜ್ಞಾನ)ದಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರೀತಿ ಪುರೋಹಿತ ಅವರು ಭರತ ನಾಟ್ಯ ಹೊಸಪೇಟೆಯ ನಾಟ್ಯನಾಧ ಕಲಾ ಕೇಂದ್ರದ ಮುಖ್ಯಸ್ಥೆ ಶಾಲಿನಿ ಹೆಬ್ಬಾರ ಬಳಿ ತರಬೇತಿ ಶಿಕ್ಷಣ ಪಡೆದಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭರತ ನಾಟ್ಯ ಕಾರ್ಯಕ್ರಮ ನೀಡಿದ್ದ ಪ್ರೀತಿಯವರಿಗೆ ತಾಯಿ ಪದ್ಮಾ ವೆಂಕಟೇಶ ಪುರೋಹಿತ ಅವರು ಮಾರ್ಗದರ್ಶಕರಾಗಿದ್ದರು.