Inspection of PMGSY works from August 22

ಸಾಂದರ್ಭಿಕ ಚಿತ್ರ
ಕೊಪ್ಪಳ ಆಗಸ್ಟ್ 21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ವ್ಯಾಪ್ತಿಗೆ ಬರುವ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಹಂತ-3ರ ಬ್ಯಾಚ್-1 ಮತ್ತು ಬ್ಯಾಚ್-2 ಯೋಜನೆಯಡಿಯಲ್ಲಿ ಮಂಜೂರಾದ ಪ್ರಗತಿಯಲ್ಲಿರುವ ಕಾಮಗಾರಿಗಳು ಹಾಗೂ ನಿರ್ವಹಣೆ ಹಂತದಲ್ಲಿರುವ ಕಾಮಗಾರಿಗಳನ್ನು ರಾಷ್ಟ್ರೀಯ ಗುಣನಿಯಂತ್ರಣ ಅಧಿಕಾರಿ (ಎನ್.ಕ್ಯೂ.ಎಂ) ಬಿನಯ ಕುಮಾರ ಸಿನ್ಹಾ ಅವರು ಆಗಸ್ಟ್ 22 ರಿಂದ ಆ.26 ರವರೆಗೆ ಪರಿವೀಕ್ಷಣೆ ಕೈಗೊಳ್ಳಲಿದ್ದಾರೆ ಎಂದು ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಕೊಪ್ಪಳ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.